ETV Bharat / state

ಬಳ್ಳಾರಿ ಜನರ ಸಮಸ್ಯೆಗಳಿಗೆ ಸ್ಪಂದಿಸುವೆ; ನೂತನ ಡಿಸಿ ಪವನ್ ಕುಮಾರ್ ಮಲಪಾಟಿ - ಬಳ್ಳಾರಿ ಜಿಲ್ಲೆ ಸುದ್ದಿ

ಬಳ್ಳಾರಿ ಜಿಲ್ಲೆಯ ಜನತೆಯ ಎಲ್ಲಾ ಸಮಸ್ಯೆಗೆ ಸ್ಪಂದಿಸುತ್ತೇನೆ ಎಂದು ನೂತನ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕಾರ ಮಾಡಿದ ಪವನ್​ ಕುಮಾರ್​ ಮಲಪಾಟಿ ಹೇಳಿದರು.

Bellary new DC pavan kumar
ಬಳ್ಳಾರಿಗೆ ನೂತನ ಡಿಸಿ ಆಗಮನ
author img

By

Published : Jan 11, 2021, 4:33 PM IST

Updated : Jan 11, 2021, 5:20 PM IST

ಬಳ್ಳಾರಿ: ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಪವನ್​ ಕುಮಾರ್​ ಮಲಪಾಟಿ ಅವರು ಇಂದು ಅಧಿಕಾರ ಸ್ವೀಕರಿಸಿದ್ದಾರೆ.

ಈ ವೇಳೆ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಥಮ ಬಾರಿ ಜಿಲ್ಲಾಧಿಕಾರಿಯಾಗಿ ಆಯ್ಕೆಯಾಗಿದ್ದೇನೆ. ಜನರ ಸಮಸ್ಯೆಗಳು ಏನೇ ಇದ್ರು ತಿಳಿಸಿ ಅದನ್ನು ಬಗೆಹರಿಸುವ ಕೆಲಸ ಮಾಡುತ್ತೇನೆ ಎಂದರು‌.

ಈ ಹಿಂದೆ ವಿಧಾನಸೌಧದಲ್ಲಿ ಆರ್ಥಿಕ ಇಲಾಖೆಯಲ್ಲಿ ತೆರಿಗೆಗಳ ಹೆಚ್ಚುವರಿ ಆಯುಕ್ತರಾಗಿ ಕಾರ್ಯನಿರ್ವಹಿಸಿದ್ದರು. ಅಷ್ಟೇ ಅಲ್ಲದೆ, ಶಿರಸಿ ಮತ್ತು ಹೊಸಪೇಟೆ ಸಹಾಯಕ ಆಯುಕ್ತರಾಗಿ, ಬೀದರ್​ನ​ಲ್ಲಿ ಸಿಇಒ ಆಗಿ ಕೆಲಸ ನಿರ್ವಹಿಸಿದ್ದರು.

ಈ ಸಮಯದಲ್ಲಿ ನಿರ್ಗಮಿತ ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ ಅವರು ನೂತನ ಜಿಲ್ಲಾಧಿಕಾರಿ ಪವನ್‌ ಕುಮಾರ್ ಮಲಪಾಟಿ ಅವರಿಗೆ ಕಚೇರಿಯ ಆವರಣದಲ್ಲಿ ಇರುವ ಕಟ್ಟಡಗಳನ್ನು ತೋರಿಸಿ ಮತ್ತು ಅಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳು, ಸಿಬ್ಬಂದಿಗಳ ಪರಿಚಯ ಮಾಡಿದರು.

Last Updated : Jan 11, 2021, 5:20 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.