ETV Bharat / state

ವಿಮ್ಸ್​ ಪ್ರಕರಣಕ್ಕೆ ಬಿಗ್​ ಟ್ವಿಸ್ಟ್​.. ಸಚಿವ ಸುಧಾಕರ್​ ವಿರುದ್ಧ ಸ್ವಪಕ್ಷದ ಶಾಸಕರೇ ಗರಂ - Wims Director Dr Gangadhara Gowda

ವಿಮ್ಸ್​ನಲ್ಲಿ ನಡೆದಿರುವ ಈ ಘಟನೆ ಕೆಲವರಿಂದ ನಡೆಸಿರುವ ದುರುದ್ದೇಶದ ಸಂಚು. ಈ ಬಗ್ಗೆ ಸಮಗ್ರ ಮಾಹಿತಿ ಕಲೆ ಹಾಕಲಾಗುತ್ತಿದೆ. ಕೆಲವೇ ದಿನಗಳಲ್ಲಿ ಈ ಪ್ರಕರಣದ ಬಗ್ಗೆ ನಿಜಾಂಶ ಹೊರಬರಲಿದೆ ಎಂದು ವಿಮ್ಸ್ ನಿರ್ದೇಶಕ ಡಾ ಗಂಗಾಧರ ಗೌಡ ಹೇಳಿದ್ದಾರೆ.

big-twist-for-wims-case
ಸಚಿವ ಸುಧಾಕರ್​ ವಿರುದ್ಧ ಸ್ವಪಕ್ಷದ ಶಾಸಕರೇ ಗರಂ
author img

By

Published : Sep 17, 2022, 7:23 PM IST

Updated : Sep 17, 2022, 10:08 PM IST

ಬಳ್ಳಾರಿ: ವಿಮ್ಸ್​ನ ಪ್ರಕರಣಕ್ಕೆ ಇಂದು ಬಿಗ್ ಟ್ವಿಸ್ಟ್ ಸಿಕ್ಕಿದೆ. ಆಡಳಿತ ಪಕ್ಷದ ಶಾಸಕರೇ ಈಗ ಆರೋಗ್ಯ ಮತ್ತು ವೈದ್ಯಕೀಯ ಸಚಿವ ಸಚಿವ ಡಾ ಸುಧಾಕರ್ ಮೇಲೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಡೈರೆಕ್ಟರ್ ಗಂಗಾಧರ ಗೌಡ, ನನ್ನ ವಿರುದ್ಧ ಕೆಲವರು ಷಡ್ಯಂತ್ರ ಮಾಡಿದ್ದಾರೆ. ಸೂಕ್ತ ಸಮಯದಲ್ಲಿ ಅವರ ವಿರುದ್ಧ ಕೇಸ್ ಮಾಡುವೆ ಎಂದಿದ್ದಾರೆ.‌ ಇನ್ನು ವಿರೋಧ ಪಕ್ಷದ ಶಾಸಕ ನಾಗೇಂದ್ರ ಡೈರೆಕ್ಟರ್​ಗೆ ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ.

ಬಳ್ಳಾರಿಯಲ್ಲಿ ಮಾತನಾಡಿದ ಶಾಸಕ ಜಿ.ಸೋಮಶೇಖರ ರೆಡ್ಡಿ, ಸಚಿವ ಡಾ. ಸುಧಾಕರ್ ವಿರುದ್ಧ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ವಿಮ್ಸ್ ನಿರ್ದೇಶಕರನ್ನಾಗಿ ಡಾ ಗಂಗಾಧರ ಗೌಡ ಅವರನ್ನು ನೇಮಿಸಬೇಡಿ ಅಂತ ಮೊದಲೇ ತಿಳಿಸಿದ್ದೆ. ಆದರೆ, ಡಾ ಸುಧಾಕರ್ ನಮ್ಮ‌ ಮಾತನ್ನು ಕೇಳದೇ ಗಂಗಾಧರ ಗೌಡ ಅವರನ್ನು ವಿಮ್ಸ್ ಡೈರೆಕ್ಟರ್ ಆಗಿ ನೇಮಿಸಿದ್ದರು. ಇದೀಗ ಈ ಎಲ್ಲ ಎಡವಟ್ಟುಗಳಿಗೆ ಕಾರಣವಾಗಿದೆ ಎಂದು ಆರೋಪ ಮಾಡಿದ್ದಾರೆ.

ವಿಮ್ಸ್ ನಿರ್ದೇಶಕ ಡಾ ಗಂಗಾಧರ ಗೌಡ

ಇದೇ ವೇಳೆ, ಕಾಂಗ್ರೆಸ್ ಪಕ್ಷದ ಬಳ್ಳಾರಿ ಗ್ರಾಮೀಣ ಶಾಸಕ ನಾಗೇಂದ್ರ ಇಂದು ಪ್ರತಿಭಟನೆ ನಡೆಸಿ, ಡಿಸಿ ಅವರಿಗೆ ಮನವಿ ಸಲ್ಲಿಸಿದರು. ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಅವರು ಅವಿವೇಕಿಗಳು, ಬಿಜೆಪಿ ಕೊಲೆ ಗಡುಕ ಸರ್ಕಾರ ಎಂದು ಶಾಸಕರು ಜರಿದರು. ಕೂಡಲೇ ಮುಖ್ಯಮಂತ್ರಿಗಳು, ವೈದ್ಯಕೀಯ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು. ನಂತರ ವಿಮ್ಸ್​ಗೆ ತೆರಳಿ ನಿರ್ದೇಶಕ ಗಂಗಾಧರ ಗೌಡ ಅವರಿಗೂ ಕ್ಲಾಸ್ ತೆಗೆದುಕೊಂಡರು. ಕೂಡಲೇ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.

ವಿಮ್ಸ್ ನಿರ್ದೇಶಕ ಡಾ.ಗಂಗಾಧರ ಗೌಡ ಇವತ್ತು ನೀಡಿದ ಹೇಳಿಕೆ ಬಿಗ್ ಟ್ವಿಸ್ಟ್​ಗೆ ಕಾರಣವಾಗಿದೆ. ವಿಮ್ಸ್​ನಲ್ಲಿ ನಡೆದಿರುವ ಈ ಘಟನೆ ಕೆಲವರಿಂದ ನಡೆಸಿರುವ ದುರುದ್ದೇಶದ ಸಂಚು. ಈ ಬಗ್ಗೆ ಸಮಗ್ರ ಮಾಹಿತಿ ಕಲೆ ಹಾಕಲಾಗುತ್ತಿದೆ. ದುರುದ್ದೇಶದ ಪ್ರಕರಣದ ಬಗ್ಗೆ ಜಿಲ್ಲಾಧಿಕಾರಿಗಳ ಜೊತೆ ಚರ್ಚೆ ನಡೆಸಿದ್ದೇನೆ. ಸಮಗ್ರ ಮಾಹಿತಿ ಹಾಗೂ ದಾಖಲಾತಿ ಸಂಗ್ರಹಿಸಿ ಎಫ್​ಐಆರ್ ದಾಖಲಿಸುವೆ. ಕೆಲವೇ ದಿನಗಳಲ್ಲಿ ಈ ಪ್ರಕರಣದ ಬಗ್ಗೆ ನಿಜಾಂಶ ಹೊರಬರಲಿದೆ ಎಂದಿದ್ದಾರೆ.

ಈಗಾಗಲೇ ದುರಂತದ ಬಗ್ಗೆ ಉನ್ನತ ಮಟ್ಟದ ತನಿಖಾ ಸಮಿತಿ ವಿಮ್ಸ್​ಗೆ ಭೇಟಿ ನೀಡಿ ಪರಿಶೀಲಿಸಿದ್ದು, ಶೀಘ್ರದಲ್ಲೇ ಸರ್ಕಾರಕ್ಕೆ ತನಿಖಾ ವರದಿ ಸಲ್ಲಿಸಲಿದೆ. ವಿಧಾನಸಭೆಯಲ್ಲಿ ವಿಮ್ಸ್ ವಿಷಯ ಚರ್ಚೆಗೆ ಕಾರಣವಾಗಿದ್ದರಿಂದ ಪ್ರಕರಣಕ್ಕೆ ಸಂಬಂಧಿಸಿದಂತೆ ವಾಸ್ತವತೆ ಅರಿತುಕೊಳ್ಳಲು ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಅವರು ಭಾನುವಾರ ಬಳ್ಳಾರಿಗೆ ಆಗಮಿಸಿ ವಿಮ್ಸ್​ಗೆ ಭೇಟಿ ನೀಡಲಿದ್ದಾರೆ.

ಇದನ್ನೂ ಓದಿ: ವಿಮ್ಸ್ ಆಸ್ಪತ್ರೆ ದುರಂತ: ಸಚಿವ ಸುಧಾಕರ್ ವಿರುದ್ಧ ಶಾಸಕ ಸೋಮಶೇಖರ ರೆಡ್ಡಿ ಅಸಮಾಧಾನ

Last Updated : Sep 17, 2022, 10:08 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.