ಬಳ್ಳಾರಿ : ನ್ಯಾಯಬೆಲೆ ಅಂಗಡಿಯಿಂದ ವಿತರಣೆ ಮಾಡಿದ ಗೋಧಿ ಕಳಪೆ ಗುಟ್ಟಮಟ್ಟದಿಂದ ಕೂಡಿದೆ ಎಂದು ನಗರದ ಹೊರವಲಯದ ವಿನಾಯಕ ನಗರದ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸ್ಥಳೀಯ ಯುವಕ ಪ್ರಕಾಶ ಮಾತನಾಡಿ, ನ್ಯಾಯ ಬೆಲೆ ಅಂಗಡಿಗಳಿಂದ ವಿತರಣೆ ಮಾಡಿದ ಗೋಧಿಯಲ್ಲಿ ಹೊಟ್ಟು, ಧೂಳು ಇದೆ. ಅದನ್ನು ದನ ಕೂಡ ತಿನ್ನುವುದಿಲ್ಲ. ಮತ್ತೆ ನಾವು ಹೇಗೆ ತಿನ್ನಬೇಕು. ಇಂತಹ ಗೋಧಿ ತಿನ್ನುವ ಬದಲು ಸಾಯುವುದು ಲೇಸು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಯುವಕ ರವಿ ಕುಮಾರ್ ಮಾತನಾಡಿ, ವಿನಾಯಕ ನಗರದಲ್ಲಿ ಬಡ, ಮಧ್ಯಮ ವರ್ಗದ ಜನ ವಾಸಿಸುತ್ತಿದ್ದೇವೆ. ನಮಗೆ ಯಾವುದೇ ಸೌಲಭ್ಯ ದೊರಕಿಲ್ಲ. ಈ ಬಗ್ಗೆ ಜಿಲ್ಲಾಡಳಿತದ ಕಂಟ್ರೋಲ್ ರೂಮ್‌ಗೆ ದೂರವಾಣಿ ಕರೆ ಮಾತನಾಡಿ ಸಮಸ್ಯೆ ಹೇಳಿದ್ದೇವೆ. ಆದರೂ, ಸರಿಯಾಗಿ ಹಾಲು, ರೇಷನ್ ವಿತರಣೆ ಮಾಡುತ್ತಿಲ್ಲ ಎಂದು ದೂರಿದರು.