ETV Bharat / state

ಕ್ರಿಯಾ ಯೋಜನೆಯಡಿ ಗಣಿನಾಡಿಗೆ ₹25 ಅನುದಾನ..- ಸಂಸದ ವಿ.ಎಸ್ ಉಗ್ರಪ್ಪ - Bellary

ಕ್ರಿಯಾ ಯೋಜನೆಯ ಅಡಿಯಲ್ಲಿ ಗಡಿನಾಡಿಗೆ 25 ಕೋಟಿ, ವಿಮ್ಸ್​ಗೆ 3 ಕೋಟಿ, ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ 3 ಕೋಟಿ, ಹಂಪಿ ಅಭಿವೃದ್ಧಿಗೆ 3 ಕೋಟಿ, ಹೂವಿನ ಹಡಗಲಿಯಲ್ಲಿ ಕೆರೆಗಳ ನಿರ್ಮಾಣಕ್ಕೆ 4 ಕೋಟಿ ಅನುದಾನ ನೀಡಲಾಗಿದೆ ಎಂದು ಸಂಸದ ವಿ.ಎಸ್ ಉಗ್ರಪ್ಪ ಹೇಳಿದ್ದಾರೆ.

ವಿ.ಎಸ್ ಉಗ್ರಪ್ಪ
author img

By

Published : Mar 30, 2019, 10:21 AM IST

ಬಳ್ಳಾರಿ : ಕ್ರಿಯಾ ಯೋಜನೆಯ ಅಡಿಯಲ್ಲಿ ಗಣಿನಾಡು ಬಳ್ಳಾರಿಗೆ 25 ಕೋಟಿ ರೂ. ಅನುದಾನವನ್ನು ಬಳ್ಳಾರಿ ಜಿಲ್ಲಾಡಳಿತ ಬಿಡುಗಡೆ ಮಾಡಿದೆ ಎಂದು ಬಳ್ಳಾರಿ ಲೋಕಸಭಾ ಅಭ್ಯರ್ಥಿ ವಿ.ಎಸ್ ಉಗ್ರಪ್ಪ ತಿಳಿಸಿದರು.

ನಗರದ ಹೊರವಲಯದ ಗುಗ್ಗುರಟ್ಟಿಯ ಹೊಸ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕ್ರಿಯಾ ಯೋಜನೆಯ ಅಡಿಯಲ್ಲಿ ಗಡಿನಾಡಿಗೆ 25 ಕೋಟಿ, ವಿಮ್ಸ್​ಗೆ 3 ಕೋಟಿ, ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ 3 ಕೋಟಿ, ಹಂಪಿ ಅಭಿವೃದ್ಧಿಗೆ 3 ಕೋಟಿ, ಹೂವಿನ ಹಡಗಲಿಯಲ್ಲಿ ಕೆರೆಗಳ ನಿರ್ಮಾಣಕ್ಕೆ 4 ಕೋಟಿ, ಕೂಡ್ಲಿಗಿಯಲ್ಲಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಗೆ 3 ಕೋಟಿ ರೂ. ಅನುದಾನವನ್ನು ನೀಡಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ ಎಂದರು.

ಕ್ರಿಯಾ ಯೋಜನೆಯಡಿ ಬಳ್ಳಾರಿಗೆ 25 ಅನುದಾನ : ವಿ.ಎಸ್ ಉಗ್ರಪ್ಪ

ಏಪ್ರಿಲ್ 2 ಕ್ಕೆ ನಾಮಪತ್ರ ಸಲ್ಲಿಕೆ :

ಏಪ್ರಿಲ್ 2 ಮಂಗಳವಾರ ಬೆಳಿಗ್ಗೆ ತಾಯಿ ಶ್ರೀ ಕನಕದುರ್ಗಮ್ಮ ದೇವಿಯ ಆಶೀರ್ವಾದ ಪಡೆದು ಅಲ್ಲಿಂದ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿ ಪ್ರವೇಶ ಮಾಡಿ ಮಧ್ಯಾಹ್ನ 12 ಗಂಟೆಗೆ ನಾಮಪತ್ರ ಸಲ್ಲಿಸುತ್ತೇವೆ ಅಂತಾ ಇದೇ ವೇಳೆ ವಿ.ಎಸ್ ಉಗ್ರಪ್ಪ ಹೇಳಿದರು.

ಈ ಸಮಯದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ಮಂತ್ರಿಗಳು, ಸಂಸದರು ಆಗಮಿಸುತ್ತಾರೆ. ಪಕ್ಷದ ಹಿರಿಯ ನಾಯಕರು, ಮುಖಂಡರು, ಕಾರ್ಯಕರ್ತರ ಸಮ್ಮುಖದಲ್ಲಿ ನಾಮಪತ್ರ ಸಲ್ಲಿಸುತ್ತೇನೆ ಎಂದು ತಿಳಿಸಿದರು.

ಕರ್ನಾಟಕದಲ್ಲಿ ಬಿಜೆಪಿ ಪಕ್ಷ ಗೋಡೆ ಬರಹಕ್ಕೆ ಸೀಮಿತವಾಗಿದೆ. ಪ್ಯಾರಾ ಮಿಲಿಟರ್ ಪಡೆಯನ್ನು ಬಳಸಿಕೊಂಡು ರಾಜ್ಯದಲ್ಲಿ ತೆರಿಗೆ ಇಲಾಖೆ ಕಾರ್ಯವನ್ನು ನಿರ್ವಹಿಸುತ್ತದೆ. ಈ ತೆರಿಗೆ ಇಲಾಖೆ ಕಾಂಗ್ರೆಸ್ ಮತ್ತು ಜನತಾದಳ ಪಕ್ಷದ ರಾಜಕೀಯ ವ್ಯಕ್ತಿಗಳ ಮೇಲೆ ದಾಳಿ ಮಾಡುತ್ತದೆ. ಆದರೆ, ಮಹಾರಾಷ್ಟ್ರ, ಗುಜರಾತ್​, ಹಿಮಾಚಲ ಪ್ರದೇಶದಲ್ಲಿ ಏಕೆ ತೆರಿಗೆ ಇಲಾಖೆ ದಾಳಿ ಮಾಡುತ್ತಿಲ್ಲ ಎಂದು ಪ್ರಶ್ನಿಸಿದರು.

Intro:ಕ್ರಿಯಾ ಯೋಜನೆಗೆಯ ಅಡಿಯಲ್ಲಿ ಗಣಿನಾಡಿಗೆ 25 ಕೋಟಿ ಅನುದಾನವನ್ನು ಬಳ್ಳಾರಿ ಜಿಲ್ಲಾಡಳಿತ ಬಿಡುಗಡೆ ಎಂದು ಬಳ್ಳಾರಿ ಲೋಕಸಭಾ ಅಭ್ಯರ್ಥಿ ವಿ.ಎಸ್ ಉಗ್ರಪ್ಪ ತಿಳಿಸಿದರು.

Body:ನಗರದ ಹೊರವಲಯದ ಗುಗ್ಗುರಟ್ಟಿಯ ಹೊಸ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕ್ರಿಯಾ ಯೋಜನೆಗೆ ಜಿಲ್ಲಾಡಳಿತ ನೀಡುವ ಉದ್ದೇಶದಿಂದ 25 ಕೋಟಿ ಹಣವನ್ನು ವಿಮ್ಸ್ ಗೆ 3 ಕೋಟಿ, ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ 3 ಕೋಟಿ, ಹಂಪಿ ಅಭಿವೃದ್ಧಿ 3 ಕೋಟಿ,
ಹೂವಿನ ಹಡಗಲಿಯಲ್ಲಿ ಕೆರೆಗಳ ನಿರ್ಮಾಣಕ್ಕೆ 4 ಕೋಟಿ, ಕೂಡ್ಲಿಗಿಯಲ್ಲಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಗೆ 3 ಕೋಟಿ ಈ ಒಂದು ವರ್ಷದ ಅನುದಾನವನ್ನು ನೀಡಿದೆ ಎಂದು ಜಿಲ್ಲಾಡಳಿತ ಹಣವನ್ನು ಬಿಡುಗಡೆ ಮಾಡಿದೆ ಎಂದರು. ಅದನ್ನು ಅಭಿವೃದ್ಧಿ ಗಾಗಿ ಬಳಸಿಕೊಳ್ಳಲಾಗಿದೆ. ಮುಂದೆ ಸಿಗುವ ಅನುದಾನವನ್ನು ಮುಂದಿನ ದಿನಗಳಲ್ಲೊ ಬಳಸಿಕೊಳ್ಳಲಾಗುತ್ತದೆ ಎಂದು ವಿ.ಎಸ್ ಉಗ್ರಪ್ಪ ತಿಳಿಸಿದರು.

ಏಪ್ರಿಲ್ 2 ನಾಮಪತ್ರ ಸಲ್ಲಿಕೆ:

ಏಪ್ರಿಲ್ 2 ಮಂಗಳವಾರ ಬೆಳಿಗ್ಗೆ ತಾಯಿ ಶ್ರಿ ಕನಕದುರ್ಗಮ್ಮ ದೇವಿಯ ಆರ್ಶಿವಾದ ಪಡೆದು ಅಲ್ಲಿಂದ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿ ಪ್ರವೇಶ ಮಾಡಿ ಮಧ್ಯಾಹ್ನ 12 ಗಂಟೆಗೆ ನಾಮಪತ್ರ ಸಲ್ಲಿಸುತ್ತೇವೆ ಎಂದು ವಿ.ಎಸ್ ಉಗ್ರಪ್ಪ ತಿಳಿಸಿದರು.

ಈ ಸಮಯದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ, ಶಾಸಕರು, ಮಂತ್ರಿಗಳು, ಸಂಸದರು ಆಗಮಿಸುತ್ತಾರೆ. ಪಕ್ಷದ ಹಿರಿಯ ನಾಯಕರ, ಮುಖಂಡರು, ಕಾರ್ಯಕರ್ತರಿಂದ ಸಂಮುಖದಲ್ಲಿ ಬಂದು ನಾಮಪತ್ರ ಸಲ್ಲಿಸುತ್ತನೆ ಎಂದು ತಿಳಿಸಿದರು.

ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡಿ ಪ್ರಧಾನಿಮಂತ್ರಿ:

ಸಾಟಿಲೈಟ್ ಮಿಷಲ್ ಸಂಭಂದಿಸಿದಂತೆ ಪ್ರಧಾನಮಂತ್ರಿ ಅವರ ತರಾತುರಿಯಲ್ಲಿ ಪ್ರೆಸ್ ಕಾನ್ಪ್ರೇನ್ ಕರೆದು ನೀತಿ ಸಂಹಿತೆ ವಿರುದ್ಧವಾಗಿ ಮಾಡಿದಾಗ ಚುನಾವಣಾ ಅಧಿಕಾರಿಗಳು ಅದಕ್ಕೆ ತನಿಖೆ ಮಾಡುವ ಕೆಲಸವನ್ನು ಮಾಡತ್ತಾರೆ. ಅವರಿಗೆ ಬೆಂಬಲವನ್ನು ತೋರಿತಿಲ್ಲ ಎಂದು ಹೇಳಿದರು.

ಗೋಡೆ ಬರಹಕ್ಕೆ ಬಿಜೆಪಿ ನಿಂತಿದೆ:
ಕರ್ನಾಟಕದಲ್ಲಿ ಬಿಜೆಪಿ ಪಕ್ಷದ ಗೋಡೆ ಬರಹಕ್ಕೆ ಸೀಮಿತವಾಗಿದೆ ಎಂದರು. ಈ ಕಾರಣದಿಂದಲೇ ತೆರಿಗೆ ಇಲಾಖೆ ಅಧಿಕಾರಿಗಳನ್ನು ಬಳಕೆ ಮಾಡಿಕೊಂಡು. ಆಯಾಯಾ ರಾಜ್ಯದ ಪೊಲೀಸ್ ರನ್ನು ಬಳಸುತ್ತಿದ್ದರು. ಆದ್ರೇ ಪ್ಯಾರಾ ಮಿಲಿಟರ್ ಪಡೆಯನ್ನು ಕರೆದುಕೊಂಡು ಕರ್ನಾಟಕ ರಾಜ್ಯದಲ್ಲಿ ಬಳಸಿಕೊಂಡು ತೆರಿಗೆ ಇಲಾಖೆ ಕಾರ್ಯವನ್ನು ನಿರ್ವಹಿಸುತ್ತದೆ. ಅದು ಕಾಂಗ್ರೇಸ್ ಮತ್ತು ಜನಾತದಳ ಪಕ್ಷದ ರಾಜಕೀಯ ವ್ಯಕ್ತಿಗಳ ಮೇಲೆ ತೆರಿಗೆ ಇಲಾಖೆ ದಾಳಿ ಮಾಡುತ್ತದೆ ಎಂದರು‌ ಆದ್ರೇ ಮಹಾರಾಷ್ಟ್ರ, ಗುಜರಾತ, ಹಿಮಾಚಲ ಪ್ರದೇಶ ದಲ್ಲಿ ಏಕೆ ? ತೆರಿಗೆ ಇಲಾಖೆ ದಾಳಿ ಮಾಡುತ್ತಿಲ್ಲ ಎಂದು ಪ್ರಶ್ನೆಯನ್ನು ವಿ.ಎಸ್ ಉಗ್ರಪ್ಪ ಮಾಡಿದರು.

Conclusion:ಒಟ್ಟಾರೆಯಾಗಿ ಈ ಸುದ್ದಿ ಗೋಷ್ಟಿ ಯಲ್ಲಿ ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷ ಎಂ.ಡಿ ರಫೀಕ್, ಟಪಾಲ್ ಗಣೇಶ್, ಕಲ್ಲುಕಂಬ ಪಂಪಾಪತಿ ಇನ್ನಿತರ ಕಾಂಗ್ರೇಸ್ ಹಿರಿಯ ಮುಖಂಡರು, ಕಾರ್ಯಕರ್ತರು ಹಾಜರಿದ್ದರು.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.