ETV Bharat / state

ಇಂದು ನಮ್ಮ ನಾಯಕರೇ ನಮಗೇ ತೊಂದರೆ ಕೊಡುತ್ತಿದ್ದಾರೆ.. ಗಾಲಿ ಜನಾರ್ದನ ರೆಡ್ಡಿ ಅಸಮಾಧಾನ

ಹಿಂದೆ ನಮಗೆ ಕಾಂಗ್ರೆಸ್ ನಾಯಕರು ಹೆಚ್ಚು ತೊಂದರೆ ಕೊಟ್ಟಿದ್ದರು. ಆದರೆ ಈಗ, ನಮ್ಮ ನಾಯಕರು ಕೂಡ ನನಗೆ ತೊಂದರೆ ಕೊಡುತ್ತಿದ್ದಾರೆ ಎಂದು ಗಾಲಿ ಜನಾರ್ದನ ರೆಡ್ಡಿ ಸ್ವಪಕ್ಷಿಯರ ವಿರುದ್ಧವೇ ಗಂಭೀರ ಆರೋಪ ಮಾಡಿದ್ದಾರೆ.

gali-janardhan-reddy-slams-bjp
ಇಂದು ನಮ್ಮ ನಾಯಕರೇ ನಮಗೇ ತೊಂದರೆ ಕೊಡುತ್ತಿದ್ದಾರೆ : ಗಾಲಿ ಜನಾರ್ಧನ ರೆಡ್ಡಿ ಅಸಮಾಧಾನ
author img

By

Published : Oct 30, 2022, 8:21 PM IST

ಬಳ್ಳಾರಿ: ಒಂದು ಕಾಲದಲ್ಲಿ ಗಣಿನಾಡಿನಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸಿ ಅಧಿಕಾರಕ್ಕೆ ತಂದ ರೆಡ್ಡಿ ಸಹೋದರರು ಇಂದು ಅದೇ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ. ನಮಗೆ ಕಾಂಗ್ರೆಸ್ ನಾಯಕರು ಹೆಚ್ಚು ತೊಂದರೆ ಕೊಟ್ಟಿದ್ದರು. ಆದರೆ ಈಗ, ನಮ್ಮ ನಾಯಕರು ಕೂಡ ನನಗೆ ತೊಂದರೆ ಕೊಡುತ್ತಿದ್ದಾರೆ ಎಂದು ಗಾಲಿ ಜನಾರ್ದನ ರೆಡ್ಡಿ ಬಿಜೆಪಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

ನಗರದ ಈದ್ಗಾ ಮೈದಾನದಲ್ಲಿ ಹಮ್ಮಿಕೊಂಡಿದ್ದ ಮುಸ್ಲಿಂ ಪ್ರೀಮಿಯರ್​ ಲೀಗ್​ ಕ್ರಿಕೆಟ್​ ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ನನ್ನ ರಾಜಕೀಯ ಜೀವನ ಮುಂದೆ ಹೇಗಿರತ್ತದೆ ಎಂಬುದು ನನಗೆ ಗೊತ್ತಿಲ್ಲ. ನಾನು ಬೆಳೆಸಿದ ಪಕ್ಷದವರೇ ನನಗೆ ಸಾಕಷ್ಟು ಕಷ್ಟ ಕೊಡುತ್ತಿದ್ದಾರೆ. ಕಾಂಗ್ರೆಸ್​ನವರು ಕಷ್ಟ ಕೊಟ್ಟಿದ್ದಾರೆ. ಆದ್ರೆ ಬಿಜೆಪಿಯವರು ನನಗೆ ಹೆಚ್ಚಿನ ಕಷ್ಟ ಕೊಡುತ್ತಿದ್ದಾರೆ ಎಂದು ಆರೋಪಿಸಿದರು.

ನಾನು ನವೆಂಬರ್ 6ರ ಬಳಿಕ ಬಳ್ಳಾರಿಯಲ್ಲಿ ಇರುವಂತಿಲ್ಲ. ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆ, ನ.6ರ ಬಳಿಕ ಬಳ್ಳಾರಿ ಬಿಡಬೇಕು. ಆದರೆ ನಾನು ಬಳ್ಳಾರಿ ಬಿಟ್ಟು ಬೆಂಗಳೂರಿಗೆ ಹೋಗಲ್ಲ. ಇಲ್ಲೇ ಆಸುಪಾಸಿನಲ್ಲಿ ಇರುತ್ತೇನೆ. ಮುಂದಿನ ದಿನಗಳಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳುತ್ತೇನೆ ಎನ್ನುವ ಮೂಲಕ ರಾಜಕೀಯ ನಡೆ ಕುರಿತು ಕುತೂಹಲ ಮೂಡಿಸಿದರು.

ಗಾಲಿ ಜನಾರ್ದನ ರೆಡ್ಡಿ ಅಸಮಾಧಾನ

ಅಲ್ಲದೇ ‌ಗಾಲಿ ಸೋಮಶೇಖರ್ ರೆಡ್ಡಿ, ಮುಸ್ಲಿಮರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದರು. ಆದರೆ ಆಗ ಅವರು, ಹೇಳಿಕೆ ನೀಡಲು ಕಾರಣ ಬೇರೆ ಇದೆ. ಅವರು ಅಂದು ಹೇಳಿಕೆ ನೀಡಿ ಕ್ಷಮೆ ಕೂಡಾ ಕೇಳಿದ್ದರು. ಆದರೆ ಹಾಗೆ ಹೇಳಿಕೆ ನೀಡಿದ್ದರ ಹಿಂದೆ ಕಾಣದ ಕೈಗಳು ಇದ್ದು, ಅವರು ಹೇಳಿದ ಹಾಗೆ ರೆಡ್ಡಿ ಹೇಳಿಕೆ ನೀಡಿದ್ದಾರೆ ಎಂದು ಹೇಳಿದರು. ಮುಂದಿನ ದಿನದಲ್ಲಿ ಈ ರೀತಿ ಹೇಳಿಕೆ ನೀಡುವಂತೆ ಯಾರು ಹೇಳಿದ್ದರು ಎಂಬುದನ್ನು ಕೂಡ ಬಹಿರಂಗ ಪಡಿಸುವುದಾಗಿ ಹೇಳಿದರು.

ಒಟ್ಟಿನಲ್ಲಿ ರೆಡ್ಡಿ ಸಹೋದರರು ತಾವು ಕಟ್ಟಿ ಬೆಳೆಸಿದ ಪಕ್ಷದ ವಿರುದ್ಧವೇ ಅಸಮಾಧಾನ ವ್ಯಕ್ತಪಡಿಸಿದ್ದು, ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಈ ಎಲ್ಲ ಬೆಳವಣಿಗೆಗಳು ಗಾಲಿ ಜನಾರ್ದನ್ ರೆಡ್ಡಿಯ ಮುಂದಿನ ರಾಜಕೀಯ ನಡೆಯ ಬಗ್ಗೆ ಸಾಕಷ್ಟು ಕುತೂಹಲ ಕೆರಳಿಸಿದೆ.

ಇದನ್ನೂ ಓದಿ : ಇಸ್ರೋ ಮಾಜಿ ಅಧ್ಯಕ್ಷ ಕೆ ಸಿವನ್, ನಟ ದತ್ತಣ್ಣ‌, ಸಾಹಿತಿ ಕೃಷ್ಣೇಗೌಡ ಸೇರಿ 67 ಗಣ್ಯರಿಗೆ ರಾಜ್ಯೋತ್ಸವ ಪ್ರಶಸ್ತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.