ಬಳ್ಳಾರಿ: ಜಿಲ್ಲೆಯ ಕುಡತಿನಿ ಪಟ್ಟಣದ ಆರಾಧ್ಯ ದೈವ ಆಂಜನೇಯ ಸ್ವಾಮಿ ರಥೋತ್ಸವದಲ್ಲಿ ತೇರಿನ ಗಾಲಿಗೆ ಸಿಲುಕಿ ವ್ಯಕ್ತಿಯೊಬ್ಬರ ಕಾಲು ಸಂಪೂರ್ಣ ತುಂಡಾಗಿದ ಘಟನೆ ಭಾನುವಾರ ಸಂಜೆ ನಡೆದಿದೆ. ಪಟ್ಟಣ ನಿವಾಸಿ ಎ. ಮಾರೇಶ (33) ಎಂಬವರ ಕಾಲು ತುಂಡಾಗಿದೆ. ಸಾವಿರಾರು ಜನರ ಮಧ್ಯೆ ರಥೋತ್ಸವ ಸಾಗುತ್ತಿದ್ದಾಗ ಮಾರೇಶನ ಕಾಲು ಗಾಲಿಗೆ ಸಿಲುಕಿದೆ. ಗಾಯಾಳುವನ್ನು ಕೂಡಲೇ ಬಳ್ಳಾರಿಯ ವಿಮ್ಸ್‌ಗೆ ದಾಖಲಿಸಲಾಗಿದೆ.
ಇದನ್ನೂ ಓದಿ: ವಿಜಯಪುರ: ಗೋಲ್ಲಾಳೇಶ್ವರ, ಬಸವೇಶ್ವರ ರಥೋತ್ಸವದಲ್ಲಿ ಇಬ್ಬರು ಭಕ್ತರ ಸಾವು
ಇಬ್ಬರು ಭಕ್ತರು ಸಾವು: ಇತ್ತೀಚೆಗೆ ವಿಜಯಪುರ ಜಿಲ್ಲೆಯಲ್ಲಿ ರಥೋತ್ಸವದಲ್ಲಿ ಇಬ್ಬರು ಮೃತಪಟ್ಟ ಎರಡು ಪ್ರತೇಕ ಘಟನೆಗಳು ವರದಿಯಾಗಿತ್ತು. ಗೋಲ್ಲಾಳೇಶ್ವರ ಮತ್ತು ಬಸರಕೋಡ ಪವಾಡ ಬಸವೇಶ್ವರ ಜಾತ್ರೆಯ ರಥೋತ್ಸವದ ಅನಾಹುತ ಜರುಗಿತ್ತು.
ಇದನ್ನೂ ಓದಿ: ಬೆಂಗಳೂರು ಕರಗ: ಭಾರಿ ಪ್ರಮಾಣದಲ್ಲಿ ಕರ್ಪೂರ ಹಚ್ಚಿದ ಭಕ್ತರು, 20ಕ್ಕೂ ಹೆಚ್ಚು ವಾಹನಗಳಿಗೆ ಹಾನಿ
ವಿರೂಪಾಕ್ಷೇಶ್ವರ ಬ್ರಹ್ಮರಥೋತ್ಸವ: ದಕ್ಷಿಣದ ಕಾಶಿ ಎಂದೇ ಪ್ರಖ್ಯಾತಗೊಂಡಿರುವ ಹಂಪಿಯಲ್ಲಿ ಶ್ರೀ ವಿರೂಪಾಕ್ಷೇಶ್ವರ ದೇವರ ಬ್ರಹ್ಮರಥೋತ್ಸವ ಇತ್ತೀಚೆಗೆ ಅದ್ದೂರಿಯಾಗಿ ನೆರವೇರಿತು. ರಥೋತ್ಸವಕ್ಕೆ ಅಂದಾಜು ಒಂದು ಲಕ್ಷಕ್ಕೂ ಹೆಚ್ಚು ಜನರು ಸಾಕ್ಷಿಯಾಗಿದ್ದರು. ವಿಜಯನಗರ ಅರಸರ ಕಾಲದ ರತ್ನಖಚಿತ ಸ್ವರ್ಣಮುಖ ಕಿರೀಟದಿಂದ ವಿರೂಪಾಕ್ಷೇಶ್ವರ ಸ್ವಾಮಿಯನ್ನು ಅಲಂಕರಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು. ಶ್ರೀ ಪಂಪಾ ವಿರೂಪಾಕ್ಷ ದೇಗುಲದ ಮುಂಭಾಗದ ತೇರು ಬೀದಿಯಲ್ಲಿ ರಥೋತ್ಸವ ನಡೆಯಿತು. ಹಂಪಿಯ ಕಲ್ಲು ಬಂಡೆಗಳು ಮತ್ತು ತೇರು ಬೀದಿಯಲ್ಲಿ ಸೇರಿದ ಜನರು ರಥೋತ್ಸವ ಕಣ್ತುಂಬಿಕೊಂಡಿದ್ದರು.
ಇದನ್ನೂ ಓದಿ: ಅದ್ಧೂರಿಯಾಗಿ ನೆರವೇರಿದ ಹಂಪಿ ಶ್ರೀ ವಿರೂಪಾಕ್ಷೇಶ್ವರ ಬ್ರಹ್ಮರಥೋತ್ಸವ