ETV Bharat / state

ಬಳ್ಳಾರಿಯಲ್ಲಿ ಮುಂದುವರೆದ ಆರೋಗ್ಯ ಸಹಾಯಕರ ಪ್ರತಿಭಟನೆ - health aides protest in Bellary updates

ಕೂಡಲೇ ಸೇವೆಗೆ ಮರಳುವಂತೆ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಸೂಚನೆ ನೀಡಿದೆ. ಸೇವೆಯಿಂದ ವಜಾಗೊಳಿಸುವ ಎಚ್ಚರಿಕೆಯನ್ನೂ ನೀಡುತ್ತಿದೆ ಎಂದು ಆರೋಗ್ಯ ಸಹಾಯಕರು ದೂರಿದ್ದಾರೆ..

ಬಳ್ಳಾರಿಯಲ್ಲಿ ಮುಂದುವರೆದ ಆರೋಗ್ಯ ಸಹಾಯಕರ ಪ್ರತಿಭಟನೆ
author img

By

Published : Sep 28, 2020, 7:07 PM IST

ಬಳ್ಳಾರಿ : ಜಿಲ್ಲಾಸ್ಪತ್ರೆ ಕಚೇರಿಯ ಆವರಣದಲ್ಲಿ ಕಳೆದ ಐದಾರು ದಿನಗಳಿಂದ ಭಾರತೀಯ ಮಜ್ದೂರ್ ಸಂಘದ ಬ್ಯಾನರ್ ಅಡಿ ಕೈಗೊಂಡಿದ್ದ ಆರೋಗ್ಯ ಸಹಾಯಕರ ಪ್ರತಿಭಟನೆ ಮುಂದುವರಿದಿದೆ.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಗುತ್ತಿಗೆ-ಹೊರಗುತ್ತಿಗೆ ಆಧಾರಿತದಡಿ ನೇಮಗೊಂಡ ಆರೋಗ್ಯ ಸಹಾಯಕರ ಪ್ರಮುಖ ಬೇಡಿಕೆಗಳಾದ ಸಮಾನ ಕೆಲಸಕ್ಕೆ ಸಮಾನ ವೇತನ ಹಾಗೂ ಸೇವೆ ಖಾಯಂಗೊಳಿಸಿ ಅಗತ್ಯ ಸೇವಾ ಭದ್ರತೆ ಒದಗಿಸಬೇಕು ಎಂಬ ಬೇಡಿಕೆಗಳನ್ನ ಈಡೇರಿಸುವವರೆಗೂ ಪ್ರತಿಭಟನೆ ಕೈಬಿಡಲ್ಲ ಎಂದು ಆರೋಗ್ಯ ಸಹಾಯಕರು ಎಚ್ಚರಿಸಿದ್ದಾರೆ.

ಕೂಡಲೇ ಸೇವೆಗೆ ಮರಳುವಂತೆ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಸೂಚನೆ ನೀಡಿದೆ. ಸೇವೆಯಿಂದ ವಜಾಗೊಳಿಸುವ ಎಚ್ಚರಿಕೆಯನ್ನೂ ನೀಡುತ್ತಿದೆ ಎಂದು ಆರೋಗ್ಯ ಸಹಾಯಕರು ದೂರಿದ್ದಾರೆ.

ಸಮಾನ ಕೆಲಸಕ್ಕೆ ಸಮಾನ ವೇತನ ನಿಗದಿಪಡಿಸಬೇಕು.‌ ಸೇವಾ ಭದ್ರತೆ ಒದಗಿಸಬೇಕೆಂದು ಪ್ರತಿಭಟನಾ ನಿರತರು ಆಗ್ರಹಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.