ಹೊಸಪೇಟೆ: ನಗರದ ಆರ್ಟಿಒ ಕಚೇರಿ ಬಳಿ ಹೆಚ್ಎಲ್ ಕಾಲುವೆಯಲ್ಲಿ ಕೊಚ್ಚಿಕೊಂಡು ಹೋಗಿದ್ದ ಯುವಕನ ಶವ ಇಂದು ಪತ್ತೆಯಾಗಿದೆ.
ಹೆಚ್ಎಲ್ಸಿ ಕಾಲುವೆ ಪಕ್ಕದ ನಿವಾಸಿ ರವಿ (21) ಎಂಬಾತ ಸೆ. 14ರಂದು ಬೆಳಗ್ಗೆ 6ಕ್ಕೆ ಕಾಲುವೆಗೆ ನೀರು ತರಲು ಹೋಗಿ ಕಾಲು ಜಾರಿ ಬಿದ್ದಿದ್ದು, ಶವಕ್ಕಾಗಿ ಶೋಧ ಕಾರ್ಯ ನಡೆದಿತ್ತು.
ಯುವಕ ಕೊಚ್ಚಿಕೊಂಡು ಹೋದ ಮೂರನೇ ದಿನಕ್ಕೆ ಸಂಡೂರು ತಾಲೂಕಿನ ಕುರೇಕುಪ್ಪ ಕಾಲುವೆಯಲ್ಲಿ ಶವ ಪತ್ತೆಯಾಗಿದೆ. ಈ ಸಂಬಂಧ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.