ಬಳ್ಳಾರಿ: ಪ್ರತ್ಯೇಕ ವಿಜಯನಗರ ಜಿಲ್ಲೆ ರಚನೆ ಖಂಡಿತಾ ಆಗುತ್ತದೆ ಎಂದು ಶಾಸಕ ಆನಂದಸಿಂಗ್ ವಿಶ್ವಾಸ ವ್ಯಕ್ತಪಡಿಸಿದ್ರು.
ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಉಜ್ಜನಿ ಸದ್ಧರ್ಮ ಪೀಠದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲಿ ಭಾಗವಹಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ವಿಜಯನಗರ ಜಿಲ್ಲೆಯ ರಚನೆ ವಿಚಾರವಾಗಿ ಈಗಾಗಲೇ ಮುಖ್ಯಮಂತ್ರಿ ಬಿಎಸ್ವೈ ನೇತೃತ್ವದಲ್ಲಿ ಚರ್ಚಿಸಲಾಗಿದೆ. ಈಗ ಮತ್ತೊಮ್ಮೆ ಪ್ರತ್ಯೇಕ ಜಿಲ್ಲೆಯ ರಚನೆ ಬಗ್ಗೆ ಹಂಪಿ ಉತ್ಸವದ ಮುಖ್ಯ ವೇದಿಕೆಯಲಿದ್ದ ಸಿಎಂ ಬಿಎಸ್ ವೈ ಸಮಕ್ಷಮದಲ್ಲಿಯೇ ಪ್ರಸ್ತಾಪಿಸಿರುವೆ. ನೋಡೋಣ ಮುಂದೇನಾಗುತ್ತೆ ಎಂದರು.
ನನಗಂತೂ ಖಾತ್ರಿಯಿದೆ. ವಿಜಯನಗರ ಜಿಲ್ಲೆ ರಚನೆಯಾಗುತ್ತೆ. ಈ ಹಿನ್ನೆಲೆ ನಾನು ಆಶಾಭಾವನೆ ಹೊಂದಿರುವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.