ETV Bharat / state

ಕೊರೊನಾ ಕರ್ಫ್ಯೂ ತಂದಿಟ್ಟ ಸಂಕಷ್ಟ: ಮಲ್ಲಿಗೆ ಹೂ ಹೊಲದಲ್ಲೇ ಬಾಡುವ ಆತಂಕದಲ್ಲಿ ರೈತರು! - ಹೂವಿನಹಡಗಲಿ ಮಲ್ಲಿಗೆ

ಹೂವಿನಹಡಗಲಿ ತಾಲೂಕಿನ 500 ಎಕರೆ ಭೂಮಿಯಲ್ಲಿ ಮಲ್ಲಿಗೆ ಹೂ ಬೆಳೆಯಲಾಗುತ್ತದೆ. ಈ‌ ಹಿಂದೆ ಮಲ್ಲಿಗೆಗೆ ಕೆಜಿಗೆ 300ರಿಂದ 500 ರೂ. ದರವಿತ್ತು. ಆದ್ರೀಗ 100 ರೂ. ಇದ್ದು, ಹಾಕಿದ ಬಂಡವಾಳ ವಾಪಸ್​ ಬರುತ್ತದೋ, ಇಲ್ಲವೋ ಎನ್ನುವ ಆತಂಕದಲ್ಲಿ ರೈತರಿದ್ದಾರೆ.

covid effects on hoovinahadagali farmers who grew Jasmin
ಮಲ್ಲಿಗೆ ಬೆಳೆದ ರೈತರಿಗೆ ನಷ್ಟ
author img

By

Published : May 5, 2021, 10:26 AM IST

ಹೊಸಪೇಟೆ: ಮಲ್ಲಿಗೆ ಬೆಳೆಗಾರರೀಗ ಕೋವಿಡ್​​ ಎರಡನೇ ಅಲೆಗೆ ತತ್ತರಿಸಿ‌ ಹೋಗಿದ್ದಾರೆ. ಮಲ್ಲಿಗೆಗೆ ಬೆಂಬಲ‌ ಬೆಲೆ‌‌ ಸಿಗದೆ ರೈತರು ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ.

ಕಳೆದ ವರ್ಷದ ಲಾಕ್​ಡೌನ್ ಸಂದರ್ಭದಲ್ಲಾದ ನಷ್ಟವನ್ನು ಅರಗಿಸಿಕೊಳ್ಳಲು ರೈತರಿಗೆ ಇನ್ನೂ ಸಾಧ್ಯವಾಗಿಲ್ಲ. ಕೈಗೆ ಬಂದ ತುತ್ತು ಬಾಯಿಗೆ ಬಾರದ ಪರಿಸ್ಥಿತಿ ಇತ್ತು. ಹೊಲದಲ್ಲಿ ಅರಳಿದ್ದ ಮಲ್ಲಿಗೆ ಹೂ ದರವಿಲ್ಲದೇ ಬಾಡಿ ಹೋಗಿದ್ದವು. ಈಗಲೂ ರೈತರ ಪರಿಸ್ಥಿತಿ ಭಿನ್ನವಾಗಿಲ್ಲ. ಕೋವಿಡ್​ ಆರ್ಭಟ ಜೋರಾಗಿದೆ. ಜತೆಗೆ ಜನತಾ ಕರ್ಫ್ಯೂ ಜಾರಿಯಲ್ಲಿದೆ. ಮಲ್ಲಿಗೆ ಈಗ ಮಾರುಕಟ್ಟೆಯಲ್ಲಿ ಒಂದು ಕೆ.ಜಿ.ಗೆ 100 ರೂ. ದರವಿದೆ. ದರ ಕುಸಿತದಿಂದ ರೈತರು ಕಂಗಾಲಾಗಿ ಹೋಗಿದ್ದಾರೆ.

ಕೋವಿಡ್​ ತಂದಿಟ್ಟ ಸಂಕಷ್ಟ - ಹೂವಿನಹಡಗಲಿ ರೈತರ ಪ್ರತಿಕ್ರಿಯೆ

ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಮಿರಾಕೊರನಹಳ್ಳಿ, ಮುದೇನೂರ, ಹನಕನಹಳ್ಳಿ ಗ್ರಾಮಗಳಲ್ಲಿ ಮಲ್ಲಿಗೆಯನ್ನು ಬೆಳೆಯಲಾಗುತ್ತದೆ. ನಿತ್ಯ ನೂರಾರು ಕ್ವಿಂಟಾಲ್ ಹೂ ಇಳುವರಿ ಬರುತ್ತಿದೆ. ಆದರೆ, ರೈತರಿಗೆ ಸಮರ್ಪಕ ಬೆಲೆ ಇಲ್ಲದೇ ಕೈಕಟ್ಟಿ ಕುಳಿತುಕೊಳ್ಳುವಂತಾಗಿದೆ.

ಬೇಡಿಕೆಯಿದ್ದರೂ ಪ್ರಯೋಜನವಿಲ್ಲ:

ಹುಬ್ಬಳ್ಳಿ, ದಾವಣಗೆರೆ, ಗದಗ, ಹಾವೇರಿ ಭಾಗಗಳಲ್ಲಿ ಈ ಹೂವಿಗೆ ಬೇಡಿಕೆ ಇದೆ. ಆದರೆ, ಕೊರೊನಾ‌ ಕರ್ಫ್ಯೂ ಹಿನ್ನೆಲೆ ವ್ಯಾಪರಸ್ಥರು‌ ಖರೀದಿಗೆ ಮುಂದೆ ಬರುತ್ತಿಲ್ಲ. ಹೀಗಾಗಿ‌ ಸಂಪೂರ್ಣ ಕುಸಿತ ಕಂಡಿದೆ. ಈ‌ ಹಿಂದೆ ಮಲ್ಲಿಗೆಗೆ ಕೆಜಿಗೆ 300ರಿಂದ 500 ರೂ. ದರವಿತ್ತು. ಆದ್ರೀಗ 100 ರೂ. ಇದ್ದು, ಹಾಕಿದ ಬಂಡವಾಳ ವಾಪಸ್​ ಬರದಂತ ಸ್ಥಿತಿ ನಿರ್ಮಾಣವಾಗಿದೆ.

ಹೂವಿನಹಡಗಲಿ ತಾಲೂಕಿನ 500 ಎಕರೆ ಭೂಮಿಯಲ್ಲಿ ಮಲ್ಲಿಗೆ ಹೂ ಬೆಳೆಯಲಾಗುತ್ತದೆ. ಕಳೆದ ಬಾರಿ ಲಾಕ್​​ಡೌನ್ ಸಂದರ್ಭದಲ್ಲಿ ಹೂವಿನ ಬೆಳೆಗಾರರಿಗೆ ಸರ್ಕಾರ ಪರಿಹಾರ ಘೋಷಣೆ ಮಾಡಿತ್ತು. ಒಂದು ವರ್ಷದವಾದರೂ 300 ರೈತರಿಗೆ ಬಿಡಿಗಾಸು ದೊರೆತಿಲ್ಲ. ನೆಪ ಮಾತ್ರಕ್ಕೆ 64 ಜನ ರೈತರಿಗೆ ಪರಿಹಾರವನ್ನು ವಿತರಣೆ ಮಾಡಲಾಗಿದೆ. ಹಾಕಿದ ಬಂಡವಾಳ ಮರಳಿ ಬರದಂತಾಗಿದೆ ಎಂದು ರೈತರಾದ ಕೊಟ್ರಯ್ಯ, ಮಲ್ಲಿಕಾರ್ಜುನ ತಮ್ಮ ಅಳಲು ತೋಡಿಕೊಂಡಿದ್ದಾರೆ.

ಇದನ್ನೂ ಓದಿ: ಕೋವಿಡ್​ ಹೊಡೆತ: ತುಮಕೂರು ಜಿಲ್ಲೆಯ ಬಹುತೇಕ ಕಟ್ಟಡ ಕಾಮಗಾರಿಗಳು ಸ್ಥಗಿತ!

ಹೂವಿನಹಡಗಲಿ ತೋಟಗಾರಿಕೆ ಇಲಾಖೆಯ ತಾಂತ್ರಿಕ ಸಲಹೆಗಾರ ಚಂದ್ರಕುಮಾರ ಮಾತನಾಡಿ, ಸರ್ಕಾರದ ಆದೇಶದಂತೆ ರೈತರಿಗೆ ಪರಿಹಾರವನ್ನು‌ ನೀಡಲಾಗಿದೆ. ಆದ್ರೆ ಹೆಚ್ಚುವರಿಯಾಗಿ ಕೇಳಿದ ಹಣ ಬಂದಿಲ್ಲ ಎಂದು ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.