ETV Bharat / state

ಬಿಜೆಪಿಗರ ರೊಚ್ಚಿಗೆಬ್ಬಿಸುವ ಮಾತು.. ಶಾಸಕ ಭೀಮಾ ನಾಯ್ಕ ತೋಳು ತಟ್ಟೋದಕ್ಕೆ ಕಾರಣ.. - ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ಗಲಾಟೆ

ನೂಕಾಟ ಮತ್ತು ತಳ್ಳಾಟದ ನಡುವೆಯೇ ಗದ್ದಲಕ್ಕೆ ಮತ್ತಷ್ಟು ಪುಷ್ಠಿ ನೀಡುವಂತಹ ಘಟನೆ ಅಂದು ನಡೆದಿವೆ. ಈ ಎಲ್ಲ ಘಟನಾವಳಿಗಳ ದೃಶ್ಯ ಅಲ್ಲಿನ ಸಿಸಿ ಟಿವಿಯಲ್ಲಿ ಸೆರೆಯಾಗಿವೆ..

Clash between BJP and Congress; Viral on social networking sites
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ದೃಶ್ಯಗಳು
author img

By

Published : Nov 9, 2020, 6:50 PM IST

ಬಳ್ಳಾರಿ: ಜಿಲ್ಲೆಯ ಹಗರಿಬೊಮ್ಮನಹಳ್ಳಿ ಪುರಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆಯ ಚುನಾವಣೆ ವೇಳೆ ಬಿಜೆಪಿ- ಕಾಂಗ್ರೆಸ್ಸಿಗರ ನಡುವೆ ನಡೆದ ನೂಕಾಟ ಹಾಗೂ ತಟ್ಟಾಟದ ವಿಡಿಯೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಅಂದು ನಡೆದಿದ್ದು ಹೀಗೆ : ಅಂದು ಬೆಂಬಲಿಗರೊಂದಿಗೆ ಪುರಸಭೆಯ ಕಾರ್ಯಾಲಯದ ಒಳಗಡೆ ನಿಂತಿದ್ದ ಶಾಸಕ ಭೀಮಾ ನಾಯ್ಕ ಅವರನ್ನು ಸೂಕ್ಷ್ಮವಾಗಿ ಗಮನಿಸಿದ ಬಿಜೆಪಿ ಎಸ್​ಟಿ ಮೋರ್ಚಾದ ಮಂಡಲ ಅಧ್ಯಕ್ಷ ಗರಗದ ಪ್ರಕಾಶ ಎಂಬಾತ ಹಲ್ಲೆಗೆ ಯತ್ನಿಸಿದ್ದಾನೆ.

ಆಗ ಸ್ಥಳದಲ್ಲಿದ್ದ ಪೊಲೀಸರು ಆತನನ್ನ ತಡೆದು ಆಗಬಹುದಾದ ಗಲಾಟೆಯನ್ನು ಹತ್ತಿಕ್ಕಿಲು ಪ್ರಯತ್ನಿಸಿದ್ದಾರೆ. ಆದರೆ, ನೂಕಾಟ ಮತ್ತು ತಳ್ಳಾಟದ ನಡುವೆಯೇ ಗದ್ದಲಕ್ಕೆ ಮತ್ತಷ್ಟು ಪುಷ್ಠಿ ನೀಡುವಂತಹ ಘಟನೆ ಅಂದು ನಡೆದಿವೆ. ಈ ಎಲ್ಲ ಘಟನಾವಳಿಗಳ ದೃಶ್ಯ ಅಲ್ಲಿನ ಸಿಸಿ ಟಿವಿಯಲ್ಲಿ ಸೆರೆಯಾಗಿವೆ. ಇಂದು ಅವುಗಳನ್ನು ಪರಿಶೀಲನೆ ಮಾಡಲಾಗುತ್ತಿದೆ.

ರೊಚ್ಚಿಗೆಬ್ಬಿಸಿದ ಬಿಜೆಪಿ ಯುವ ಮುಖಂಡ : ಅಶ್ಲೀಲ ಪದ ಬಳಕೆಯೊಂದಿಗೆ ನೇರವಾಗಿ ಶಾಸಕರಿಗೆ ಧಮ್ಮಿ ಹಾಕುತ್ತಿರುವ ದೃಶ್ಯ ಕೂಡ ಈ ವಿಡಿಯೋದಲ್ಲಿದೆ. ಇವೆಲ್ಲವೂ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.‌

ಬಿಜೆಪಿಗರ ದುಂಡಾವರ್ತನೆಯು ಜಗಜ್ಜಾಹೀರಾಗಿರೋದು ವ್ಯಾಪಕ ಟೀಕೆಗೆ ಒಳಗಾಗಿದೆ. ಘಟನೆ ಖಂಡಿಸಿರುವ ಮೂಲ ಬಿಜೆಪಿಗರ ಚರ್ಚಾತ್ಮಕ ವಿಡಿಯೋಗಳು ಸಹ ವೈರಲ್ ಆಗಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.