ETV Bharat / state

ನಿಲ್ದಾಣದಲ್ಲಿ ಬಸ್ ನಿಲ್ಲಿಸಲಿಲ್ಲ ಎಂದು ಬಸ್​ನಿಂದ ಕೆಳಗೆ ಜಿಗಿದಿದ್ದ ವಿದ್ಯಾರ್ಥಿನಿ ಸಾವು..! - ವಿಜಯನಗರ ಜಿಲ್ಲೆಯ ಹೂವಿನಹಡಗಲಿ

ನಿಲ್ದಾಣದಲ್ಲಿ ಬಸ್ ನಿಲ್ಲಿಸದೇ ಇರುವುದರಿಂದ ಬಸ್​ನಿಂದ ಜಿಗಿದಿದ್ದ ವಿದ್ಯಾರ್ಥಿನಿ ಮೃತಪಟ್ಟ ದಾರುಣ ಘಟನೆ ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನಲ್ಲಿ ಸರ್ಕಾರಿ ಇಂಜನಿಯರಿಂಗ್ ಕಾಲೇಜು ಬಳಿ ನಿನ್ನೆ ಮಧ್ಯಾಹ್ನ ನಡೆದಿದೆ.

Death by jumping from bus
ಬಸ್​ನಿಂದ ಕೆಳಗೆ ಜಿಗಿದಿದ್ದ ವಿದ್ಯಾರ್ಥಿನಿ ಸಾವು
author img

By

Published : Apr 13, 2023, 7:11 PM IST

ಹೂವಿನಹಡಗಲಿ (ವಿಜಯನಗರ): ನಿಲ್ದಾಣದಲ್ಲಿ ನಿಲ್ಲಿಸಬೇಕಾದ ಬಸ್ ನಿಲ್ಲಸದೇ ಇರುವುದಕ್ಕೆ ಬಸ್​ನಿಂದ ಜಿಗಿದಿದ್ದ ವಿದ್ಯಾರ್ಥಿನಿ ಮೃತಪಟ್ಟಿರುವ ದಾರುಣ ಘಟನೆ ತಾಲೂಕಿನಲ್ಲಿ ಸರ್ಕಾರಿ ಇಂಜನಿಯರಿಂಗ್ ಕಾಲೇಜು ಬಳಿ ನಿನ್ನೆ ಮಧ್ಯಾಹ್ನ ನಡೆದಿದೆ. ಇಂಜಿನಿಯರಿಂಗ್ ಕಾಲೇಜಿನ ಇ ಅಂಡ್​​ ಸಿ ವಿಭಾಗದ 1ನೇ ಸೆಮಿಸ್ಟರ್​ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಶ್ವೇತಾ ಸಾವನ್ನಪ್ಪಿದ್ದಾರೆ. ಕಾಲೇಜು ಬಳಿಯ ಬಸ್ ಸ್ಟಾಪ್​ನಲ್ಲಿ ಬಸ್ ನಿಲ್ಲಿಸದೇ ಇರುವ ಪರಿಣಾಮ ಬಸ್​ನಿಂದ ವಿದ್ಯಾರ್ಥಿನಿ ಶ್ವೇತಾ ಜಿಗಿದಿದ್ದರು. ತೀವ್ರವಾಗಿ ಗಾಯಗೊಂಡಿದ್ದ ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಶ್ವೇತಾ ಮೃತಪಟ್ಟಿದ್ದಾರೆ.

ಹಡಗಲಿಯಿಂದ ರಾಣೆಬೆನ್ನೂರಿಗೆ ಪ್ರಯಾಣಿಸುತ್ತಿದ್ದ ಸಾರಿಗೆ ಬಸ್​ನಲ್ಲಿದ್ದ ವಿದ್ಯಾರ್ಥಿನಿ ಶ್ವೇತಾ ಕಾಲೇಜು ಸ್ಟಾಪ್ ಬಳಿ ಬಂದಾಗ ಬಸ್​ ನಿಲುಗಡೆಗಾಗಿ ಕೋರಿಕೊಂಡರೂ ಬಸ್ ನಿಲ್ಲಿಸಲಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ. ಮೃತ ಶ್ವೇತಾ ಹಡಗಲಿ ಪಟ್ಟಣದ ಬಿಸಿಎಂ ಹಾಸ್ಟಲ್​ನಲ್ಲಿ ವಾಸವಿದ್ದರು.

ಇದನ್ನೂ ಓದಿ: ಕೋಟಾದಲ್ಲಿ ಸ್ಕೂಟಿ ಕದ್ದು ಸುಳ್ಯದ ಬಾತ್‌ರೂಮ್‌ನಲ್ಲಿ ನಿದ್ರಿಸುತ್ತಿದ್ದಾಗ ಸಿಕ್ಕಿಬಿದ್ದ!

ವಿದ್ಯಾರ್ಥಿಗಳಿಂದ ಪ್ರತಿಭಟನೆ: ವಿದ್ಯಾರ್ಥಿನಿ ಸಾವಿನಿಂದ ರೊಚ್ಚಿಗೆದ್ದ ವಿದ್ಯಾರ್ಥಿಗಳು ಇಂದು ಪ್ರತಿಭಟನೆ ನಡೆಸಿದರು. ವಿಚಾರ ತಿಳಿಯುತ್ತಿದ್ದಂತೆ ಪ್ರತಿಭಟನಾ ಸ್ಥಳಕ್ಕೆ ಹಡಗಲಿ ಪೊಲೀಸರು ಭೇಟಿ ನೀಡಿದರು. ವಿದ್ಯಾರ್ಥಿಗಳನ್ನು ಮನವೊಲಿಸಲು ಯತ್ನಿಸಿದರೂ ಇದಕ್ಕೂ ವಿದ್ಯಾರ್ಥಿಗಳು ಒಪ್ಪದಿದ್ದಾಗ, ಸಾರಿಗೆ ಬಸ್ ಅ​ನ್ನು ಪೊಲೀಸರು ವಶಕ್ಕೆ ಪಡೆದರು. ನಂತರ ನ್ಯಾಯ ಕೊಡಿಸಲೇಬೇಕು ಎನ್ನುವ ಷರತ್ತಿನ ಮೇಲೆ ವಿದ್ಯಾರ್ಥಿಗಳು ಪ್ರತಿಭಟನೆ ವಾಪಾಸ್ ಪಡೆದ್ರು. ಈ ಕುರಿತು ವಿಜಯನಗರ ಜಿಲ್ಲೆಯ ಹೂವಿನಹಡಗಲಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಕಾರ್ಪೊರೇಟರ್ ನಟರಾಜ್ ಕೊಲೆ ಪ್ರಕರಣ: 11 ವರ್ಷಗಳ ಬಳಿಕ ಆರೋಪಿಗಳು ದೋಷಮುಕ್ತ

ಕೊಡಗು ಜಿಲ್ಲಾ ವಿಎಚ್​ಪಿ ಅಧ್ಯಕ್ಷರ ಕಾರಿನ‌ ಮೇಲೆ ಗುಂಡಿನ ದಾಳಿ: ವಿಶ್ವ ಹಿಂದೂ ಪರಿಷತ್ ಅಧ್ಯಕ್ಷರ ಕಾರಿನ‌ ಮೇಲೆ ಗುಂಡಿನ ದಾಳಿ ನಡೆದಿರುವ ಘಟನೆ ಕೊಡಗು ಜಿಲ್ಲೆಯಲ್ಲಿ ಜರುಗಿದೆ. ಅಧ್ಯಕ್ಷ ಮತ್ತು ವಕೀಲ ಕೃಷ್ಣ ಮೂರ್ತಿ ಮೇಲೆ ಗುಂಡು ಹಾರಿಸಲು ಯತ್ನ ನಡೆದಿದೆ. ಕೃಷ್ಣಮೂರ್ತಿಗೆ ತಗಲುತ್ತಿದ್ದ ಗುಂಡು ಕೂದಲೆಳೆ ತಪ್ಪಿದ್ದು, ಕಾರ್​ಗೆ ಬಿದ್ದಿದೆ. ಇದರಿಂದ ಅವರು ಪ್ರಾಣಾಪಾಯದಿಂದ ಪಾರಾದರು.

ಮಡಿಕೇರಿ ಹತ್ತಿರದ ಚಟ್ಟಳ್ಳಿ ಬಳಿಯ ಅಬ್ಬಿಯಾಲ ಬಳಿ ಗುಂಡಿನ ದಾಳಿ ಜರುಗಿದೆ. ಕಾರ್ಯದ ನಿಮಿತ್ತ ಚಟ್ಟಿಳ್ಳಿ ಗ್ರಾಮಕ್ಕೆ ತೆರಳಿದ್ದರು. ಕೆಲಸ ಮುಗಿಸಿಕೊಂಡು ಮರಳಿ ಮಡಿಕೇರಿಗೆ ಒಬ್ಬರೇ ಕಾರ್ ಡ್ರೈವ್ ಮಾಡಿಕೊಂಡು ವಾಪಸ್​ ಬರುತ್ತಿದ್ದರು. ಅಭ್ಯಾಲ ಎಂಬ ಪ್ರದೇಶದಲ್ಲಿ ಕಾರು ತಿರುವಿನ ವೇಳೆ ಗುಂಡಿನ ದಾಳಿ ಮಾಡಲಾಗಿದೆ. ಗುಂಡಿನ ದಾಳಿ ಆಗುತ್ತಿದ್ದಂತೆ ಕೃಷ್ಣಮೂರ್ತಿ ಕಾರು​ ನಿಲ್ಲಿಸದೇ ಡ್ರೈವ್ ಮಾಡಿಕೊಂಡು‌ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಗೆ ಹೋಗಿದ್ದಾರೆ. ನಂತರ ಈ ಘಟನೆ ಕುರಿತು ದೂರು ಕೊಟ್ಟಿದ್ದಾರೆ. ಘಟನಾ ಸ್ಥಳಕ್ಕೆ ಎಸ್ಪಿ ರಾಮರಾಜನ್ ನೇತೃತ್ವದಲ್ಲಿ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಈ ಘಟನೆ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ. ಜಿಲ್ಲೆಯ ಪೊಲೀಸರು ಹೈ ಅಲರ್ಟ್​ ಆಗಿದ್ದಾರೆ.

ಇದನ್ನೂ ಓದಿ: ಶಿವಮೊಗ್ಗ: ಟ್ರಾಕ್ಟರ್ ಚಕ್ರದಡಿ ಸಿಲುಕಿ ಒಂದೂವರೆ ವರ್ಷದ ಮಗು ಸಾವು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.