ETV Bharat / state

ಮಾವಿನ ಮರವೇರಿದ ಗಾಲಿ ಜನಾರ್ದನ ರೆಡ್ಡಿ... ವಿಡಿಯೋ ವೈರಲ್​​ - undefined

ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರು ಮಾವಿನ ತೋಟವೊಂದರಲ್ಲಿ ಮಾವಿನ ಕಾಯಿ ಕೀಳಲು ಹರಸಾಹಸ ಪಡುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಫುಲ್​ ವೈರಲ್​ ಆಗಿದೆ.

ಮಾವಿನ ಮರವೇರಿದ ಜರ್ನಾದರೆಡ್ಡಿ
author img

By

Published : May 21, 2019, 12:20 PM IST

Updated : May 21, 2019, 1:10 PM IST

ಬಳ್ಳಾರಿ: ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಯಾವುದೋ ಮಾವಿನ ತೋಟದಲ್ಲಿ ಮಾವಿನ ಮರವೇರಲು ಹರಸಾಹಸ ಪಡುತ್ತಿರುವ ವಿಡಿಯೋವೊಂದು ಫುಲ್​ ವೈರಲ್​​ ಆಗಿದೆ.

ಮಾವಿನ ಮರವೇರಿದ ಜರ್ನಾದರೆಡ್ಡಿ

ತಮ್ಮ ಎರಡೂ ಕಾಲುಗಳನ್ನು ಮಾವಿನ ಮರದ ಕೊಂಬೆಗಳ ಮೇಲೆ ತ್ರಿಕೋನಾಕಾರದಲ್ಲಿಟ್ಟು ಹಿಂದಿನಿಂದ ಮರದ ಮೇಲಿನ ಕೊಂಬೆಯನ್ನ ಹಿಡಿಯುತ್ತಾರೆ.‌ ಅದೇ ಕೊಂಬೆಯ ಆಸರೆಯಿಂದ ಎರಡು ಕೈಗಳ ಸಹಾಯದೊಂದಿಗೆ ಮೇಲೆದ್ದು, ಸ್ವಲ್ವ ಮುಂದುಗಡೆ ಬಂದು ಕೊಂಬೆಯೊಂದರಲ್ಲಿದ್ದ ಮಾವಿನ ಕಾಯಿ ಕೀಳುತ್ತಾರೆ. ನಂತರ ನಿಧಾನವಾಗಿ ತ್ರಿಕೋನಾಕಾರದ ಕೊಂಬೆಯತ್ತ ರೆಡ್ಡಿ ಧಾವಿಸಿ, ಕೆಳಗಡೆ ನಿಂತಿದ್ದ ತಮ್ಮ ಪತ್ನಿ ಅರುಣಾಲಕ್ಷ್ಮಿಯವರ ಕೈಗೆ‌ ಮಾವಿನ ಕಾಯಿಯನ್ನು ಕೊಡುವ ಮುಖೇನ ನಸುನಗುತ್ತಿರುವ ವಿಡಿಯೋ ತುಣುಕೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.‌

  • " class="align-text-top noRightClick twitterSection" data="">

ಅವರು‌ ಮಾವಿನ ಮರ ಏರಿರುವುದು ಎಲ್ಲಿ? ಯಾವಾಗ? ಎಂಬುದು ಮಾತ್ರ ನಿಗೂಢವಾಗಿದೆ. ನಾಡಿದ್ದು ಲೋಕಸಭಾ ಚುನಾವಣಾ ಫಲಿತಾಂಶ ಪ್ರಕಟಗೊಳ್ಳುವ ಹೊಸ್ತಿಲಲ್ಲಿ ರೆಡ್ಡಿ ಮಾತ್ರ ರಾಜಕಾರಣವನ್ನೇ ಮರೆತು ಹಾಯಾಗಿ ತೋಟದಲ್ಲಿ ಮಾವಿನ ಮರ ಏರುವ ಮೂಲಕ‌ ವಿಶೇಷ ಗಮನ ಸೆಳೆದಿದ್ದಾರೆ.‌

Intro:ಸವಿಸವಿ ನೆನಪು…ಸಾವಿರ ನೆನಪು…ಎದೆಯಾಳದಲಿ ಬಚ್ಚಿಕೊಂಡಿರುವ ಹಚ್ಚಳಿಯದ ನೂರೊಂದು‌ ನೆನಪು…
ಮಾವಿನ ಗಿಡವೇರಿದ ಮಾಜಿ ಸಚಿವ ಗಾಲಿ ಜರ್ನಾದರೆಡ್ಡಿ!
ಬಳ್ಳಾರಿ: ಸವಿಸವಿ ನೆನಪು…ಸಾವಿರ ನೆನಪು..ಎದೆಯಾಳದಲಿ ಬಚ್ಚಿಕೊಂಡಿರುವ ಹಚ್ಚಳಿಯದ ನೂರೊಂದು ನೆನಪು…
ಹೌದು, ಇದು ಕನ್ನಡ ಸಿನಿಮಾವೊಂದರಲ್ಲಿನ ಹಾಡು. ನೀವೆಲ್ಲ ಕೇಳಿದ್ದೀರಿ.‌ ಇದೀಗ ಮಾಜಿ ಸಚಿವ ಗಾಲಿ ಜರ್ನಾದನ ರೆಡ್ಡಿಯವರು ತೋಟವೊಂದರಲ್ಲಿನ ಮಾವಿನ‌ ಗಿಡವೇರಿ ಕುಳಿತ ಸಂದರ್ಭ ಈ ಹಾಡು ಫುಲ್ ಟ್ರೋಲ್ ಆಗಿದೆ. ಬಾಲ್ಯದ ಜೀವನದಲ್ಲಿನ ಮರ ಕೋತಿಯಾಟವನ್ನ ಈ ಹಾಡಿನ‌ ಮುಖೇನ ನೆನಪಿಸಿಕೊಂಡಿದ್ದಾರೆ.
ಒಂದು ಕಾಲದಲ್ಲಿ ರಾಜಕಾರಣವೆಂದರೆ ಮಾಜಿ ಸಚಿವ ಗಾಲಿ ಜರ್ನಾದನರೆಡ್ಡಿಯವರ ಸುತ್ತಲೂ ಗಿರಕಿ ಹೊಡೆಯುತ್ತಿತ್ತು. ಗಣಿ ಅಕ್ರಮದ ಆರೋಪದ ಹಿನ್ನಲೆಯಲ್ಲಿ ಇಡೀ ರಾಜಕಾರಣವೇ ಅವರಿಂದ ದೂರಾಯಿತು. ಹೀಗ ಅವರು ಗಣಿ ಅಕ್ರಮದ ವಿಚಾರಣೆ ಎದುರಿಸುತ್ತಲೇ ಬೆಂಗಳೂರಿನ ಯಾವುದೋ ಅಜ್ಞಾತ ಸ್ಥಳವೊಂದರಲ್ಲಿನ ಮಾವಿನ ತೋಟದಲಿ ಮಾವಿನ ಮರವೇರಲು ಹರ
ಸಾಹಸಪಡುತ್ತಿದ್ದಾರೆ.
Body:ತಮ್ಮ ಎರಡೂ ಕಾಲುಗಳನ್ನೂ ಮಾವಿನ ಮರದ ತ್ರಿಕೋನಾಕಾರದ ಕೊಂಬೆಗಳ ಮೇಲಿಟ್ಟುಕೊಂಡು‌ ಹಿಂದಿನಿಂದ ಮರದ ಮೇಲಿನ ಕೊಂಬೆಯನ್ನ ಹಿಡಿಯುತ್ತಾರೆ.‌ ಅದೇ ಕೊಂಬೆಯ ಆಸರೆಯಿಂದ ಎರಡು ಕೈಗಳ ಸಹಾಯದೊಂದಿಗೆ ಮೇಲೆದ್ದು, ಸ್ವಲ್ವ ಮುಂದುಗಡೆ ಬಂದು ಕೊಂಬೆಯೊಂದರಲ್ಲಿದ್ದ ಮಾವಿನಕಾಯಿಯನ್ನು‌ ಕಿತ್ತು ಕೊಂಡು ನಿಧಾನವಾಗಿ ತ್ರಿಕೋನಾಕಾರದ ಕೊಂಬೆಯತ್ತ ರೆಡ್ಡಿ ಧಾವಿಸಿ, ಕೆಳಗಡೆ ನಿಂತಿದ್ದ ತಮ್ಮ ಪತ್ನಿ ಅರುಣಾಲಕ್ಷ್ಮಿಯವರ ಕೈಗೆ‌ ಕೊಡುವ ಮುಖೇನ ನಸುನಗುತ್ತಿರುವ ವಿಡಿಯೊ ತುಣುಕೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.‌ ಅವರು‌ ಮಾವಿನ ಮರ ಏರಿರುವುದು ಎಲ್ಲಿ? ಯಾವಾಗ? ಎಂಬಂಶ ಮಾತ್ರ ನಿಗೂಢ.
ನಾಡಿದ್ದು, ಲೋಕಸಭಾ ಚುನಾವಣಾ ಫಲಿತಾಂಶ ಪ್ರಕಟಗೊಳ್ಳುವ ಹೊಸ್ತಿಲಲ್ಲಿ ರೆಡ್ಡಿಯವರು ರಾಜಕಾರಣವನ್ನೇ ಮರೆತು ಹಾಯಾಗಿ ತೋಟದಲ್ಲಿ ಮಾವಿನ ಮರ ಏರುವ ಮೂಲಕ‌ ವಿಶೇಷ ಗಮನ ಸೆಳೆದಿದ್ದಾರೆ.‌

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.

Conclusion:KN_BLY_01_21_EX_MINISTER_G.JANRDANA_REDY_VIDEO_TROLL_7203310
Last Updated : May 21, 2019, 1:10 PM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.