ಹೊಸಪೇಟೆ: ಸಮ್ಮಿಶ್ರ ಸರ್ಕಾರವು ಸುಭದ್ರವಾಗಿತ್ತು. ಆದರೆ, 17 ಜನ ಶಾಸಕರು ಕುತಂತ್ರದಿಂದ ರಾಜೀನಾಮೆ ನೀಡಿದ್ದಾರೆ. ಸಾರ್ವಜನಿಕರ ಕುಂದು ಕೊರತೆಗಳನ್ನು ಲೆಕ್ಕಿಸದೆ ರಾಜೀನಾಮೆಯನ್ನು ನೀಡಿರುವುದು ಎಷ್ಟು ಸರಿ ಎಂದು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ವೆಂಕಟರಾವ್ ಘೋರ್ಪಡೆ ಕಿಡಿಕಾರಿದರು.
ವೆಂಕಟರಾವ್ ಘೋರ್ಪಡೆ ಮಾತನಾಡಿ, ಸಮ್ಮಿಶ್ರ ಸರ್ಕಾರವನ್ನು ಕೆಳಗೆ ಇಳಿಸಿ ರಾಜ್ಯದಲ್ಲಿ ಉಪಚುನಾವಣೆ ಅಖಾಡವನ್ನು ಪ್ರಾರಂಭಸಿದ್ದಾರೆ. ನಗರದಲ್ಲಿ ಸಮಸ್ಯೆಗಳು ತಾಂಡವವಾಡುತ್ತಿದ್ದು, ಅತ್ತ ಕಡೆ ಗಮನ ಹರಿಸಬೇಕಿದೆ. ಹಾಗಾಗಿ ಕಾಂಗ್ರೆಸ್ ಪಕ್ಷ ನನ್ನನ್ನು ಉಪಚುನಾವಣೆಯ ಕಣಕ್ಕೆ ಇಳಿಸಿದೆ ಎಂದರು.
ನ.28ರಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪಕ್ಷದ ಪ್ರಚಾರಕ್ಕೆ ಬರಲಿದ್ದಾರೆ. ಮತದಾರರು ನಮ್ಮನ್ನು ಬಹುಮತದಿಂದ ಗೆಲ್ಲಿಸುತ್ತಾರೆ ಎಂದು ಅನಿಸಿಕೆಗಳನ್ನು ಹಂಚಿಕೊಂಡರು.