ಬಳ್ಳಾರಿ: ಇಲ್ಲಿನ ಗಡಗಿ ಚನ್ನಪ್ಪ ವೃತ್ತದ ಬಳಿ ಇಂದು ಜಿಲ್ಲಾ ಪೊಲೀಸ್ ಇಲಾಖೆಯಿಂದ ಕೋವಿಡ್ ಕುರಿತ ಜಾಗೃತಿ ಮೂಡಿಸಲಾಯಿತು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೈದುಲ್ಲಾ ಅದಾವತ್ ಅವರು ಕೋವಿಡ್ ಜಾಗೃತಿ ಜಾಥಾಗೆ ಚಾಲನೆ ನೀಡಿದರು. ಬಳಿಕ, ಮಾತನಾಡಿದ ಅವರು, ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್ ಹಾಗೂ ಸ್ಯಾನಿಟೈಸರ್ ಬಳಸಿಕೊಳ್ಳಬೇಕು. ಜಿಲ್ಲಾ ಪೊಲೀಸ್ ಇಲಾಖೆಯೂ ಸಹಾ ಸ್ಯಾನಿಟೈಸರ್, ಮಾಸ್ಕ್ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳೋದನ್ನ ಕಡ್ಡಾಯವಾಗಿ ಪಾಲಿಸಬೇಕೆಂದು ತಿಳಿಸಿದ್ದಾರೆ.
ಇನ್ನು ಬಳ್ಳಾರಿ ನಗರ ಉಪವಿಭಾಗದ ಡಿವೈಎಸ್ಪಿ ರಮೇಶ ಕುಮಾರ, ಸಿಪಿಐ ನಾಗರಾಜ, ವಾಸು ಕುಮಾರ, ನಾಗರಾಜ, ಸುಭಾಷ್, ಹಾಲೇಶ, ಪಿಎಸ್ಐ ಪರುಶುರಾಮ, ವೆಂಕಟಯ್ಯ, ಎಎಸ್ ಐ ಎಂ.ನಾಗಭೂಷಣ ಸೇರಿದಂತೆ ಪೊಲೀಸ್ ಇಲಾಖೆಯ ಸಿಬ್ಬಂದಿ ನಾಮಫಲಕಗಳನ್ನ ಕೈಯಲ್ಲಿ ಹಿಡಿದು ಜಾಗೃತಿ ಮೂಡಿಸಿದರು.