ETV Bharat / state

ಗಣಿ ಜಿಲ್ಲೆ ಕೋರ್ಟ್​ಗೂ​​ ಕೊರೊನಾ ಬಿಸಿ: ವಿಡಿಯೋ ಕಾನ್ಫರೆನ್ಸ್​​ ಮೂಲಕ ವಿಚಾರಣೆ - ಬಳ್ಳಾರಿ ಜಿಲ್ಲಾ ನ್ಯಾಯಾಲಯ ಬಂದ್​

ಬಳ್ಳಾರಿ ಜಿಲ್ಲೆ ಜೆಎಂಎಫ್​ಸಿ ಕೋರ್ಟ್​ನ ವಿಚಾರಣೆಗಳಿಗೆ ತಾತ್ಕಾಲಿಕವಾಗಿ ಬ್ರೇಕ್​ ನೀಡಲಾಗಿದೆ. ತುರ್ತು ಅರ್ಜಿಗಳ ವಿಚಾರಣೆಯನ್ನು ವಿಡಿಯೋ ಕಾನ್ಫರೆನ್ಸ್​ ಮೂಲಕ ನಡೆಸಲಾಗುವುದು ಎಂದು ನ್ಯಾಯಾಧೀಶ ಕೃಷ್ಣರಾಜ ಬಿ. ಅಸೋಡೆ ತಿಳಿಸಿದ್ದಾರೆ.

corona effect to district court
ಕೋರ್ಟ್​ಗೆ ಆಗಮಿಸುವವರ ಸ್ಕ್ರೀನಿಂಗ್
author img

By

Published : Mar 23, 2020, 9:27 PM IST

ಬಳ್ಳಾರಿ: ನಗರದ ಜೆಎಂಎಫ್​ಸಿ ಕೋರ್ಟ್​ನ ತುರ್ತು ವಿಚಾರಣೆಗಳನ್ನು ವಿಡಿಯೋ ಕಾನ್ಫರೆನ್ಸ್​ ಮೂಲಕ ನಡೆಸುವುದಾಗಿ ಹಾಗೂ ಕಕ್ಷಿದಾರರು, ಅವರ ಪರ ವಕೀಲರಿಗೆ ಕೋರ್ಟ್​ಗೆ ಪ್ರವೇಶಿಸದಂತೆ ತಾತ್ಕಾಲಿಕ ಬ್ರೇಕ್ ಹಾಕಲಾಗಿದೆ ಎಂದು ನ್ಯಾಯಾಧೀಶ ಕೃಷ್ಣರಾಜ ಬಿ. ಅಸೋಡೆ ತಿಳಿಸಿದ್ದಾರೆ.

ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ

ಕೊರೊನಾ ಹೆಮ್ಮಾರಿ ತಡೆಗೆ ಕೋರ್ಟ್​ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವೂ ಸೂಕ್ತ ಕ್ರಮಕ್ಕೆ ಮುಂದಾಗಿದೆ. ಕೇಂದ್ರ ಕಾರಾಗೃಹದಲ್ಲಿ ಶಿಕ್ಷೆ ಅನುಭವಿಸುತ್ತಿರುವ ಬಂಧಿ ಕೈದಿಗಳನ್ನು ಕೋರ್ಟ್​ಗೆ ಹಾಜರುಪಡಿಸುವಂತಿಲ್ಲ. ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ಮಾಡಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಕೇಂದ್ರ ಕಾರಾಗೃಹದ ಹಾಗೂ ಹೊಸ ಕೈದಿಗಳ ಆರೋಗ್ಯ ತಪಾಸಣೆ ಮಾಡಿಸುವಂತೆ ಈಗಾಗಲೇ ಬಳ್ಳಾರಿ ಕೇಂದ್ರ ಕಾರಾಗೃಹದ ಅಧೀಕ್ಷಕರಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.

ಜಾಮೀನು ಅರ್ಜಿಗಳ ಇತ್ಯರ್ಥಕ್ಕೆ ಆದ್ಯತೆ: ತುರ್ತು ಜಾಮೀನು ಪಡೆಯುವ ಅರ್ಜಿಗಳನ್ನು ಇತ್ಯರ್ಥಗೊಳಿಸುವ ಕಾರ್ಯವನ್ನು ಸದ್ಯಕ್ಕೆ ಮಾಡಲಾಗುತ್ತದೆ. ಸಾಮಾನ್ಯ ಕಕ್ಷಿದಾರರ ಅರ್ಜಿಗಳ ಇತ್ಯರ್ಥ ಹಾಗೂ ವಕೀಲರ ಪ್ರವೇಶವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.