ETV Bharat / state

9 ತಿಂಗಳಿಂದ ತರಗತಿ ನಡೆಸದೆ, ಪರೀಕ್ಷೆಗೆ ಸಿದ್ಧತೆ.. ವೈದ್ಯಕೀಯ ವಿದ್ಯಾರ್ಥಿಗಳ ಗೋಳು ಕೇಳೋರ್ಯಾರು? - ವೈದ್ಯಕೀಯ ವಿದ್ಯಾರ್ಥಿಗಳು ಕಾಲೇಜು ಆರಂಭ

ಆಫ್‌ಲೈನ್ ತರಗತಿಗಳು ಮಾಡದೇ ಪರೀಕ್ಷೆಗಳನ್ನು ನಡೆಸುವುದು ಬೇಡ. ಹಾಗಾಗಿ, ಏಪ್ರಿಲ್‌ ತಿಂಗಳಲ್ಲಿ ಪರೀಕ್ಷೆಗಳನ್ನು ಆಯೋಜನೆ ಮಾಡಿ ಎಂದು ಸಚಿವರಿಗೆ ಮತ್ತು ವಿಶ್ವವಿದ್ಯಾಲಯ ಕುಲಪತಿಗಳಿಗೆ ಮನವಿ ಸಲ್ಲಿಸುತ್ತಿದ್ದೇವೆ..

bellary medical students problems news
ವೈದ್ಯಕೀಯ ವಿದ್ಯಾರ್ಥಿಗಳ ಗೋಳು
author img

By

Published : Nov 24, 2020, 8:22 PM IST

ಬಳ್ಳಾರಿ : ನಗರದ ಜಿಲ್ಲಾಧಿಕಾರಿ ಕಚೇರಿಯ ಆವರಣದಲ್ಲಿ ಇಂದು ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ ಆರ್ಗನೈಸೇಶನ್ ನೇತೃತ್ವದಲ್ಲಿ ವೈದ್ಯಕೀಯ ವಿದ್ಯಾರ್ಥಿಗಳು ಕಾಲೇಜು ಆರಂಭವಾಗಿ ಮೂರು-ನಾಲ್ಕು ತಿಂಗಳ ನಂತರ ಪರೀಕ್ಷೆಗಳ ದಿನಾಂಕವನ್ನು ನಿಗದಿ ಮಾಡಿ ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ವೈದ್ಯಕೀಯ ವಿದ್ಯಾರ್ಥಿಗಳ ಗೋಳು

ಈ ಸಮಯದಲ್ಲಿ ವೈದ್ಯಕೀಯ ವಿದ್ಯಾರ್ಥಿನಿ ಪೂಜಾ ಮಾತನಾಡಿ, ಕಾಲೇಜಿಗೆ ಒಂದೂವರೆ ತಿಂಗಳು ಮಾತ್ರ ಹೋಗಿದ್ದೇವೆ. ಆದರೆ, ಈ ಲಾಕ್‌ಡೌನ್‌ನಿಂದಾಗಿ ಯಾವುದೇ ಪಾಠಗಳು, ಪ್ರಾಯೋಗಿಕ ವಿಷಯಗಳು ನಡೆದಿಲ್ಲ. ನಾನು ಒಂದು ತಿಂಗಳು ಲಾಕ್‌ಡೌನ್ ಆಗುತ್ತೆ ಅಂತಾ ಅಂದುಕೊಂಡಿದ್ದೆ. ಆದರೆ, 9 ತಿಂಗಳು ಲಾಕ್‌ಡೌನ್ ಆಗಿದೆ. ಯಾವುದೇ ಪುಸ್ತಕಗಳನ್ನು ಮನೆಗಳಿಗೆ ತೆಗೆದುಕೊಂಡು ಹೋಗಿಲ್ಲ.

ಎಂಸಿಎಲ್ ಅವರು ಕಾಲೇಜ್ ಆರಂಭವಾದ ಮೂರು ತಿಂಗಳ ನಂತರ ಪರೀಕ್ಷೆಗಳನ್ನು ನಿಗದಿ ಮಾಡುತ್ತೇವೆ ಎಂದು ಹೇಳಿದ್ದಾರೆ. ಆದರೆ, ಏಕಾಏಕಿ ಕಾಲೇಜ್ ಒಪನ್ ಆಗಿಲ್ಲ, ತಿಂಗಳಲ್ಲಿ ಪರೀಕ್ಷೆಗಳನ್ನು ಬರೆಯಿರಿ ಎಂದರೆ ಹೇಗೆ ಬರೆಯಬೇಕು ಎಂದು ಪ್ರಶ್ನೆ ಮಾಡಿದರು‌. ಹಾಗಾಗಿ, ಪರೀಕ್ಷೆಗಳನ್ನು ಮುಂದೂಡಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿಕೊಂಡರು.

bellary medical students problems news
ವೈದ್ಯಕೀಯ ವಿದ್ಯಾರ್ಥಿಗಳ ಗೋಳು

ನಂತರ ಎಐಡಿಎಸ್​​ಒ ಜಿಲ್ಲಾಧ್ಯಕ್ಷ ಜಿ.ಸುರೇಶ್ ಮಾತನಾಡಿ, ಕರ್ನಾಟಕ ರಾಜ್ಯಾದ್ಯಂತ ಮೆಡಿಕಲ್ ವಿದ್ಯಾರ್ಥಿಗಳ ಹೋರಾಟ ನಡೆಯುತ್ತಿದೆ. ಮೆಡಿಕಲ್ ವಿಶ್ವವಿದ್ಯಾಲಯ ಜನವರಿ 19ರಂದು ವಿದ್ಯಾರ್ಥಿಗಳಿಗೆ ಪರೀಕ್ಷೆ ವೇಳಾಪಟ್ಟಿ ಆದೇಶ ಹೊರಡಿಸಿದ್ದಾರೆ.

ಆಫ್‌ಲೈನ್ ತರಗತಿಗಳು ಮಾಡದೇ ಪರೀಕ್ಷೆಗಳನ್ನು ನಡೆಸುವುದು ಬೇಡ. ಹಾಗಾಗಿ, ಏಪ್ರಿಲ್‌ ತಿಂಗಳಲ್ಲಿ ಪರೀಕ್ಷೆಗಳನ್ನು ಆಯೋಜನೆ ಮಾಡಿ ಎಂದು ಸಚಿವರಿಗೆ ಮತ್ತು ವಿಶ್ವವಿದ್ಯಾಲಯ ಕುಲಪತಿಗಳಿಗೆ ಮನವಿ ಸಲ್ಲಿಸುತ್ತಿದ್ದೇವೆ ಎಂದು ತಿಳಿಸಿದರು.

ಇದನ್ನು ಓದಿ: ಉಪಚುನಾವಣೆ ಎರಡು ಕ್ಷೇತ್ರಕ್ಕೆ ರಾಜ್ಯ ಸರ್ಕಾರದಿಂದ ಬಂಪರ್ ಕೊಡುಗೆ; 7500 ಮನೆ ಭಾಗ್ಯ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.