ETV Bharat / state

ಹಳ್ಳಿ ಪ್ರತಿಭೆ ದೇಶವನ್ನು ಪ್ರತಿನಿಧಿಸಿದಾಗ : ರಾಷ್ಟ್ರಮಟ್ಟದ ಹಾಕಿ ಕ್ರೀಡೆಯಲ್ಲಿ 14ರ ಪೋರ​

ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕು ರಾಯರಾಳು ತಾಂಡದ ದರ್ಶನ ಎಂಬ ಕ್ರೀಡಾಪಟು, ಹರಿಯಾಣದ ಹಿಸಾರ್ ಕ್ರೀಡಾಂಗಣದಲ್ಲಿ ನಡೆದ ರಾಷ್ಟ್ರಮಟ್ಟದ ಹಾಕಿ ಪಂದ್ಯಾವಳಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ.

author img

By

Published : Aug 4, 2019, 7:38 PM IST

ರಾಷ್ಟ್ರಮಟ್ಟದ ಹಾಕಿ ಕ್ರೀಡೆಯಲ್ಲಿ 14ರ ಪೋರ​

ಬಳ್ಳಾರಿ : ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕು ರಾಯರಾಳು ತಾಂಡದ ದರ್ಶನ ಎಂಬ ಕ್ರೀಡಾಪಟು, ಹರಿಯಾಣ ಹಿಸಾರ್ ಕ್ರೀಡಾಂಗಣದಲ್ಲಿ ನಡೆದ ರಾಷ್ಟ್ರಮಟ್ಟದ ಹಾಕಿ ಪಂದ್ಯಾವಳಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ.

ರಾಷ್ಟ್ರಮಟ್ಟದ ಹಾಕಿ ಕ್ರೀಡೆಯಲ್ಲಿ 14ರ ಪೋರ​

ದರ್ಶನ ಕೃಷ್ಣನಾಯ್ಕ ಮತ್ತು ಲಕ್ಷ್ಮಿ ಬಾಯಿ ಅವರ ಮೂರನೇ ಮಗ. ಸದ್ಯ ದರ್ಶನ್​​ ಬಳ್ಳಾರಿಯ ರೇಡಿಯೋ ಪಾರ್ಕ್​​ನಲ್ಲಿರುವ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ 9 ನೇ ತರಗತಿಯಲ್ಲಿ ಓದುತ್ತಿದ್ದಾನೆ. ಓದುವುದರ ಜೊತೆಗೆ ನಿರಂತರವಾಗಿ ಹಾಕಿ ಅಭ್ಯಾಸ ಮಾಡುವ ದರ್ಶನ್​ ನಾಯ್ಕ, ಹಾಕಿಯಲ್ಲಿ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾನೆ.

ದರ್ಶನ್​ಗೆ ಮನೆಯಲ್ಲಿ ಬಡತನವಿದ್ದರೂ ಸರ್ಕಾರ ನೀಡುವ ಸೌಲಭ್ಯಗಳನ್ನು ಪಡೆದುಕೊಂಡು ತರಬೇತಿ ಪಡೆಯುತ್ತಿದ್ದಾನೆ. ಈವರೆಗೆ ದರ್ಶನ್​ ಹಲವಾರು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದ್ದಾನೆ. ರಾಜ್ಯಮಟ್ಟದ 14 ವರ್ಷದೊಳಗಿನ ಶಾಲಾ ಹಾಕಿ ಪಂದ್ಯಾವಳಿಯಲ್ಲಿ ಮಡಿಕೇರಿಗೆ ಮೂರನೇ ಸ್ಥಾನ ಗಳಿಸಿದ್ದ. ಹಾಸನದಲ್ಲಿ ಯುವಜನ ಮತ್ತು ಕ್ರೀಡಾ ಇಲಾಖೆಯಿಂದ ಪ್ರಾಥಮಿಕ ಹಂತದಲ್ಲಿಯೇ ಬಳ್ಳಾರಿ, ಬೆಂಗಳೂರು, ಮೈಸೂರು, ದಸರಾ ಹಬ್ಬದ ಟೂರ್ನ್​ಮೆಂಟ್​​ಗಳಲ್ಲಿ ಹಾಕಿ ಪಂದ್ಯಾವಳಿಗಳನ್ನು ಆಡಿದ್ದಾನೆ.

ಈ ಬಗ್ಗೆ ಮಾತನಾಡಿರುವ ಹಾಕಿ ತರಬೇತಿದಾರರಾದ ಜಾಕೀರ್ ಹುಸೇನ್, ಸರ್ಕಾರದಿಂದ 2005ರಲ್ಲಿ ಗ್ರಾಮಾಂತರ ಅಥವಾ ಹಳ್ಳಿಗಳಿಂದ ಕ್ರೀಡಾಪಟುಗಳನ್ನು ಆಯ್ಕೆ ಮಾಡಿಕೊಳ್ಳಬೇಕೆಂದು ಆದೇಶ ಬಂದಿತ್ತು. ಆ ಸಮಯದಲ್ಲಿ ದರ್ಶನನನ್ನು ಆಯ್ಕೆ ಮಾಡಲಾಗಿತ್ತು. ನಂತರ ತನ್ನ ಸ್ವಯಂ ಆಸಕ್ತಿಯಿಂದ ಹಾಕಿ ಕ್ರೀಡೆಯಲ್ಲಿ ದರ್ಶನ್​ ಮುಂದೆ ಬಂದಿದ್ದಾನೆ ಎಂದು ಹುಸೇನ್​ ಹೇಳುತ್ತಾರೆ. ದರ್ಶನ್​ಗೆ ಮುಂದಿನ ದಿನಗಳಲ್ಲಿ ಭಾರತದ ಹಾಕಿ ತಂಡದಲ್ಲಿ ಆಟವಾಡುವ ಅವಕಾಶ ಸಿಗಲಿ ಎಂದು ಹುಸೇನ್​ ಹಾರೈಸಿದ್ದಾರೆ.

Intro:ಹಳ್ಳಿ ಹುಡುಗ ದರ್ಶನ ನಾಯ್ಕ ಹಾಕಿ ಆಟ.
14 ವರ್ಷದೊಳಗಿನ ರಾಷ್ಟ್ರಮಟ್ಟದಲ್ಲಿ ಹಾಕಿ ಪ್ರದರ್ಶನ.

ಆರಂಭದಲ್ಲಿ ಹಾಕಿ ಆಟದ ಬಗ್ಗೆ ನನಗೆ ಏನು ತಿಳಿದಿರಲಿಲ್ಲ, ಭಯದ ವಾತಾವರಣ ಇತ್ತು ನಂತರ ಗುರುಗಳಾದ ಜಾಕಿರ್ ಹುಸೇನ್ ಸಲಹೆ, ಸೂಚನೆಯ ಮೇಲೆ ನಿರಂತರ ಹಾಕಿ ಅಭ್ಯಾಸ ಮಾಡುತ್ತಾ ಹಾಕಿ ಕಲಿತ್ತೆ ಎಂದು ಗ್ರಾಮೀಣ ಪ್ರತಿಭೆ ದರ್ಶನ್ ನಾಯ್ಕ.

ಬೈಟ್ : -

1. ದರ್ಶನ ನಾಯ್ಕ.
9ನೇ ತರಗತಿ
ರಾಷ್ಟ್ರಮಟ್ಟದ ಹಾಕಿ ಆಟಗಾರರು.
ಯುವಜನ ಮತ್ತು ಕ್ರೀಡಾ ಇಲಾಖೆ,
ಬಳ್ಳಾರಿ.

2. ಜಾಕಿರ್ ಹುಸೇನ್,
ಹಾಕಿ ತರಬೇತಿದಾರರು,
ಯುವ ಜನ ಮತ್ತು ಕ್ರೀಡಾ ಇಲಾಖೆ,
ಬಳ್ಳಾರಿ.

-------------

Body:ಬಳ್ಳಾರಿ ಹಗರಿಬೊಮ್ಮನಹಳ್ಳಿ ತಾಲೂಕು ರಾಯರಾಳು ತಾಂಡದ ದಂಪತಿ ರೈತ ಕೃಷ್ಣನಾಯ್ಕ ಮತ್ತು ಗೃಹಣಿ ಲಕ್ಷ್ಮಿ ಬಾಯಿ ಅವರ ಮೂರನೇ ಮಗ ದರ್ಶನ.‌

ಯುವಜನ ಮತ್ತು ಕ್ರೀಡಾ ಇಲಾಕೆಗೆ 2014 - 2015ರಲ್ಲಿ ಬಳ್ಳಾರಿ ಯುವಜನ ಕ್ರೀಡಾ ಇಲಾಖೆಗೆ ಆಯ್ಕೆಯಾಗಿ, ಬಳ್ಳಾರಿ ನಗರದ ರೇಡಿಯೋ ಪಾರ್ಕ್ ನ ಪ್ರಾಥಾಮಿಕ ಮತ್ತು ಪ್ರೌಢಶಾಲೆಯಲ್ಲಿ 5 ನೇ ತರಗತಿಯಿಂದ ವಿಧ್ಯಾಭ್ಯಾಸ ಮಾಡುತ್ತಾ, ಈಗ 9 ನೇ ತರಗತಿಯಲ್ಲಿ ಓದುತ್ತಾ ಜೊತೆಗೆ ನಿರಂತರವಾಗಿ ಬೆಳಿಗ್ಗೆ ಮತ್ತು ಸಂಜೆ ದಿನಕ್ಕೆ ಐದು ತಾಸುಗಳ ಅಭ್ಯಾಸ ಮಾಡುವ ದರ್ಶನ ನಾಯ್ಕ ಹಾಕಿಯಲ್ಲಿ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಹಾಕಿ ಆಟವನ್ನು ಆಡಿ ಉತ್ತಮ ಪ್ರದರ್ಶನ ನೀಡಿ, ರಾಷ್ಟ್ರಮಟ್ಟದ ಹಾಕಿ ಪಂದ್ಯವಳಿ ಹರಿಯಾಣ ಇಸಾರ್ ಕ್ರೀಡಾಂಗಣದಲ್ಲಿ ಅತ್ಯುತ್ತಮವಾಗಿ ಪ್ರದರ್ಶನ ನೀಡಿದ ದರ್ಶನ ನಾಯ್ಕ.

ಮನೆಯಲ್ಲಿ ಬಡತನದಿಂದಾಗಿ ಸರ್ಕಾರ ನೀಡುವ ಈ ಸೌಲಭ್ಯಗಳನ್ನು ಪಡೆದುಕೊಂಡು ಊಟ, ವಸತಿ, ಶಾಲೆ ಜೊತೆಗೆ ಕ್ರೀಡೆಯ ಬಗ್ಗೆ ತರಬೇತಿಯನ್ನು ಪಡೆಯುತ್ತಿದೆನೆ. ಸರ್ಕಾರಕ್ಕೆ ಧನ್ಯವಾದಗಳನ್ನು ತಿಳಿಸಿದ ದರ್ಶನ ನಾಯ್ಕ.

ಸ್ಥಾನಗಳು :-

ರಾಜ್ಯಮಟ್ಟದ 14 ವರ್ಷದೊಳಗಿನ ಶಾಲಾ ಹಾಕಿ ಪಂದ್ಯಾವಳಿಯಲ್ಲಿ ಮಡಿಕೇರಿ ಮೂರನೇ ಸ್ಥಾನ, ಹಾಸನದಲ್ಲಿ ಎರಡನೇ ಸ್ಥಾನ ಪಡೆದು, 2018-2019ರಲ್ಲಿ ರಾಷ್ಟ್ರೀಯ ಮಟ್ಟದ 14 ವರ್ಷದೊಳಗಿನ ಪಂದ್ಯದಲ್ಲಿ ಹಾಕಿ ಪ್ರದರ್ಶನ ನೀಡಿದಾನೆ.

ವಿವಿಧ ಟೂರ್ನಮೆಂಟ್ ಗಳಲ್ಲಿ ಪ್ರದರ್ಶ :

ಯುವಜನ ಮತ್ತು ಕ್ರೀಡಾ ಇಲಾಖೆಯಿಂದ ಪ್ರಾಥಾಮಿಕ ಹಂತದಲ್ಲಿಯೇ ಬಳ್ಳಾರಿ, ಬೆಂಗಳೂರು, ಮೈಸೂರು, ದಸರಾ ಹಬ್ಬದ ಟೂರ್ನಮೆಂಟ್ ಗಳಲ್ಲಿ ಹಾಕಿ ಪಂದ್ಯಾವಳನ್ನು ಆಟವಾಡಿದ ಬಗ್ಗೆ ಮಾಹಿತಿಯನ್ನು ನೀಡಿದರು.

ರಜೆಯಲ್ಲಿ ರೈತಗಾರಿಕೆ ಕೆಲದ :

ರಜೆಯ ದಿನಗಳಲ್ಲಿ ತಂದೆ ಕೃಷ್ಣನಾಯ್ಕ ಅವರ ಜೊತೆಗೆ ರೈತಗಾರಿಕೆಯ ಕೆಲಸವನ್ನು ಮಾಡುತ್ತೇನೆ ಎಂದು ತಿಳಿಸಿದರು.

ಒಟ್ಟಾರೆಯಾಗೆ ಓದುವುದು ಮತ್ತು ಕ್ರೀಡೆ ಆಟವಾಡುವುದರಿಂದ ಎರಡು ಒಳ್ಳೆಯದೇ ಆದ್ರೇ ನಾನು
( ದರ್ಶನ ) ಕ್ರೀಡೆಯನ್ನೇ ಆಯ್ಕೆ ಮಾಡಿಕೊಂಡು ಸಾಧನೆ ಮಾಡುತ್ತೇನೆ ಎಂದು ಹೇಳಿದ.‌

-----------------

Conclusion:ಹಾಕಿ ತರಬೇತಿದಾರರಾದ ಜಾಕೀರ್ ಹುಸೇನ್ ಈಟಿವಿ ಭಾರತನೊಂದಿಗೆ ಮಾತನಾಡಿದ ಅವರು ಸರ್ಕಾರದಿಂದ 2005 ರಲ್ಲಿ ಒಂದು ಆದೇಸ ಬರುತ್ತದೆ ಅದೇ ಗ್ರಾಮಾಂತರ ಅಥವಾ ಹಳ್ಳಿಗಳಿಂದ ಕ್ರೀಡಾಪಟುಗಳನ್ನು ಆಯ್ಕೆ ಮಾಡಿಕೊಳ್ಳಬೇಕೆಂದು ಆದೇಶ ಬರುತ್ತದೆ ಆ ಸಮಯದಲ್ಲಿ ಈ ವಿದ್ಯಾರ್ಥಿ ದರ್ಶನನನ್ನು ಆಯ್ಕೆ ಮಾಡಿದೆವು, ನಿರಂತರ ಅಭ್ಯಾಸದ ಮೂಲಕ ತನ್ನ ಪ್ರದರ್ಶನವನ್ನು ಹಾಕಿಯಲ್ಲಿ ಆಡಿತೊರಿಸುತ್ತಾನೆ, ಒಂದು ಸರಿ ಹೇಳಿದರೇ ಸಾಕು ಅದರಂತೆ ಆಟವಾಡುತ್ತಾನೆ ಜೊತೆಗೆ ಬೇರೆ ಅವರು ಆಡುವ ಆಟನೋಡಿ ಸಹ ಕಲಿಯುವ ಪ್ರಯತ್ನ ಮಾಡುತ್ತಾನೆ ಎಂದು ಹೇಳಿದರು. ಇಂತ ವಿದ್ಯಾರ್ಥಿಗೆ ತರಬೇತಿ ನೀಡುತ್ತಿರುವ ನಾನಗೂ ಸಹ ಬಹಳ ಸಂತೋಷವಿದೆ ಎಂದು ಹೇಳಿದರು. ಮುಂದಿನ ದಿನಗಳಲ್ಲಿ ದರ್ಶನ ಭಾರತ ದೇಶದ ಹಾಕಿ ತಂಡಕ್ಕೆ ಆಟವಾಡುವ ವ್ಯಕ್ತಿಯಾಗುತ್ತಾನೆ ಎಂದು ಹೆಮ್ಮೆಯಿಂದ ಹೇಳಿಕೊಂಡರು.

-------------------------------

ಒಟ್ಟಾರೆಯಾಗಿ ದರ್ಶನ ನಾಯ್ಕ ನಂತ ವಿದ್ಯಾರ್ಥಿಗೆ ಉತ್ತಮ ತರಬೇತಿ ನೀಡುವ ತರಬೇತುದಾರರು ಬಹಳ ವಿರಳ, ಇಂತ ಕ್ರೀಡಾ ಪಟುಗಳನ್ನು ರಾಜ್ಯದ ಎಲ್ಲಾ ಯುವ ಜನ ಮತ್ತು ಕ್ರೀಡಾ ಇಲಾಖೆಯಲ್ಲಿ ತಯಾರು ಮಾಡಲಿ ಎನ್ನುವುದು ನಮ್ಮ ಈಟಿವಿ ಭಾರತದ ಆಸೆಯ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.