ಹೊಸಪೇಟೆ: ಹಳೇ ಅಮರಾವತಿಯ ಬಸವಣ್ಣ ಕಾಲುವೆಯಲ್ಲಿ ಮೊಸಳೆಯೊಂದು ಪ್ರತ್ಯಕ್ಷವಾಗಿದ್ದು, ಜನರಲ್ಲಿ ಆತಂಕ ಸೃಷ್ಟಿಸಿದೆ.
ಕಳೆದ ಎರಡು ದಿನಗಳಿಂದ ಹೊಸಪೇಟೆಯಲ್ಲಿ ಸತತವಾಗಿ ಉತ್ತಮವಾಗಿ ಮಳೆಯಾಗುತ್ತಿದ್ದು, ಕಾಲುವೆ ನೀರಿನೊಂದಿಗೆ ಮೊಸಳೆ ಬಂದಿರಬಹುದು ಎನ್ನಲಾಗಿದೆ.
ಈ ಕುರಿತು ಆರ್ಎಫ್ಒ ವಿನಾಯಕ ಮಾತನಾಡಿ, ಕಾಲುವೆ ನೀರಿನ ಮೂಲಕ ಮೊಸಳೆ ಬಂದಿರಬಹುದು. ಘಟನಾ ಸ್ಥಳಕ್ಕೆ ಇಲಾಖೆ ಸಿಬ್ಬಂದಿ ಕಳುಹಿಸಲಾಗಿದೆ. ಸುತ್ತಮುತ್ತಲಿನ ಜನರು ಮೊಸಳೆಗಳು ಕಂಡು ಬಂದರೆ ತುಂಗಭದ್ರಾ ಜಲಾಶಯದಲ್ಲಿ ಬಿಡುತ್ತಾರೆ. ಜಲಾಶಯದ ನೀರಿನ ರಭಸಕ್ಕೆ ಕಾಲುವೆ ಮೂಲಕ ಮೊಸಳೆ ಬಂದಿರಬಹುದು ಎಂದರು.