ETV Bharat / state

ಬಳ್ಳಾರಿ ರೈಲ್ವೆ ನಿಲ್ದಾಣದಲ್ಲಿ ಲಿಫ್ಟ್​​ಗಳಿಲ್ಲದೆ ಅಂಗವಿಕಲರು, ಹಿರಿಯ ನಾಗರಿಕರ ಪರದಾಟ - ಮೂಲಭೂತ ಸೌಲಭ್ಯಗಳ ಕೊರತೆ

ಬಳ್ಳಾರಿ ಜಿಲ್ಲೆಯ ರೈಲ್ವೆ ನಿಲ್ದಾಣದಲ್ಲಿ ಲಿಫ್ಟ್​​ಗಳಿಲ್ಲದೇ ಅಂಗವಿಕಲರು, ಹಿರಿಯ ನಾಗರಿಕರು ಪರದಾಡುವ ಸ್ಥಿತಿ ಬಂದೋದಗಿದೆ. ಪ್ರತಿನಿತ್ಯ 7,500 ರಿಂದ 10,000 ಸಾವಿರ ಜನರು ಪ್ರಯಾಣ ಮಾಡುತ್ತಾರೆ. ಆದ್ರೆ ಇಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ ಎದ್ದು ಕಾಣುತ್ತಿದೆ.

Disabled, senior citizens suffer without lifts
ಲಿಫ್ಟ್​​ಗಳಿಲ್ಲದೇ ಅಂಗವಿಕಲರು, ಹಿರಿಯ ನಾಗರೀಕರ ಪರದಾಟ
author img

By

Published : Nov 26, 2019, 10:13 AM IST

ಬಳ್ಳಾರಿ: ಜಿಲ್ಲೆಯ ರೈಲ್ವೆ ನಿಲ್ದಾಣದಲ್ಲಿ ಲಿಫ್ಟ್​​ಗಳಿಲ್ಲದೇ ಅಂಗವಿಕಲರು, ಹಿರಿಯ ನಾಗರಿಕರು ಪರದಾಡುವ ಸ್ಥಿತಿ ಬಂದೋದಗಿದೆ. ಒಂದೇ ಫ್ಲೈ ಓವರ್​​ನಲ್ಲಿ ಎಲ್ಲ ಪ್ರಯಾಣಿಕರು ಸಂಚರಿಸಬೇಕಾಗಿದೆ.

ಗಣಿನಾಡು ಬಳ್ಳಾರಿಯ ರೈಲ್ವೆ ನಿಲ್ದಾಣದಿಂದ ಪ್ರತಿನಿತ್ಯ 7,500 ರಿಂದ 10,000 ಸಾವಿರ ಜನರು ಪ್ರಯಾಣ ಮಾಡುತ್ತಾರೆ. ಆದ್ರೆ ಇಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ ಇದೆ.

ಸ್ವಯಂಚಾಲಿತ ಲಿಫ್ಟ್​​​ಗಳಿಲ್ಲ:

ಈಟಿವಿ ಭಾರತದೊಂದಿಗೆ ಮಾತನಾಡಿದ ಪ್ರಯಾಣಿಕ ಶಶಿಧರ್ ಬಳ್ಳಾರಿ ರೈಲ್ವೆ ನಿಲ್ದಾಣದ ಫ್ಲಾಟ್ ಫಾರಂ 1 ರಿಂದ 2 ಮತ್ತು 3ರ ಪ್ಲಾಟ್ ಫಾರಂ ಹೋಗಲು ಅಂಗವಿಕಲರಿಗೆ, ಹಿರಿಯ ನಾಗರಿಕರಿಗೆ ಸ್ವಯಂಚಾಲಿತ ಲಿಫ್ಟ್​​ಗಳಿಲ್ಲ. ಇದರಿಂದ ಆ ಜೀವಗಳಿಗೆ ತೊಂದರೆಯಾಗುತ್ತಿದೆ. ಜೊತೆಗೆ ಮೇಲ್ ಸೇತುವೆ ಒಂದೇ ಕಡೆಯಾಗಿರುವುದರಿಂದ ಒಟ್ಟಿಗೆ ಸೇತುವೆ ಮೇಲೆ ಬರುವವರು ಹಾಗೂ ಹೋಗುವ ಪ್ರಯಾಣಿಕರಿಗೆ ಸಮಸ್ಯೆಯಾಗುತ್ತಿದೆ ಎಂದರು.

ಲಿಫ್ಟ್​​ಗಳಿಲ್ಲದೇ ಅಂಗವಿಕಲರು, ಹಿರಿಯ ನಾಗರಿಕರ ಪರದಾಟ

ಬಳ್ಳಾರಿ‌ ರೈಲ್ವೆ ನಿಲ್ದಾಣದಲ್ಲಿ ಕೇಂದ್ರ ಸರ್ಕಾರ ಕಡೆಯಿಂದ ನೇಮಕಾತಿ ಯಾದವರು ಒಟ್ಟು 52 ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ.‌ ಅದು ಸಾಕಾಗುವುದಿಲ್ಲ ಎನ್ನುವ ಮಾಹಿತಿ ಇದೆ. ಕೆಲಸ ಹೆಚ್ಚಾಗಿದೆ ಹಾಗೆ ಮಾಡಿಕೊಂಡು ಹೋಗುತ್ತಿದ್ದೇವೆ ಎನ್ನುವ ಮಾಹಿತಿ ಅಧಿಕಾರಿಗಳಿಂದ ಬಂದಿದೆ.

ನಿಲ್ದಾಣದಲ್ಲಿ ಮೂರು ವೀಲ್ ಚೇರ್​ಗಳಿವೆ:

ಅಂಗವಿಕಲರಿಗೆ, ಹಿರಿಯ ನಾಗರಿಕರಿಗೆ ನಡೆಯಲು ಆಗದಿದ್ದರೇ ವೀಲ್ ಚೇರ್ ಬಳಸಬಹುದು. ಬಳ್ಳಾರಿ ರೈಲ್ವೆ ನಿಲ್ದಾಣದಲ್ಲಿ ಮೂರು ವೀಲ್ ಚೇರ್​ಗಳಿವೆ ಅದನ್ನು ಟಿಕೆಟ್ ಕಲೆಕ್ಟರ್ ಕೊಠಡಿಯಲ್ಲಿ ಇರುತ್ತದೆ. ಅದನ್ನು ಯಾರ ಬೇಕಾದ್ರೂ ಬಳಸಿಬಹುದು ಎಂದರು.

ಕ್ಯಾಂಟೀನ್​​ಗಳಿಗೆ ಯಾವುದೇ ನಾಮಫಲಕ ಅಳವಡಿಸಿಲ್ಲ. ಪ್ರಯಾಣಿಕರು ತಿನ್ನುವ ತಿಂಡಿ, ಕಾಫಿ, ಟೀ, ಆಹಾರ ಇನ್ನಿತರ ವಸ್ತುಗಳ ಬೆಲೆಯನ್ನು ಹೆಚ್ಚಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ರೈಲ್ವೆ ಇಲಾಖೆಯಿಂದ ಸಿಬ್ಬಂದಿ ನೇಮಿಸಿ ಸಾರ್ವಜನಿಕರಿಗೆ ಉಚಿತ ಶೌಚಾಲಯ ವ್ಯವಸ್ಥೆ ಕಲ್ಪಿಸಿಕೊಡಬೇಕಾಗಿದೆ. ಇನ್ನು ಕಂಟೋನ್ಮೆಂಟ್ ನಿಲ್ದಾಣ ಪುಂಡಯುವಕರ ಓಪನ್ ಬಾರ್ ಅಂಡ್ ರೆಸ್ಟೋರೆಂಟ್ ಆಗಿದೆ.

Intro:ಬಳ್ಳಾರಿ ರೈಲ್ವೆ ನಿಲ್ದಾಣದಲ್ಲಿ ಲಿಫ್ಟ್ ಗಳಿಲ್ಲದೇ ಅಂಗವಿಕಲರು, ಹಿರಿಯ ನಾಗರೀಕ ಜೀವಿಗಳು ಪರಿದಾಡುವ ಸ್ಥಿತಿ,ಒಂದೇ ಪ್ಲೇ ಓವರ್ ಪ್ರಯಾಣಿಕರ ಪರದಾಡುವ ಸ್ಥಿತಿ, ಇದಕ್ಕೆ ಮುಕ್ತಿ ಯಾವಾಗ ?

Body:ಗಣಿನಾಡು ಬಳ್ಳಾರಿಯ ರೈಲ್ವೆ ನಿಲ್ದಾಣದಿಂದ
ಪ್ರತಿನಿತ್ಯ 7500 ರಿಂದ 10,000 ಸಾವಿರ ಜನರು ಪ್ರಯಾಣ ಮಾಡುತ್ತಾರೆ. ಆದ್ರೇ ಇಲ್ಲಿನ ಮೂಲಭೂತ ಸೌಲಭ್ಯಗಳ ಹೇಗಿದೆ ? ಇಲ್ಲಿಯ ಪರಿಸ್ಥಿತಿ ಹೇಗಿದೆ ? ಎನ್ನುವ ಮಾಹಿತಿ ತಿಳಿಯೋಣ.

ಸ್ವಯಂಚಾಲಿತ ಲಿಫ್ಟ್ ಗಳಿಲ್ಲ :-

ಈಟಿವಿ ಭಾರತ್ ನೊಂದಿಗೆ ಮಾತನಾಡಿದ ಪ್ರಯಾಣಿಕ ಶಶಿಧರ್ ಬಳ್ಳಾರಿ ರೈಲ್ವೆ ನಿಲ್ದಾಣದ ಫ್ಲಾಟ್ ಫಾರಂ 1 ರಿಂದ 2 ಮತ್ತು 3ರ ಪ್ಲಾಟ್ ಫಾರಂ ಹೋಗಲು ಅಂಗವಿಕಲರಿಗೆ, ಹಿರಿಯ ನಾಗರೀಕರಿಗೆ ಸ್ವಯಂಚಾಲಿತ ಲಿಫ್ಟ್ ಗಳಿಲ್ಲ ಇದರಿಂದ ಆ ಜೀವಗಳಿಗೆ ತೊಂದರೆಯಾಗುತ್ತಿದೆ. ಜೊತೆಗೆ ಮೇಲ್ ಸೇತುವೆ ಒಂದೇ ಕಡೆಯಾಗಿರುವುದರಿಂದ ಒಟ್ಟಿಗೆ ಸೇತುವೆ ಮೇಲೆ ಬರುವವರು - ಹೋಗುವ ಪ್ರಯಾಣಿಕರಿಗೆ ಸಮಸ್ಯೆಯಾಗುತ್ತದೆ ಎಂದು

ಬಳ್ಳಾರಿ ರೈಲ್ವೆ ನಿಲ್ದಾಣದ ಸಿಬ್ಬಂದಿಗಳು :-

ಬಳ್ಳಾರಿ‌ ರೈಲ್ವೆ ನಿಲ್ದಾಣದಲ್ಲಿ ಕೇಂದ್ರ ಸರ್ಕಾರ ಕಡೆಯಿಂದ ನೇಮಕಾತಿ ಯಾದವರು ಒಟ್ಟು 52 ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ.‌ ಅದು ಸಾಕಾಗುವುದಿಲ್ಲ ಎನ್ನುವ ಮಾಹಿತಿ ಇದೆ. ಕೆಲಸ ಹೆಚ್ಚಾಗಿದೆ ಹಾಗೇ ಮಾಡಿಕೊಂಡು ಹೋಗುತ್ತಿದ್ದೆವೆ ಎನ್ನುವ ಮಾಹಿತಿ ಅಧಿಕಾರಿಗಳಿಂದ ಬಂದಿದೆ.

ನಿಲ್ದಾಣದಲ್ಲಿ ಮೂರು ವಿಲ್ ಚೇರ್ ಗಳಿವೆ :-

ಅಂಗವಿಕಲರಿಗೆ, ಹಿರಿಯ ನಾಗರೀಕರಿಗೆ ನಡೆಯಲು ಆಗದಿದ್ದರೇ ವಿಲ್ ಚೇರ್ ಬಳಸಬಹುದು, ಬಳ್ಳಾರಿ ರೈಲ್ವೆ ನಿಲ್ದಾಣದಲ್ಲಿ ಮೂರು ವಿಲ್ ಚೇರ್ ಗಳಿವೆ ಅದನ್ನು ಟಿಕೆಟ್ ಕಲೆಟರ್ ಕೊಠಡಿಯಲ್ಲಿ ಇರುತ್ತದೆ. ಅದನ್ನು ಯಾರ ಬೇಕಾದ್ರೂ ಬಳಸಿಬಹುದು ಎಂದರು.

ಕ್ಯಾಂಟೀನ್ ಗಳಿಗೆ ನಾಮಫಲಕ ಹಾಕಿಲ್ಲ :

ಪ್ರಯಾಣಿಕರು ತಿನ್ನುವ ತಿಂಡಿ, ಕಾಫಿ, ಟೀ, ಆಹಾರ ಇನ್ನಿತರ ವಸ್ತುಗಳ ಬೆಲೆಗಳ ನಾಮ ಫಲಕವನ್ನು ಪ್ರಯಾಣಿ ಮಾಡುವ ಗ್ರಾಹಕರಿಗೆ ಕಾಣುವಂತೆ ಹಾಕಿಲ್ಲ ಜೊತೆಗೆ ಪ್ರತಿಯೊಂದು ಪರ್ದಾರ್ಥಕ್ಕೆ 5 ರಿಂದ 10 ರೂಪಾಯಿ ಹೆಚ್ಚಾಗಿ ಗ್ರಾಹಕರಿಂದ ಪಡೆಯುತ್ತಾರೆ. ಜನರಿಗೂ ಮೋಸ ಮಾಡ್ತಾರೆ. ಇದಕ್ಕೆ ಯಾವುದೇ ಸೂಕ್ತಕ್ರಮತೆಗೆದುಕೊಳ್ಳದ ಅಧಿಕಾರಿಗಳು.‌

ರೈಲ್ವೆ ಇಲಾಖೆಯಿಂದ ಸಿಬ್ಬಂದಿ ನೇಮಿಸಿ ಸಾರ್ವಜನಿಕರಿಗೆ ಉಚಿತ ಶೌಚಾಲಯ ವ್ಯವಸ್ಥೆ ಮಾಡಿ :-

ನಿಲ್ದಾಣದ ಹೊರಗಡೆ ಒಂದು ಮತ್ತು ಒಳಗಡೆ ಒಂದು ಸಾರ್ವಜನಿಕ ಶೌಚಾಲಯ ಇದೆ. ಆದ್ರೇ ಒಳಗಿನ ಶೌಚಾಲಯಕ್ಕೆ ಟೆಂಡರ್ ಪ್ರಕ್ರಿಯೆ ಪಡೆದವರಿಗೆ ಪ್ರತಿನಿತ್ಯ 1400 - 1500 ರೂಪಾಯಿ ಆದ್ರೆ ಅನುಕೂಲವಾಗುತ್ತೆ ಎನ್ನುವ ಮಾಹಿತಿ, ಅಷ್ಟು ಹಣ ಆಗಲ್ಲ, ಹಾಗಾಗಿ ಯಾರು ಸಹ ಟೆಂಡರಗೆ ಬರಲ್ಲ, ಅದರ ಬದಲಿಗೆ ರೈಲ್ವೆ ಇಲಾಖೆಯೇ ಸಿಬ್ಬಂದಿಗಳನ್ನು ನೇಮಕ ಮಾಡಿ ಉಚಿತ ಶೌಚಾಲಯ ನಿರ್ವಹಣೆ ಮಾಡಿದರೇ ಪ್ರಯಾಣಿಕರಿಗೆ ಅನುಕೂಲಕರವಾಗುತ್ತದೆ.

ಕಂಟೋನ್ಮೆಂಟ್ ನಿಲ್ದಾಣ ಪುಂಡಯುವಕರ ಓಪನ್ ಬಾರ್ ಅಂಡ್ ರೆಸ್ಟೋರೆಂಟ್ :-

ಬಳ್ಳಾರಿ ಕಂಟೋನ್ಮೆಂಟ್ ರೈಲ್ವೆ ನಿಲ್ದಾಣ ಕುಡುಕರ ತಾಣವಾಗಿದೆ. ಪ್ರತಿನಿತ್ಯ ಸಂಜೆಯಾದರೇ ಸಾಕು ಈ‌ ನಿಲ್ದಾಣದಲ್ಲಿ ಕೆಲಪುಂಡ ಯುವಕರು ಈ ನಿಲ್ದಾಣವನ್ನು ಓಪನ್ ಬಾರ್ ಅಂಡ್ ರೆಸ್ಟೋರೆಂಟ್ ಮಾಡಿಕೊಂಡಿದ್ದಾರೆ. ಅದನ್ನು ನೋಡಿ ಕೈಕಟ್ಟಿ ಕುಳಿತ ರೈಲ್ವೆ ಇಲಾಖೆ ಅಧಿಕಾರಿಗಳು. ಇದಕ್ಕೆ ಸೂಕ್ತ ಕ್ರಮ ಯಾವಾಗ ?

Conclusion:ಒಟ್ಟಾರೆಯಾಗಿ ಈ ಸಮಸ್ಯೆಗಳ ಬಗ್ಗೆ ನಗರ ಶಾಸಕ ‌ಸೋಮಶೇಖರ್ ರೆಡ್ಡಿ ಪಿಎ ಮತ್ತು ಸಂಸದ ವೈ.ದೇವೆಂದ್ರಪ್ಪರಿಗೆ ಇಲ್ಲಿಯ ಸಮಸ್ಯೆಯನ್ನು ತಿಳಿಸಿದ್ದೆವೆ ಎಂದು ಬಳ್ಳಾರಿ ಜಿಲ್ಲೆಯ ವ್ಯವಸ್ಥಾಪನ ಬಿ.ಶೇಷಾದ್ರಿ ಮತ್ತು ಕಮಸಿಯಲ್ ಇನ್ಸ್ಪೆಕ್ಟರ್ ಮಲ್ಲಿಕಾರ್ಜುನ DYsmr(c) ಮಾಹಿತಿ ತಿಳಿಸಿದರು.
ಅದಷ್ಟು ಬೇಗ ಪ್ರಯಾಣಿಕರಿಗೆ ಸೌಲಭ್ಯಗಳು ದೊರೆಯಲಿ ಎನ್ನುವುದು ಈಟಿವಿ ಭಾರತ ಆಶಯ.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.