ಬಳ್ಳಾರಿ: ಸತತ ಹನ್ನೆರಡು ವರ್ಷಗಳ ಪ್ರಯತ್ನದ ಫಲವಾಗಿ ಇಲ್ಲಿನ ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ ಆಸ್ಪತ್ರೆ ಆವರಣದಲ್ಲಿರುವ ಸರ್ಕಾರಿ ದಂತ ಕಾಲೇಜು ಹಾಗೂ ಸಂಶೋಧನಾ ಸಂಸ್ಥೆಗೆ ಪ್ರಸಕ್ತ ಸಾಲಿನ ಮಾನ್ಯತೆ ದೊರೆತಿದೆ. ಇದರಿಂದ ನೂರಾರು ವಿದ್ಯಾರ್ಥಿಗಳ ದಂತ ಚಿಕಿತ್ಸೆ ಅಭ್ಯಾಸಕ್ಕೆ(ಪ್ರಾಕ್ಟೀಸ್) ಅನುಕೂಲಕರ ಆಗಿದೆ.
ಹೌದು, ಸತತ ನಾಲ್ಕು ವರ್ಷಗಳಿಂದಲೂ ಈ ಕಾಲೇಜಿಗೆ ಡೆಂಟಲ್ ಕೌನ್ಸಿಲ್ ಆಫ್ ಇಂಡಿಯಾದಿಂದ ಮಾನ್ಯತೆಯೇ ನೀಡಲಾಗಿರಲಿಲ್ಲ. 2018-19ನೇ ಸಾಲಿನಲ್ಲಿ ವೈದ್ಯಕೀಯ ಶಿಕ್ಷಣ ಸಚಿವರ ಹಾಗೂ ಇಲಾಖೆ ಕಾರ್ಯದರ್ಶಿಯವರ ವಿಶೇಷ ಕಾಳಜಿಯ ಮೇರೆಗೆ ಈ ಮಾನ್ಯತೆ ದೊರೆತಿದ್ದು, ಅದರಿಂದ ಡೆಂಟಲ್ ಕೋರ್ಸ್ ವಿದ್ಯಾರ್ಥಿಗಳಿಗೆ ಮಾನ್ಯತಾ ಪ್ರಮಾಣ ದೊರಕುವುದರ ಜೊತೆಗೆ ಪ್ರಾಕ್ಟೀಸ್ ಗೂ ಅನುಕೂಲ ಆಗಲಿದೆ.
ಈ ಡೆಂಟಲ್ ಕೋರ್ಸ್ ಪೂರ್ಣಗೊಳಿಸಿದ ಕಾಲೇಜಿನ ಅಂದಾಜು 200ಕ್ಕೂ ಹೆಚ್ಚುವಿದ್ಯಾರ್ಥಿಗಳು ದಂತ ಚಿಕಿತ್ಸೆ ಅಭ್ಯಾಸದ ಕೊರತೆ ಎದುರಿಸುತ್ತಿದ್ದರು. ಈಗ ಮಾನ್ಯತೆ ದೊರೆತಿರೋದರಿಂದ ಈಗ ಆ ವಿದ್ಯಾರ್ಥಿಗಳು ನಿಟ್ಟುಸಿರು ಬಿಟ್ಟಿದ್ದಾರೆ.
ಸತತ ನಾಲ್ಕು ವರ್ಷಗಳಕಾಲ ಈ ಸರ್ಕಾರಿ ದಂತ (ಡೆಂಟಲ್) ಕಾಲೇಜು ಮಾನ್ಯತೆಯ ಕೊರತೆ ಎದುರಿಸುತ್ತಿದೆ. ಪ್ರತಿವರ್ಷವೂ ಪರಿಶೀಲನೆಗೆ ಆಗಮಿಸುತ್ತಿದ್ದ ದೆಹಲಿಯ ಡೆಂಟಲ್ ಕೌನ್ಸಿಲ್ ಆಫ್ ಇಂಡಿಯಾದ ಉನ್ನತಾಧಿಕಾರಿಗಳ ತಂಡ, ಡೆಂಟಲ್ ಕಾಲೇಜಿನಲ್ಲಿ ಸುಸಜ್ಜಿತ ಕಟ್ಟಡ, ನಿಗದಿತ ಸಿಬ್ಬಂದಿ ಕೊರತೆ ನೆಪವೊಡ್ಡಿ ಮಾನ್ಯತೆಯನ್ನ ರದ್ದುಪಡಿಸಲಾಗುತ್ತಿತ್ತು.
Body:2013-2014ನೇ ಸಾಲಿನಲ್ಲಿ ದೊರೆತಿದ್ದ ಮಾನ್ಯತೆ ನಂತರ ಈವರೆಗೂ ಮಾನ್ಯತೆ ದೊರಕಲಿಲ್ಲ. ಇದು ಕಾಲೇಜಿನಲ್ಲಿ ಅಭ್ಯಾಸಿಸುತ್ತಿದ್ದ ಡೆಂಟಲ್ ವಿದ್ಯಾರ್ಥಿಗಳಲ್ಲೂ ಆತಂಕ ಮೂಡಿಸಿದ್ದು, ಈಗ 2018-2019ನೇ ಸಾಲಿಗೆ ಮಾನ್ಯತೆ ಲಭಿಸಿರುವ ಹಿನ್ನೆಲೆಯಲ್ಲಿ ಡೆಂಟಲ್ ವಿದ್ಯಾರ್ಥಿಗಳ ಮೊಗದಲಿ ಸಂತಸ ಮೂಡಿಸಿದೆ.
ಅರ್ಹತೆಗಳೇನು..?
ಇಲ್ಲಿನ ಸರ್ಕಾರಿ ದಂತ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಗೆ ಪ್ರತಿವರ್ಷ ಮಾನ್ಯತೆ ಲಭಿಸಬೇಕಾದರೆ ಈ ಕಾಲೇಜಿನಲ್ಲಿ ಕನಿಷ್ಠ ಶೇ.15 ರಷ್ಟು ಸಿಬ್ಬಂದಿ ನಿಯೋಜಿಸಬೇಕು. ಸುಸಜ್ಜಿತ ಕಟ್ಟಡ ಸೇರಿ ಇನ್ನಿತರೆ ಅಗತ್ಯ ಸೌಲಭ್ಯ ಸೇರಿ ಪ್ರತಿದಿನ ಕನಿಷ್ಠ 100 ರಿಂದ 150 ರೋಗಿಗಳು ಆಗಮಿಸಬೇಕು. ಆದರೆ, ಕಾಲೇಜಿ ನಲ್ಲಿ ಸುಸಜ್ಜಿತ ಕಟ್ಟಡವಿದೆಯಾದ್ರೂ, ಕೇವಲ ಶೇ.2ರಷ್ಟು ಸಿಬ್ಬಂದಿ ನಿಯೋಜಿಸಲಾಗಿದೆ. ರೋಗಿಗಳ ಸಂಖ್ಯೆಯೂ ಪ್ರತಿದಿನ ನಿಗದಿತ ಪ್ರಮಾಣದಲ್ಲಿರದ ಕಾರಣ ಡೆಂಟಲ್ ಕೌನ್ಸಿಲ್ ಆಫ್ ಇಂಡಿಯಾ ಮಾನ್ಯತೆ ನೀಡುವಲ್ಲಿ ಹಿಂದೇಟು ಹಾಕುತ್ತಿತ್ತು ಎನ್ನಲಾಗುತ್ತಿದೆ.
ನಿಟ್ಟುಸಿರು ಬಿಟ್ಟ ವಿದ್ಯಾರ್ಥಿಗಳು..!
ಸರ್ಕಾರಿ ದಂತ ಮಹಾವಿದ್ಯಾಲಯದಲ್ಲಿ 50 ವಿದ್ಯಾರ್ಥಿಗಳು ವ್ಯಾಸಂಗಕ್ಕೆ ಅವಕಾಶವಿದೆ. ಮಾನ್ಯತೆ ಲಭಿಸದ ಹಿನ್ನೆಲೆಯಲ್ಲಿ ಕಳೆದ ನಾಲ್ಕು ವರ್ಷಗಳಿಂದ ಒಟ್ಟು 200 ವಿದ್ಯಾರ್ಥಿಗಳು ಸಹ ಮಾನ್ಯತೆಯ ಸಮಸ್ಯೆಯನ್ನು ಎದುರಿಸಬೇಕಾಗಿತ್ತು. ಇದು ವ್ಯಾಸಂಗ ಪೂರ್ಣಗೊಂಡ ಬಳಿಕ ಬೇರೆಡೆ ಪ್ರಾಕ್ಟೀಸ್ ಮಾಡಲು ತೊಡಕಾಗಿ ಪರಿಣಮಿಸಿತ್ತು. ಪ್ರಸಕ್ತ 2018-2019ನೇ ಸಾಲಿಗೆ ದಂತ ಕಾಲೇಜಿಗೆ ಮಾನ್ಯತೆ ಲಭಿಸಿರುವುದು ವಿದ್ಯಾರ್ಥಿಗಳಲ್ಲಿನ ಆತಂಕವನ್ನು ದೂರಮಾಡಿದಂತಾಗಿದ್ದು, ಪ್ರಾಕ್ಟೀಸ್ ಮಾಡಲು ತುಂಬಾ ಅನುಕೂಲ ಕಲ್ಪಿಸಿದಂತಾಗಿದೆ.