ಹೊಸಪೇಟೆ (ಬಳ್ಳಾರಿ): ಹೊರವಲಯದಲ್ಲಿ ಸ್ಥಾಪಿತಗೊಂಡಿರುವ ಗುಂಡಾ ಸಸ್ಯೋದ್ಯಾನ ವನಕ್ಕೆ ಕೊರೊರಾ ಕರಿ ನೆರಳು ಆವರಿಸಿದೆ. ಪ್ರತಿವರ್ಷ ಪ್ರವಾಸಿಗರಿಂದ ತಂಬಿರುತ್ತಿದ್ದ ಸಸ್ಯೋದ್ಯಾನ ಈ ವರ್ಷ ಖಾಲಿಯಾಗಿದೆ.
ಮಾರ್ಚ್ 22ರಂದು ಜನತಾ ಕರ್ಫ್ಯೂ ಘೋಷಣೆ ಮಾಡಲಾಯಿತು. ಅಲ್ಲಿಂದ ಆಗಸ್ಟ್ 16ರ ವರೆಗೆ ಪ್ರವಾಸಿಗರಿಗೆ ಪ್ರವೇಶವನ್ನು ನಿಷೇಧಿಸಲಾಗಿತ್ತು. ಮಾರ್ಚ್ನಲ್ಲಿ 8 ದಿನ, ಏಪ್ರಿಲ್, ಮೇ, ಜೂನ್, ಜುಲೈ, ಆಗಸ್ಟ್ 16ರ ವರೆಗೂ ಸಾರ್ವಜನಿಕರಿಗೆ ಅವಕಾಶವನ್ನು ನೀಡಿರಲಿಲ್ಲ. ಆದರೆ ಕಳೆದ ವರ್ಷಕ್ಕೆ ಹೋಲಿಸಿದರೇ ಸುಮಾರು 20 ಸಾವಿರ ಪ್ರವಾಸಿಗರು ಭೇಟಿ ನೀಡಿದ್ದರು. ಆದರೆ, ಈ ಬಾರಿ ಕೊರೊನಾದಿಂದ ಪ್ರವಾಸಿಗರ ಪ್ರಮಾಣ ಇಳಿಕೆಯಾಗಿದ್ದು, ಅಂದಾಜು 2 ಲಕ್ಷ ರೂ. ಆದಾಯಕ್ಕೆ ಹೊಡೆತ ಬಿದ್ದಿದೆ.
2019 ರಂದು ಏಪ್ರಿಲ್ರಂದು-1,699 ಪ್ರವಾಸಿಗರು, ಮೇ-1,396, ಜೂನ್-1,628, ಜುಲೈ-2,648, ಆಗಸ್ಟ್-12,804, ಸೆಪ್ಟೆಂಬರ್-5,599, ಅಕ್ಟೋಬರ್-4,064, ನವೆಂಬರ್-2,679, ಡಿಸೆಂಬರ್-3,409, ಜನವರಿ-4,125, ಪೆಬ್ರವರಿ-2,808, ಮಾರ್ಚ್-21ರ ವೆರೆಗೆ 1,932 ಪ್ರವಾಸಿಗರು ಭೇಟಿ ನೀಡಿದ್ದರು.
ಈ ವರ್ಷ ಗುಂಡಾ ಸಸ್ಯೋದ್ಯಾನ ವನ ನೋಡಲು ಆಗಸ್ಟ್ರಿಂದ ಪ್ರವಾಸಿಗರಿಗೆ ಅವಕಾಶ ಕಲ್ಪಿಸಲಾಗಿದೆ. ಇಲ್ಲಿವರೆಗೂ 5,500 ಪ್ರವಾಸಿಗರು ಭೇಟಿ ನೀಡಿದ್ದಾರೆ. ಕೊರೊನಾ ಹೊಡೆತಕ್ಕೆ ಸಸ್ಯೋದ್ಯಾನ ವನದತ್ತ ಮುಖ ಮಾಡದೆ ಉದ್ಯಾನ ಖಾಲಿಯಾಗಿದೆ.
ಇನ್ನೂ ಪ್ರವಾಸಿಗರಿಂದ ಬಂದಂತಹ ಹಣವನ್ನು ಸಸ್ಯೋದ್ಯಾನ ನಿರ್ವಹಣೆ, ಅಭಿವೃದ್ಧಿ ಹಾಗೂ ರಾಜಾಪುರದ ಗ್ರಾಮದ ಅಭಿವೃದ್ಧಿ ಬಳಸಿಕೊಳ್ಳಲಾಗುತ್ತಿದೆ. ತುಂಗಭದ್ರಾ ಹಿನ್ನೀರನ್ನು ಬಳಸಿಕೊಂಡು ಬೋಟ್ ಪ್ರಾರಂಭಿಸುವ ಆಲೋಚನೆ ಇದೆ.
ಈಗಾಗಲೇ ಹಿರಿಯ ಅಧಿಕಾರಿಗಳಿಗೆ ಪ್ರಾಸ್ತಾವನೆ ಸಲ್ಲಿಸಲಾಗಿದೆ. ಫಿಷ್ ಅಕ್ವೇರಿಯಂ ನಿರ್ಮಾಣ ಹಂತದಲ್ಲಿದೆ. ಮಕ್ಕಳ ಆಟೋಪಕರಣಗಳು ಇವೆ. ವಿಶ್ರಾಂತಿ ಹಾಗೂ ಊಟ ಮಾಡಲು ನಾಲ್ಕು ಪ್ಯಾರಾಗೋಲ್ ನಿರ್ಮಿಸಲಾಗಿದೆ. 12 ವರ್ಷದ ಕೆಳಗಿನವರಿಗೆ ಉಚಿತ ಹಾಗೂ ಹಿರಿಯರಿಗೆ 10 ರೂ. ಪ್ರವೇಶ ಶುಲ್ಕ ನಿಗದಿ ಮಾಡಲಾಗಿದೆ.
ಈಟಿವಿ ಭಾರತದೊಂದಿಗೆ ಹೊಸಪೇಟೆಯ ಉಪವಲಯ ಅರಣ್ಯಾಧಿಕಾರಿ ಜಿ.ಶಿವುಕುಮಾರ ಅವರು ಮಾತನಾಡಿ, ಕಳೆದ ವರ್ಷ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದರು. ಆದರೆ, ಈ ಬಾರಿ ಕೊರೊನಾದಿಂದ ಪ್ರವಾಸಿಗರ ಪ್ರವೇಶಕ್ಕೆ ಅವಕಾಶವನ್ನು ಕಲ್ಪಿಸಿಲ್ಲ. ಹೀಗಾಗಿ 2 ಲಕ್ಷ ರೂಪಾಯಿ ಆದಾಯಕ್ಕೆ ಹೊಡೆತ ಬಿದ್ದಿದೆ ಎಂದಿದ್ದಾರೆ.