ಬಳ್ಳಾರಿ : ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕಾನಾಹೊಸಳ್ಳಿ ಸಮೀಪದ ಎಸ್ ಇಮಡಾಪುರದ ಬಿಷ್ಣಹಳ್ಳಿ ಕ್ರಾಸ್ ಬಳಿಯ ಪುರಾತನ ಸಂಗಪ್ಪನ ಬೆಟ್ಟದಲ್ಲಿನ ಸಂಗಮೇಶ್ವರ ದೇವಸ್ಥಾನದ ಆವರಣದಲ್ಲಿ ಕಾನಾಹೊಸಳ್ಳಿ ಯುವ ಬ್ರಿಗೇಡ್ನ ಯುವಕರ ತಂಡ ಸ್ವಚ್ಛತಾ ಕಾರ್ಯ ಹಮ್ಮಿಕೊಂಡಿತ್ತು.
ಇದೇ ಸಮಯದಲ್ಲಿ ಯುವ ಬ್ರಿಗೇಡ್ನ ಸಂಚಾಲಕ ಪರಶುರಾಮ್ ಮಾತನಾಡಿ, ಮುಂಬರುವ 75ನೇ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ರಾಜ್ಯಾದ್ಯಂತ ಚಕ್ರವರ್ತಿ ಸೂಲಿಬೆಲೆ ಅವರ ಮಾರ್ಗದರ್ಶನದಂತೆ 75 ಸಮಾಜಮುಖಿ ಕಾರ್ಯಗಳನ್ನು ಮಾಡುವ ಪರಿಕಲ್ಪನೆ ಅಡಿ ಕೆಲಸ ಮಾಡುತ್ತೇವೆ.
ಇಂದು ನಮ್ಮ ಮೊದಲನೇಯ ಕ್ಷೇತ್ರ ಸ್ವಚ್ಛತೆಯಲ್ಲಿ ನಮ್ಮ ಭಾಗದ ಪುರಾತನ ದೇವಾಲಯದ ಆವರಣದಲ್ಲಿ ಕಾನಾಹೊಸಹಳ್ಳಿ, ಇಮಡಾಪುರ, ತುಂಬರಗುದ್ದಿ, ರಂಗನಾಥನಹಳ್ಳಿ, ಹುಲಿಕೆರೆ ಯುವಕರೆಲ್ಲ ಸೇರಿ ಸ್ವಚ್ಛತಾ ಕಾರ್ಯಮಾಡಿ ನಂತರ ಗಿಡ ನೆಡುವ ಕಾರ್ಯ ಮಾಡಿದ್ದೇವೆ, ಇದು ನಮಗೆ ತೃಪ್ತಿ ತಂದಿದೆ ಎಂದರು.
ಈ ಸಮಯದಲ್ಲಿ ದೇವಸ್ಥಾನ ಪೂಜಾರಿ ಅಜ್ಜಪ್ಪ ಹಾಗೂ ಇಮಡಾಪುರ ಗ್ರಾಮದ ಕುಬೇರ, ಸಿದ್ದೇಶ್, ನಾಗರಾಜ್, ಬೊಮ್ಮಣ್ಣ, ಬಸವರಾಜ್, ಸಂದೀಪ್, ವಿರೇಶ್, ಮಂಜು, ಕಿರಣ್, ಗಿರೀಶ್, ವಿನೋದ್, ಪರಶುರಾಮ, ಪುನೀತ್ ಐನಾಪುರಿ, ತಿಮ್ಮೇಶ್ ಹಾಗೂ ಕೃಷ್ಣ ಸೇರಿ ಇತರರಿದ್ದರು.