ETV Bharat / state

ಬಳ್ಳಾರಿ: ಹಾಸ್ಟೆಲ್​​ ಸೌಲಭ್ಯ ದೊರೆಯದವರಿಗೆ ವಿದ್ಯಾಸಿರಿ ಯೋಜನೆ ಸೌಲಭ್ಯ - Karnataka Housing Board

ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ಹಾಸ್ಟೆಲ್​​ಗಳಲ್ಲಿ ಅವಕಾಶ ಸಿಗದ ವಿದ್ಯಾರ್ಥಿಗಳಿಗೆ ವಿದ್ಯಾಸಿರಿ ಯೋಜನೆ ಸೌಲಭ್ಯ ನೀಡಲಾಗುವುದು ಎಂದು ಬಳ್ಳಾರಿ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಎಸ್.ಆರ್.ಸುರೇಶ್ ಬಾಬು ತಿಳಿಸಿದರು.

ಹಿಂದುಳಿದ ವರ್ಗಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಎಸ್.ಆರ್ ಸುರೇಶ್ ಬಾಬು ಮಾಹಿತಿ ನೀಡಿದರು
author img

By

Published : Aug 20, 2019, 11:41 AM IST

ಬಳ್ಳಾರಿ: ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ಹಾಸ್ಟೆಲ್​​ಗಳಲ್ಲಿ ಅವಕಾಶ ಸಿಗದ ವಿದ್ಯಾರ್ಥಿಗಳಿಗೆ ವಿದ್ಯಾಸಿರಿ ಯೋಜನೆ ಸೌಲಭ್ಯ ನೀಡಲಾಗುವುದು ಎಂದು ಬಳ್ಳಾರಿ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಎಸ್.ಆರ್.ಸುರೇಶ್ ಬಾಬು ತಿಳಿಸಿದರು.

ನಗರದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಕಚೇರಿಯಲ್ಲಿ ಈಟಿವಿ ಭಾರತದೊಂದಿಗೆ ಮಾತನಾಡಿ, ಹಿಂದುಳಿದ ವರ್ಗಗಳ ವಿದ್ಯಾರ್ಥಿ ನಿಲಯಗಳಲ್ಲಿ 2019-20ನೇ ಸಾಲಿನಲ್ಲಿ 2587 ವಿದ್ಯಾರ್ಥಿಗಳು ಮರು ನೋಂದಣಿ ಮಾಡಿಕೊಂಡಿದ್ದಾರೆ. ಒಟ್ಟು 3013 ವಿದ್ಯಾರ್ಥಿಗಳಿಗೆ ನೋಂದಣಿ ಮಾಡಿಕೊಳ್ಳಲು ಅವಕಾಶವಿದೆ. ಆದರೆ 11,470 ವಿದ್ಯಾರ್ಥಿಗಳು ಈ ಹಾಸ್ಟೆಲ್​​ಗಳಿಗೆ ಅರ್ಜಿ ಸಲ್ಲಿಸಿದ್ದರು. ಆದ್ದರಿಂದ 8457 ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸೌಲಭ್ಯ ದೊರೆತಿಲ್ಲ. ಹಾಸ್ಟೆಲ್ ಬದಲಾಗಿ ಸರ್ಕಾರದ ಕಡೆಯಿಂದ ತಿಂಗಳಿಗೆ ಒಬ್ಬ ವಿದ್ಯಾರ್ಥಿಗೆ 1500 ರೂಪಾಯಿಯಂತೆ 10 ತಿಂಗಳವರೆಗೆ ವಿದ್ಯಾಸಿರಿ ಯೋಜನೆಯಲ್ಲಿ ಹಣ ನೀಡಲಾಗಿದೆ. 2018-19ನೇ ಸಾಲಿನಲ್ಲಿ ಮೆಟ್ರಿಕ್ ನಂತರದಲ್ಲಿ 3,880 ವಿದ್ಯಾರ್ಥಿಗಳಿಗೆ ವಿದ್ಯಾಸಿರಿ ಯೋಜನೆ ಅಡಿಯಲ್ಲಿ 3 ಕೋಟಿ 98 ಲಕ್ಷ 98 ಸಾವಿರ ಪಾವತಿ ಮಾಡಲಾಗಿದೆ ಎಂದರು.

ಹಿಂದುಳಿದ ವರ್ಗಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಎಸ್.ಆರ್.ಸುರೇಶ್ ಬಾಬು

ಜಿಲ್ಲೆಯಲ್ಲಿ 59 ಮೆಟ್ರಿಕ್ ಪೂರ್ವ ಮತ್ತು 56 ಮೆಟ್ರಿಕ್ ನಂತರದ ಹಾಸ್ಟೆಲ್​ಗಳಿವೆ. ಮೆಟ್ರಿಕ್ ಪೂರ್ವ ಹಾಸ್ಟೆಲ್​​ನಲ್ಲಿ 3930 ವಿದ್ಯಾರ್ಥಿಗಳು, ಮೆಟ್ರಿಕ್ ನಂತರದಲ್ಲಿನ ಹಾಸ್ಟೆಲ್​​ನಲ್ಲಿ 5775 ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಅವಕಾಶ ಕಲ್ಪಿಸಲಾಗಿದೆ ಎಂದು ಮಾಹಿತಿ ನೀಡಿದರು.

ವಸತಿ ನಿಲಯಗಳ ಖರ್ಚು ವೆಚ್ಚ ಹೇಗೆ :

115 ವಸತಿ ನಿಲಯಗಳಲ್ಲಿ 50 ಸ್ವಂತ ಕಟ್ಟಡಗಳು, 3 ಉಚಿತ ಕಟ್ಟಡಗಳಿವೆ. 62 ವಸತಿ ನಿಲಯದ ಕಟ್ಟಡಗಳು ಬಾಡಿಗೆಯಲ್ಲಿ ನಡೆಯುತ್ತಿದೆ. ಅದರ ತಿಂಗಳ ವೆಚ್ಚ 9 ಲಕ್ಷ 7 ಸಾವಿರ 860 ರೂಪಾಯಿ ಪಾವತಿ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಪ್ರಸ್ತುತ 56 ವಸತಿ ನಿಲಯಗಳಿಗಾಗಿ ಸರ್ಕಾರ ಸ್ಥಳೀಯ ಸಂಸ್ಥೆ ಹಾಗೂ ಸ್ಥಾಯಿ ಸಮಿತಿಗಳಿಂದ ಜಮೀನನನ್ನು ಪಡೆದುಕೊಂಡಿದೆ. ಇದರಲ್ಲಿ 10 ವಸತಿ ನಿಲಯಗಳಿಗೆ ವಿವಿಧ ಯೋಜನೆಗಳಾದ ಎಸ್.ಡಿ.ಪಿ ( ಸ್ಪೇಷನ್ ಡೆವಲಪ್ಮೆಂಟ್ ಪ್ಲಾನ್) ಸಂಡೂರು, ಸಿರುಗುಪ್ಪ ಹಾಗೂ ಕರ್ನಾಟಕ ಹೌಸಿಂಗ್ ಬೋರ್ಡ್​ನಿಂದ ಹೊಸಪೇಟೆ, ತಂಬ್ರಹಳ್ಳಿ ವಸತಿ ನಿಲಯ ಕಟ್ಟಡ ಆರಂಭವಾಗಿದೆ ಎಂದರು.

ಕ್ರೈಸ್ಟ್​​ನಿಂದ ನಾಲ್ಕು ವಸತಿ ನಿಲಯ ಇಲಾಖೆಯ ವಶಕ್ಕೆ:

ಬಳ್ಳಾರಿ ಜಿಲ್ಲೆಯಲ್ಲಿ ಕ್ರೈಸ್ಟ್ ಅಧಿನದಲ್ಲಿದ್ದ ತಂಬ್ರಹಳಿ ಪಟ್ಟಣ, ತೆಲುಗುಹಳ್ಳಿ, ಬೂದನೂರ್, ಹೊಸಪೇಟೆ ಆರ್.ಟಿ.ಒ ಕಚೇರಿ ಹಿಂಭಾಗ ಸೇರಿ ಒಟ್ಟು ನಾಲ್ಕು ವಸತಿ ನಿಲಯಗಳನ್ನು ಪಡೆದುಕೊಂಡಿದ್ದೇವೆ ಎಂದು ತಿಳಿಸಿದರು.

ಮುಂದಿನ ಯೋಜನೆಗಳು ಏನು ?

ಸ್ವಂತ ಕಟ್ಟಡಗಳು ಇದ್ದಲ್ಲಿ ಹೆಚ್ಚಿನ ಸೌಲಭ್ಯಗಳನ್ನು ನೀಡಬಹುದು. ಕೆ.ಎಂ.ಇ.ಆರ್.ಸಿಯಿಂದ ವರ್ಷಕ್ಕೆ 300 ಕೋಟಿ ಕ್ರಿಯಾ ಯೋಜನೆ ತಯಾರಿಸಿ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ್ದೇವೆ. ಅದು ಜಾರಿಯಾದರೆ ಶೈಕ್ಷಣಿಕವಾಗಿ ಉತ್ತಮ ಬದಲಾವಣೆಯನ್ನು ಕಾಣಬಹುದು. ಉದಾಹರಣೆಗೆಯಾಗಿ ಸ್ಮಾರ್ಟ್​ ಕ್ಲಾಸ್ ಮತ್ತು ಮಲ್ಟಿ ಪರ್ಪಸ್ ಕಟ್ಟಡದಲ್ಲಿ ಕಂಪ್ಯೂಟರ್ ಲ್ಯಾಬ್, ಇ- ಲೈಬ್ರರಿ ಮತ್ತು ವಿದ್ಯಾರ್ಥಿಗಳಿಗೆ ಸಮಾಲೋಚನೆ ಮಾಡುವ ಅವಕಾಶ ಸಿಗಬಹುದು ಎಂದು ತಿಳಿಸಿದರು‌.

Intro:
ಗಣಿನಾಡು ಬಳ್ಳಾರಿ ಜಿಲ್ಲೆಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವಿಶೇಷ ವರದಿ.

ಬಳ್ಳಾರಿ ಜಿಲ್ಲೆಯಲ್ಲಿ 59 ಮೆಟ್ರಿಕ್ ಪೂರ್ವ ಮತ್ತು 56 ಮೆಟ್ರಿಕ್ ನಂತರದ ಹಾಸ್ಟೆಲ್ ಗಳ ಇವೆ. ಮೆಟ್ರಿಕ್ ಪೂರ್ವ ಹಾಸ್ಟೆಲ್ ನಲ್ಲಿ 3930 ವಿದ್ಯಾರ್ಥಿಗಳು, ಮೆಟ್ರಿಕ್ ನಂತರದಲ್ಲಿನ ಹಾಸ್ಟೆಲ್ ನಲ್ಲಿ 5775 ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಅವಕಾಶ ಕಲ್ಪಿಸಿದೆ‌ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಎಸ್.ಆರ್ ಸುರೇಶ್ ಬಾಬು ತಿಳಿಸಿದರು.

------------------

ಬೈಟ್ :-

ಎಸ್. ಆರ್ ಸುರೇಶ್ ಬಾಬು,
ಜಿಲ್ಲಾ ಅಧಿಕಾರಿಗಳು ,
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ,
ಬಳ್ಳಾರಿ.

Body:ನಗರದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಕಚೇರಿಯಲ್ಲಿ ಈಟಿವಿ ಭಾರತ ನೊಂದಿಗೆ ಮಾತನಾಡಿದ ಅವರು 2019-2020ನೇ ಸಾಲಿನಲ್ಲಿ 2587 ಮರು ನೋಂದಣಿ ವಿದ್ಯಾರ್ಥಿಗಳು ಮಾಡಿಕೊಂಡಿದ್ದಾರೆ,
ಒಟ್ಟು 3013 ವಿದ್ಯಾರ್ಥಿಗಳಿಗೆ ನೋಂದಣಿ ಮಾಡಿಕೊಳ್ಳಲು ಅವಕಾಶವಿದೆ ಆದ್ರೇ 11,470 ವಿದ್ಯಾರ್ಥಿಗಳು ಈ ಹಾಸ್ಟೆಲ್ ಗಳಿಗೆ ಅರ್ಜಿಗಳನ್ನು ಸಲ್ಲಿಸಿದರು ಎಂದು ತಿಳಿಸಿದರು.

------------------------

ಹಾಸ್ಟೆಲ್ ಬದಲಿಗೆ ವಿದ್ಯಾಸಿರಿ ಯೋಜನೆ :-

8457 ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸೌಲಭ್ಯ ದೊರೆತಿಲ್ಲ, ಹಾಸ್ಟೆಲ್ ಬದಲಾಗಿ ಸರ್ಕಾರ ಕಡೆಯಿಂದ ತಿಂಗಳಿಗೆ
ಒಬ್ಬ ವಿದ್ಯಾರ್ಥಿಗೆ 1500 ರೂಪಾಯಿಯಂತೆ 10 ತಿಂಗಳವರೆಗೆ ( 1500*10 ತಿಂಗಳು = 15,000 ರೂಪಾಯಿ ) ವಿದ್ಯಾಸಿರಿ ಯೋಜನೆ ನೀಡಲಾಗಿದೆ ಎಂದರು.

ಕಳೆದ 2018-2019ನೇ ಸಾಲಿನಲ್ಲಿ ಮೆಟ್ರಿಕ್ ನಂತರದಲ್ಲಿ 3,880 ವಿದ್ಯಾರ್ಥಿಗಳಿಗೆ ವಿದ್ಯಾಸಿರಿ ಯೋಜನೆ ಅಡಿಯಲ್ಲಿ
3 ಕೋಟಿ 98 ಲಕ್ಷ 98 ಸಾವಿರ ಪಾವತಿ ಮಾಡಿದ್ದಾರೆ ಎಂದರು.

----------------------------

ವಸತಿ ನಿಲಯಗಳ ಖರ್ಚು ವೆಚ್ಚ ಹೇಗೆ :-

115 ವಸತಿ ನಿಲಯಗಳಲ್ಲಿ 50 ಸ್ವತಃ ಕಟ್ಟಡಗಳು, 3 ಉಚಿತ ಕಟ್ಟಡಗಳು ಅವು ದಾನಿಗಳಿಂದ ನಡೆಯುತ್ತಿದೆ.
62 ವಸತಿ ನಿಲಯದ ಕಟ್ಟಡಗಳು ಬಾಡಿಗೆಯಲ್ಲಿ ನಡೆಯುತ್ತಿದೆ. ಅದರ ತಿಂಗಳ ವೆಚ್ಚ 9 ಲಕ್ಷದ, 7 ಸಾವಿರ, 860 ರೂಪಾಯಿ ಯನ್ನು ಪಾವತಿ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಪ್ರಸ್ತುತ 56 ವಸತಿ ನಿಲಯಗಳ ಬಗ್ಗೆ ಸರ್ಕಾರ ಕಡೆಯಿಂದ ನಿವೇಶನವನ್ನು ಸ್ಥಳೀಯ ಸಂಸ್ಥೆಗಳಿಂದ, ಸ್ಥಾಯಿ ಸಮಿತಿಯಿಂದ ಸರ್ಕಾರದ ಜಮೀನನನ್ನು ಪಡೆದುಕೊಂಡಿದೆ ಎಂದರು. ಇದರಲ್ಲಿ 10 ವಸತಿ ನಿಲಯಗಳಿಗೆ ವಿವಿದ ಯೋಜನೆಗಳಾದ ಎಸ್.ಡಿ.ಪಿ ( ಸ್ಪೇಷನ್ ಡೆವಲಪ್ಮೆಂಟ್ ಪ್ಲಾನ್) ನಲ್ಲಿ ಸಂಡೂರು, ಸಿರುಗುಪ್ಪ,
ಕರ್ನಾಟಕ ಹೌಸಿಂಗ್ ಬೋರ್ಡ್ ನಿಂದ ಹೊಸಪೇಟೆ, ತಂಬ್ರಹಳ್ಳಿ ವಸತಿ ನಿಲಯ ಕಟ್ಟಡ ಆರಂಭವಾಗಿದೆ ಎಂದರು.

----------------------

ಕ್ರೈಸ್ಟ್ ನಿಂದ ನಾಲ್ಕು ವಸತಿ ನಿಲಯ ಇಲಾಖೆಯ ವಶಕ್ಕೆ:-

ಬಳ್ಳಾರಿ ಜಿಲ್ಲೆಯಲ್ಲಿನ ಕ್ರೈಸ್ಟ್ ವತಿಯಿಂದ ತಂಬ್ರಹಳಿ ಸಿಟಿ ಮತ್ತು ತೆಲುಗುಹಳ್ಳಿ, ಬೂದನೂರ್, ಹೊಸಪೇಟೆ ಆರ್.ಟಿ.ಓ ಕಚೇರಿ ಹಿಂಭಾಗದಲ್ಲಿ ಒಟ್ಟು ನಾಲ್ಕು ವಸತಿ ನಿಲಯಗಳನ್ನು ಪಡೆದುಕೊಂಡಿದ್ದೇವೆ ಎಂದು ತಿಳಿಸಿದರು.

---------------------------------

ಇಲಾಖೆಯಲ್ಲಿ ಕಾರ್ಯನಿರ್ವಹಿಸುವ ಹುದ್ದೆಗಳು :-

ಪುರುಷರಿಗೆ ಸೂಪಡೆಂಟ್ 58 ಹುದ್ದೆ ಇದ್ದು, 41 ಹುದ್ದೆ ಭರ್ತಿ,
17 ಖಾಲಿ ಇವೆ.
ಮಹಿಳೆಯರಿಗೆ ಸೂಪಡೆಂಟ್ 30 ಹುದ್ದೆ ಇದ್ದು, 15 ಭರ್ತಿ, 15 ಖಾಲಿ ಇದೆ.

ಆಶ್ರಮ ಶಾಲೆಯ ಪುರುಷ ವಾರ್ಡನ್ 4 ಹುದ್ದೆ ಇದ್ದು, 3 ಭರ್ತಿ, 1 ಖಾಲಿ‌ ಇದೆ.ಮಹಿಳಾ ವಾರ್ಡನ್ 4 ಹುದ್ದೆ ಇದ್ದು, 1 ಭರ್ತಿ, 3 ಖಾಲಿ ಇದೆ.

ಸಹಾಯಕ ವಾರ್ಡನ್ ಪುರುಷರು 4 ಹುದ್ದೆ ಇದ್ದು, 1 ಭರ್ತಿ, 3 ಖಾಲಿ ಇದೆ. ಸಹಾಯಕ ವಾರ್ಡನ್ ಮಹಿಳೆ 2 ಹುದ್ದೆ, 2 ಭರ್ತಿ.

ವಾರ್ಡನ್ ಪುರುಷರಲ್ಲಿ 8 ಹುದ್ದೆ ಇದ್ದು, 1 ಭರ್ತಿ, 7 ಖಾಲಿ ಇದೆ. ವಾರ್ಡನ್ ಮಹಿಳೆ 2 ಹುದ್ದೆ ಇದ್ದು, 2 ಭರ್ತಿ.

ಅಡುಗೆ ಭಟರ 237 ಹುದ್ದೆಗಳು ಇದ್ದು, 140 ಭರ್ತಿ, 97 ಖಾಲಿ.
ಅಡುಗೆ ಸಹಾಯಕರ 166 ಹುದ್ದೆಗಳು ಇದ್ದು, 91 ಭರ್ತಿ, 75 ಖಾಲಿ ಇದೆ.

32 ಬಾಲಕಿಯರ ಮತ್ತು ಮಹಿಳಾ ವಸತಿ ನಿಲಯಗಳಲ್ಲಿ
ನೈಟ್ ವಾಚ್ ಮ್ಯಾನ್ ಇದ್ದಾರೆ ಎಂದು ತಿಳಿಸಿದರು.

ಅಡುಗೆ ಭಟರು, ಅಡುಗೆ ಸಹಾಯಕರು ಮತ್ತು ನೈಟ್ ವಾಚ್ ಮ್ಯಾನ್ ಗಳನ್ನು ಹೊರಗುತ್ತಿಗೆಯ ಟೆಂಡರ್ ಮೂಲಕ ತೆಗೆದುಕೊಳ್ಳಲಾಗುತ್ತದೆ ಎಂದರು.

ಈ ಮೇಲಿನ ಖಾಲಿ ಹುದ್ದೆಗಳಿಗೆ ಯಾವುದೇ ಹೊರಗುತ್ತಿಗೆಯಿಂದ ನೇಮಕಾತಿಗೆ ಅವಕಾಶವಿಲ್ಲ ಏಕೆಂದರೆ ಹಣದ ವ್ಯವಹಾರ ಇರುತ್ತದೆ, ಒಂದೇ ಕ್ಯಾಂಪಸ್ಸ್ ನಲ್ಲಿ ಒಂದಕ್ಕಿಂತ ಹೆಚ್ಚಿನ ಹಾಸ್ಟೆಲ್ ಇದಲ್ಲಿ ಹತ್ತಿರ ಇರುವ ವಾರ್ಡನ್ ಗಳು ಅಥವಾ ಸೂಪಡೆಂಟ್ ಗಳಿಗೆ ಹೆಚ್ಚಿನ ಉಸ್ತುವಾರಿ ನೋಡಿಕೊಳ್ಳಲು ಸೂಚಿಸಲಾಗುತ್ತದೆ ಎಂದರು.

------------------------------------

ಮುಂದಿನ ಯೋಜನೆಗಳು ಏನು ?

ಸ್ವತಃ ಕಟ್ಟಡಗಳು ಇದ್ದಲ್ಲಿ ಹೆಚ್ಚಿನ ಸೌಲಭ್ಯಗಳನ್ನು ನೀಡಬಹುದು. ಕೆ.ಎಂ.ಇ.ಆರ್.ಸಿ ಯಿಂದ ವರ್ಷಕ್ಕೆ 300 ಕೋಟಿ ಕ್ರಿಯಾ ಯೋಜನೆಯಲ್ಲಿ ತಯಾರಿಸಿ ಜಿಲ್ಲಾಧಿಕಾರಿ ಗಳಿಗೆ ಮೂಲಕ ಸಲ್ಲಿಸಿದ್ದೆವೆ ಎಂದರು. ಅದು ಜಾರಿಯಾದ್ರೇ ಶೈಕ್ಷಣಿಕವಾಗಿ ಉತ್ತಮ ಬದಲಾವಣೆಯನ್ನು ಕಾಣಬಹುದು. ಉದಾಹರಣೆಗೆಯಾಗಿ ಸ್ಮಾಟ್ ಕ್ಲಾಸ್ ಮತ್ತು ಮಲ್ಟಿಪ್ರಪಸ್ಸ್ ಬಿಲ್ಡಿಂಗ್ ನಲ್ಲಿ ಕಂಪ್ಯೂಟರ್ ಲಾಬ್, ಇ- ಲೈಬ್ರರಿ, ಬೈನಿಂಗ್ ಹಾಲ್ ಮತ್ತು ವಿದ್ಯಾರ್ಥಿಗಳಿಗೆ ಸಮಲೋಚನೆ ಮಾಡುವ ಕಂಪ್ಯೂಟರ್ ಸಹ ಆಗಬಹುದು ಎಂದು ತಿಳಿಸಿದರು‌.

59 ಮೆಟ್ರಕ್ ಪೂರ್ವ ಹಂತ 1 ರಿಂದ 10 ನೇ ತರಗತಿವರೆಗೆ ವಿದ್ಯಾರ್ಥಿಗಳು ವಸತಿ ನಿಲಯಗಳಲ್ಲಿ ಸ್ಮಾಟ್ ಕ್ಲಾಸ್ ಮಾಡುವ ವ್ಯವಸ್ಥೆ ಮಾಡಲಾಗಿದೆ.

------------------------

Conclusion:ಒಟ್ಟಾರೆಯಾಗಿ ಜಿಲ್ಲೆಯಲ್ಲಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿನ ವಿವಿಧ ಹುದ್ದೆಗಳನ್ನು ಭರಿಸಿ, ಸ್ವತಂ ಕಟ್ಟಡಗಳನ್ನು ಸರ್ಕಾರ ಕಟ್ಟಿದರೇ ಖರ್ಚು ಕಡಿಮೆಯಾಗುತ್ತದೆ.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.