ಬಳ್ಳಾರಿ: ಬೆಂಗಳೂರು ರಸ್ತೆಯಲ್ಲಿರುವ ಕೈಗಾರಿಕಾ ಘಟಕಗಳಲ್ಲಿ ಆಗಾಗ್ಗೆ ಸಂಭವಿಸುವ ಅಗ್ನಿ ಅವಘಡಗಳ ನಿಯಂತ್ರಣಕ್ಕೆ ಮುಂಜಾಗ್ರತಾ ಕ್ರಮಗಳನ್ನೇ ತೆಗೆದುಕೊಂಡಿಲ್ಲ. ಅದನ್ನು ನಿಯಂತ್ರಿಸಲು ಅಗ್ನಿಶಾಮಕ ದಳದ ಸಿಬ್ಬಂದಿ ಪಡಬಾರದ ಕಷ್ಟ ಪಡುತ್ತಾರೆ.
ನಗರದ ಕುಮಾರಸ್ವಾಮಿ ದೇಗುಲದ ರಸ್ತೆಯಲ್ಲಿರುವ ಅಗ್ನಿ ಶಾಮಕ ಕಚೇರಿಯಿಂದ ಕೈಗಾರಿಕಾ ಪ್ರದೇಶ ಐದು ಕಿಲೋಮೀಟರ್ ದೂರವಿದೆ. ಅಲ್ಲಿಗೆ ಹೋಗುವುದರೊಳಗೆ ಸಂಭವಿಸಿರುವ ಅವಘಡ ಪೂರ್ಣ ಪ್ರಮಾಣದಲ್ಲಿ ಹಬ್ಬಿಕೊಂಡಿರುತ್ತದೆ. ಅಂತಹ ಸಾಕಷ್ಟು ಉದಾಹರಣೆಗಳು ನಮ್ಮ ಮುಂದಿವೆ.
ಇದನ್ನೂ ಓದಿ...ಹಳ್ಳಿ ತೀರ್ಪು : 91,339 ಸ್ಥಾನಗಳ ಪೈಕಿ 54,041ರ ಫಲಿತಾಂಶ ಘೋಷಣೆ
ಕಾಟನ್ ಘಟಕಗಳಲ್ಲೇ ಹೆಚ್ಚು ಅವಘಡ: ಕಾಟನ್ ಕೈಗಾರಿಕಾ ಘಟಕಗಳಲ್ಲೇ ಇಂತಹ ಅಗ್ನಿ ಅವಘಡಗಳು ಹೆಚ್ಚೆಚ್ಚು ಕಂಡುಬರುತ್ತಿವೆ. ಇಷ್ಟಾದರೂ ಯಾವುದೇ ರೀತಿಯ ಮುಂಜಾಗ್ರತಾ ಕ್ರಮ ಕೈಗೊಂಡಿಲ್ಲ ಎಂಬುದಕ್ಕೆ ಅವಘಡಗಳು ಸಂಭವಿಸುತ್ತಿರುವುದಕ್ಕೇ ಸಾಕ್ಷಿ. ಅಗ್ನಿ ಶಾಮಕದಳ ಇಲಾಖೆಯಲ್ಲಿ ನಿರ್ದಿಷ್ಟ ಮಾರ್ಗಸೂಚಿ ಹಾಗೂ ಆದೇಶದ ಪ್ರತಿಯೂ ಕೂಡ ಇಲ್ಲ.
ರಾಜ್ಯದ ಕೆಲವು ಜಿಲ್ಲೆಗಳಲ್ಲಿನ ಆಕಸ್ಮಿಕ ಅಗ್ನಿ ಅವಘಡಗಳನ್ನು ತಪ್ಪಿಸಲು ಹಲವಾರು ಕ್ರಮಗಳನ್ನು ಕೈಗೊಂಡಿವೆ. ಕೊರೊನಾ ನಂತರ ಚೇತರಿಕೆ ಕಾಣುವುದೇ ಕಷ್ಟವಾಗುವ ಸಮಯದಲ್ಲಿ ನೌಕರರ ಸುರಕ್ಷತೆಗೂ ಕೂಡಾ ಸ್ವಲ್ಪಮಟ್ಟಿನ ಗಮನವನ್ನು ಉದ್ಯಮಗಳು ನೀಡಬೇಕಿವೆ. ಸರ್ಕಾರವೂ ಕೂಡಾ ಕೈಗಾರಿಕೆಗಳ ರಕ್ಷಣೆಗೆ ಬೇಕಾದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕಿದೆ.