ಬಳ್ಳಾರಿ: ಡಿ.ದೇವರಾಜ ಅರಸು ಅವರ 105ನೇ ಜನ್ಮ ದಿನಾಚರಣೆಯನ್ನು ಅಚರಿಸಲಾಯಿತು. ಶಾಸಕ ಎಂ.ಎಸ್. ಸೋಮಲಿಂಗಪ್ಪ ಅವರು ಡಿ.ದೇವರಾಜ ಅರಸು ಮತ್ತು ರಾಜೀವ್ ಗಾಂಧಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿದರು.
ಈ ವೇಳೆ ಮಾತನಾಡಿದ ಶಾಸಕ ಸೋಮಲಿಂಗಪ್ಪ, ಹಿಂದುಳಿದ ವರ್ಗದ ಜನರಿಗೆ ಆರ್ಥಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯವಾಗಿ ಸಹಕಾರ ನೀಡಿ ಬೆಳೆಸಿದ ಕೀರ್ತಿ ಡಿ ದೇವರಾಜು ಅರಸು ಅವರಿಗೆ ಸಲ್ಲುತ್ತದೆ. ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಶಿಕ್ಷಣದ ಸೌಲಭ್ಯಗಳನ್ನು ಒದಗಿಸಿದರು. ಡಿ.ದೇವರಾಜ ಅರಸು ಅವರ ಸ್ಫೂರ್ತಿಯಿಂದ ಸಾಕಷ್ಟು ರಾಜಕೀಯ ವ್ಯಕ್ತಿಗಳು ಬೆಳವಣಿಗೆ ಹೊಂದಿದ್ದಾರೆ ಎಂದರು.
ಈ ಸಮಯದಲ್ಲಿ ಸಿರುಗುಪ್ಪ ತಾಲೂಕಿನ ಶಾಸಕ ಎಂ.ಎಸ್ ಸೋಮಲಿಂಗಪ್ಪ ಕಾಂಗ್ರೆಸ್ ಜಿಲ್ಲಾಧ್ಯಕ್ಷ ರಫೀ, ಎಲ್. ಮಾರಣ್ಣ, ಬಂಡೆ ಗೌಡ್ರು, ಗಾದಿಲಿಂಗನಗೌಡ್ರು, ದತ್ತಾತ್ರೇಯ ರೆಡ್ಡಿ, ಕಲ್ಲುಕಂಬ ಪಂಪಾಪತಿ ಮತ್ತು ಹಿಂದುಳಿದ ವರ್ಗದ ಮುಖಂಡರು ಭಾಗವಹಿಸಿದ್ದರು.