ಬಳ್ಳಾರಿ: ದೇಶವ್ಯಾಪಿ ಲಾಕ್ ಡೌನ್ ತೋಟಗಾರಿಕೆ ಬೆಳೆಗಳಿಗೆ ಕುತ್ತು ತಂದಿದೆ. ಈ ಬಾರಿ ಉತ್ತಮ ಇಳುವರಿ ಬಂದರೂ ಕೂಡ ಬೆಳೆಯನ್ನು ಮಾರುಕಟ್ಟೆಗೆ ಸಾಗಿಸಲು ಅವಕಾಶ ಇಲ್ಲದಂತಾಗಿದೆ. ಹೀಗಾಗಿ, ರೈತರು ಆರ್ಥಿಕ ನಷ್ಟ ಎದುರಿಸುತ್ತಿದ್ದಾರೆ.
ಕುರುಗೋಡು ತಾಲೂಕಿನ ಗುಡ್ಡಗಾಡು ಪ್ರದೇಶದ ಇಳಿಜಾರಿನಲ್ಲಿ ರೈತರು ಅಂಜೂರ ಹಾಗೂ ಪಪ್ಪಾಯಿ ಹಣ್ಣು ಸೇರಿದಂತೆ ಇನ್ನಿತರೆ ತೋಟಗಾರಿಕೆ ಬೆಳೆ ಬೆಳೆದಿದ್ದಾರೆ. ಇನ್ನೇನು ತಾವು ಬೆಳೆದ ಬೆಳೆಯನ್ನು ಮಾರುಕಟ್ಟೆಗೆ ಸಾಗಿಸುವ ಕಾಲ ಬಂತಲ್ಲಾ ಅನ್ನುವಷ್ಟರಲ್ಲಿ ಲಾಕ್‌ಡೌನ್ ಘೋಷಣೆ ಆಗಿದ್ದರಿಂದ ಹಣ್ಣಿನ ಮಾರುಕಟ್ಟೆ ಬಂದ್ ಆಗಿದೆ. ಹೀಗಾಗಿ ಅತ್ತ ಮಾರುಕಟ್ಟೆಗೂ ಸಾಗಿಸದೆ ಇತ್ತ ಮನೆಯಲ್ಲೂ ಇಟ್ಟುಕೊಳ್ಳಲಾರದೇ ರೈತರು ಸಂಕಟ ಅನುಭವಿಸುತ್ತಿದ್ದಾರೆ.
ಬಿರು ಬೇಸಿಗೆ ಕಾಲವಾಗಿರುವುದರಿಂದ ಅಂಜೂರ ಮತ್ತು ಪಪ್ಪಾಯಿ ಹಣ್ಣುಗಳು ಗಿಡಗಳಲ್ಲಿಯೇ ಮಾಗಿ ಹಣ್ಣಾಗಿ ಕೊಳೆತು ನೆಲಕ್ಕುರುಳಿ ಬೀಳುತ್ತಿವೆ.