ಹೊಸಪೇಟೆ: ಕೊರೊನಾ ಸೋಕಿಂತರಿಗೆ ಉಚಿತ ಹಾಗೂ ಗುಣಮಟ್ಟ ಚಿಕಿತ್ಸೆ ನೀಡಲು ಆಗ್ರಹಿಸಿ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಶನ್(ಡಿ.ವೈ.ಎಫ್.ಐ) ತಾಲೂಕು ಸಮಿತಿ ಕಾರ್ಯಕರ್ತರು ಇಂದು ನಗರದ ತಾಲೂಕು ವೈದ್ಯಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜನರ ಆರೋಗ್ಯದ ವಿಚಾರವಾಗಿ ನಿರ್ಲಕ್ಷ ಧೋರಣೆಯನ್ನು ತಾಳಿವೆ. ಈ ಕಾರಣದಿಂದಾಗಿ ಕೊರೊನಾ ವೈರಸ್ ಭಾರತದಲ್ಲಿ ವ್ಯಾಪಕವಾಗಿ ಹರಡುತ್ತಿದೆ. ಆರೋಗ್ಯ ಕ್ಷೇತ್ರವನ್ನು ಖಾಸಗೀಕರಣ ಮಾಡುವ ಪ್ರಕ್ರಿಯೇ ಜನರನ್ನು ಸಾವಿನ ಹಂಚಿಕೆ ತಳ್ಳುವ ನೀತಿಯಾಗಿದೆ ಎಂದು ಕಿಡಿಕಾರಿದರು.
ಖಾಸಗೀಕರಣದ ಭಾಗವಾಗಿ ಜನರಿಗೆ ಉಚಿತವಾಗಿ ಸಿಗಬೇಕಾದ ಚಿಕಿತ್ಸೆಯು ಇಂದು ಸಾವಿರಾರು,ಲಕ್ಷಾಂತರ ರೂಪಾಯಿಗಳನ್ನು ಕೊಟ್ಟು ಪಡೆಯುವ ಪರಿಸ್ಥಿತಿಗೆ ಬಂದಿದ್ದೇವೆ. ಉದಾರೀಕರಣ ಮತ್ತು ಜಾಗತೀಕರಣವನ್ನು ಅಪ್ಪಿಕೊಂಡ ಮೇಲೆ ನಮ್ಮನ್ನಾಳುವ ಸರ್ಕಾರಗಳು ಆರ‍್ಯೋಗವನ್ನು ಸೇವಾ ವಲಯದಿಂದ ತೆಗೆದು ಹಾಕಿರುವುದು ಯಾವ ನ್ಯಾಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಮುಖಂಡರಾದ ಬಿಸಾಟಿ ಮಹೇಶ, ಸ್ವಾಮಿ, ಈ.ಮಂಜುನಾಥ, ಕಲ್ಯಾಣಯ್ಯ ಇನ್ನಿತರರಿದ್ದರು.