ಹೊಸಪೇಟೆ: ಹಾಡಹಗಲೇ ಇಲ್ಲಿನ ನ್ಯಾಯಾಲಯದ ಆವರಣದಲ್ಲಿ ನೆತ್ತರು ಹರಿದಿದೆ. ವಕೀಲನನ್ನು ಬರ್ಬರವಾಗಿ ಕೊಲೆ ಮಾಡಿರುವ ಪ್ರಕರಣದಿಂದ ನೂತನ ವಿಜಯನಗರ ಜಿಲ್ಲೆಯ ಜನರು ಬೆಚ್ಚಿಬಿದ್ದಿದ್ದಾರೆ.
ನಗರದ ಕೋರ್ಟ್ ಆವರಣಲ್ಲಿ ಕಾಂಗ್ರೆಸ್ ಮುಖಂಡ ಮತ್ತು ವಕೀಲರಾಗಿದ್ದ ತಾರಿಹಳ್ಳಿ ವೆಂಕಟೇಶ (48) ಅವರನ್ನು ಮಚ್ಚಿನಿಂದ ಕೊಚ್ಚಿ ವ್ಯಕ್ತಿವೋರ್ವ ಹತ್ಯೆಗೈಯ್ದಿದ್ದಾನೆ.
ವಕೀಲ ತಾರಿಹಳ್ಳಿ ವೆಂಕಟೇಶ ಅವರ ತೆಲೆಗೆ ಮಚ್ಚಿನಿಂದ ಹೊಡೆದು ಕೊಲೆ ಮಾಡಲಾಗಿದ್ದು, ಕೌಟುಂಬಿಕ ಕಲಹದಿಂದ ಕೊಲೆ ನಡೆದಿರಬಹುದು ಎಂದು ಶಂಕಿಸಲಾಗಿದೆ.
ಇದನ್ನೂ ಓದಿ: 15 ದಿನದ ಹಿಂದಷ್ಟೇ 2ನೇ ಮದುವೆ: ಮೊದಲ ಪತ್ನಿ ಸಾವಿನಿಂದ ನೊಂದಿದ್ದ ವ್ಯಕ್ತಿ ಮಗುವಿನೊಂದಿಗೆ ಆತ್ಮಹತ್ಯೆ
ಕೊಲೆ ಮಾಡಿದ ಆರೋಪಿ ಮನೋಜನು ವೆಂಕಟೇಶ ಅವರ ಸಂಬಂಧಿಕನಾಗಿದ್ದು, ಪೊಲೀಸರು ಈತನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ವಕೀಲರನ್ನು ಕೊಲೆ ಮಾಡಿದ್ದಕ್ಕೆ ಕಾರಣ ಕೇಳಿದ್ದಕ್ಕೆ, ನಾಲ್ಕು ಬಾರಿ ನನ್ನನ್ನು ಕೆಲಸದಿಂದ ಬಿಡಿಸಿದ್ದಾನೆ. ಹೊಟ್ಟೆಗೆ ಏನು ಮಾಡಬೇಕು ಎಂದು ಮನೋಜ್ ಅಸಮಾಧಾನ ವ್ಯಕ್ತಪಡಿಸಿದ್ದಾನೆ. ತಾರಿಹಳ್ಳಿ ವೆಂಕಟೇಶ ನಿನಗೆ ಏನಾಗ ಬೇಕು ಎಂಬ ಪ್ರಶ್ನೆಗೆ ದೊಡ್ಡಪ್ಪ ಎಂದು ಹೇಳಿದ್ದಾನೆ.