ETV Bharat / state

ಜುಲೈ 12 ರಿಂದ ಬಳ್ಳಾರಿ ಸಾಂಸ್ಕೃತಿಕ ಉತ್ಸವ: ಜಯಪ್ರಕಾಶ್​ ಗುಪ್ತಾ - ಬಳ್ಳಾರಿ

ಮುಂಬರುವ ಜುಲೈ 12,13 ಮತ್ತು 14 ರಂದು ಬಳ್ಳಾರಿ ಸಾಂಸ್ಕೃತಿಕ ಉತ್ಸವ ನಡೆಯಲಿದೆ ಎಂದು ನಿರ್ವಹಣಾ ಸಮಿತಿಯ ಅಧ್ಯಕ್ಷ ಜಯಪ್ರಕಾಶ್​ ಗುಪ್ತಾ ತಿಳಿಸಿದರು.

ಜುಲೈ 12 ರಿಂದ ಬಳ್ಳಾರಿ ಸಾಂಸ್ಕೃತಿಕ ಉತ್ಸವ
author img

By

Published : May 15, 2019, 1:36 PM IST

ಬಳ್ಳಾರಿ: ಜುಲೈ 12,13 ಮತ್ತು 14 ರಂದು ಬಳ್ಳಾರಿ ಸಾಂಸ್ಕೃತಿಕ ಉತ್ಸವ ನಡೆಯಲಿದೆ. ಈ ಕುರಿತು ನಿರ್ವಹಣಾ ಸಮಿತಿಯ ಅಧ್ಯಕ್ಷ ಜಯಪ್ರಕಾಶ್​ ಗುಪ್ತಾ ಮಾಹಿತಿ ನೀಡಿದ್ದಾರೆ.

ನಗರದ ಖಾಸಗಿ ಹೋಟೆಲ್​ನಲ್ಲಿ ಸುದ್ದಿಗಾರರರೊಂದಿಗೆ ಮಾತನಾಡಿದ ಅವರು, ಕಾರ್ಯಕ್ರಮವು ನಗರದ ಸರ್ಕಾರಿ (ಮುನಿಸಿಪಲ್) ಕಾಲೇಜು ಮೈದಾನದಲ್ಲಿ ಮೂರು ದಿನಗಳ ಕಾಲ ನಡೆಯಲಿದೆ ಎಂದು ತಿಳಿಸಿದರು.

ಸಾಂಸ್ಕೃತಿ ಕಾರ್ಯಕ್ರಮ :

ಕಾರ್ಯಕ್ರಮದಲ್ಲಿ ರಾಜ್ಯಮಟ್ಟದ ಚಿತ್ರಕಲೆ, ಜಿಲ್ಲಾ ಮಟ್ಟದ ಕರಕುಶಲ, ಛಾಯಾಚಿತ್ರ, ಸಂಗೀತ, ನೃತ್ಯ, ಜಾನಪದ, ರಂಗಭೂಮಿ, ನಾಟಕ ಸೇರಿದಂತೆ ಹಲವು ಕಲಾವಿದರನ್ನು ಒಂದೇ ಸೂರಿನಡಿ ಕರೆತರುವ ಪ್ರಯತ್ನ ನಡೆಯಲಿದೆ. ಇನ್ನು ಈ ಕಾರ್ಯಕ್ರಮದಲ್ಲಿ ಸಂಗೀತ ರಸಮಂಜರಿ, ಕವಿಗೋಷ್ಠಿ, ಹಾಸ್ಯ, ಹರಟೆ, ಜಾದೂ ಪ್ರದರ್ಶನ, ಮಿಮಿಕ್ರಿ ನಡೆಯುತ್ತದೆ ಎಂದು ಮಾಹಿತಿ ನೀಡಿದರು.

ಜುಲೈ 12 ರಿಂದ ಬಳ್ಳಾರಿ ಸಾಂಸ್ಕೃತಿಕ ಉತ್ಸವ

ಭವ್ಯ ಭಾರತ :

500 ಸಂಗೀತ ವಿದ್ಯಾರ್ಥಿಗಳಿಂದ ನಾಡಗೀತೆ ಹಾಡುವ ಪ್ರಯತ್ನ, ನೃತ್ಯ, ಸಂಗೀತ, ಚಿತ್ರಕಲೆ ಸ್ಪರ್ಧೆಗಳನ್ನು ಮತ್ತು ಬಳ್ಳಾರಿ ಸಂಸ್ಕೃತಿಯ ಬಗ್ಗೆ ರಸಪ್ರಶ್ನೆ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದರು. 500 ಮೀಟರ್ ಉದ್ದದ ಡ್ರಾಯಿಂಗ್ ಕಾಗದದ ಮೇಲೆ ಸಾರ್ವಜನಿಕರಿಂದ ಚಿತ್ರಗಳನ್ನು ಬಿಡಿಸಲು ಅನುವು ಮಾಡಲಾಗಿದೆ. ಕಾರ್ಯಕ್ರಮದಲ್ಲಿ ಬಳ್ಳಾರಿ ಮಾಹಿತಿಯನ್ನು ಒಳಗೊಂಡ ಸ್ಮರಣ ಸಂಚಿಕೆ ಪ್ರಕಟಗೊಳಿಸುವುದಾಗಿ ತಿಳಿಸಿದರು. ಇನ್ನು ಸುದ್ದಿಗೋಷ್ಟಿಯಲ್ಲಿ ಬಸವರಾಜ್ ಬಿಸಿಲಹಳ್ಳಿ, ಪೋಲಾ ರಾಧಕೃಷ್ಣ, ತಿಪ್ಪೆರುದ್ರ, ಗುರುರಾಜ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Intro:ಜುಲೈ 12,13 ಮತ್ತು 14 ರಂದು ಬಳ್ಳಾರಿ ಸಾಂಸ್ಕೃತಿಕ ಉತ್ಸವ, ಲಲಿತ ಕಲೆಗಳ ಸಮ್ಮಿಲನವನ್ನು ನಗರದ ಸರ್ಕಾರಿ ( ಮುನಿಸಿಪಲ್ ) ಕಾಲೇಜದ ಮೈದಾನದಲ್ಲಿ ಮೂರು ದಿನಗಳ ಕಾಲ ನಡೆಯುತ್ತದೆ ಎಂದು ನಿರ್ವಹಣಾ ಸಮಿತಿಯ ಅಧ್ಯಕ್ಷ ಜಯಪ್ರಕಾಶ ಗುಪ್ತಾ ತಿಳಿಸಿದರು.

Body:ನಗರದ ಖಾಸಗಿ ಹೋಟಲ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಜ್ಯಮಟ್ಟದ ಚಿತ್ರಕಲಾ ಪ್ರದರ್ಶನ ಮತ್ತು ಜಿಲ್ಲಾ ಮಟ್ಟದ ಕರಕುಶಲ, ಪುಸ್ತಕ, ಛಾಯಾಚಿತ್ರ ಪ್ರದರ್ಶನ, ಸಂಗೀತ, ನೃತ್ಯ, ಜಾನಪದ, ರಂಗಭೂಮಿ, ನಾಟಕ ಕಲಾವಿದರನ್ನು ಎಲ್ಲರನ್ನೂ ಒಂದೇ ಸೂರಿನಡಿ ಪ್ರಯತ್ನವಾಗಿದೆ ಎಂದರು.

ಸಾಂಸ್ಕೃತಿ ಕಾರ್ಯಕ್ರಮ :

ನೃತ್ಯಗಳ ( ಶಾಸ್ತ್ರೀಯ, ಜಾನಪದ, ಆಧುನಿಕ ) ಸಂಗೀತ ರಸಮಂಜರಿ, ಕವಿಗೋಷ್ಠಿ, ಹಾಸ್ಯ, ಹರಟೆ, ಜಾದೂ ಪ್ರದರ್ಶನ, ಮಿಮಿಕ್ರಿ ನಡೆಯುತ್ತದೆ ಎಂದರು.

ಅರದಲ್ಲಿ ಚಿತ್ರಸಂತೆ 50 ಸ್ಟಾಲ್ , ಛಾಯಾಚಿತ್ರ ಸಂತೆ 30 ಸ್ಟಾಲ್, ಪುಸ್ತಕ ಸಂತೆ 20 ಸ್ಟಾಲ್, ಆಹಾರ ಸಂತೆ 15 ಸ್ಟಾಲ್ ಇರುತ್ತವೆ ಎಂದರು.

ಭವ್ಯ ಭಾರತ :

1000 ವಿದ್ಯಾರ್ಥಿಗಳಿಂದ, 500 ಸಂಗೀತ ವಿದ್ಯಾರ್ಥಿಗಳಿಂದ ನಾಡಗೀತೆ ಹಾಡುವ ಪ್ರಯತ್ನ, ನೃತ್ಯ, ಸಂಗೀತ, ಚಿತ್ರಕಲೆ ಸ್ಪರ್ಧೆಗಳನ್ನು ಮತ್ತು ಬಳ್ಳಾರಿ ಸಂಸ್ಕೃತಿಯ ಬಗ್ಗೆ ರಸಪ್ರಶ್ನೆ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದರು.
500 ಮೀಟರ್ ಉದ್ಧ ಡ್ರಾಯಿಂಗ್ ಕಾಗದ ಮೇಲೆ ಸಾರ್ವಜನಿಕರಿಂದ ಚಿತ್ರಗಳನ್ನು ಬಿಡಿಸಲು ಅನುವು ಮಾಡಿದೆ ಎಂದರು.

ಬಳ್ಳಾರಿ ಮಾಹಿತಿಯನ್ನು ಒಳಗೊಂಡ ಸ್ಮರಣ ಸಂಚಿಕೆ ಯನ್ನು ಪ್ರಕಟಗೊಳಿಸುವುದಾಗಿದೆ ಎಂದರು.

Conclusion:ಈ ಸುದ್ದಿಗೋಷ್ಠಿಯಲ್ಲಿ ಬಸವರಾಜ್ ಬಿಸಿಲಹಳ್ಳಿ, ಪೋಲಾ ರಾಧಕೃಷ್ಣ, ತಿಪ್ಪೆರುದ್ರ, ಗುರುರಾಜ್ ಮತ್ತು ಇನ್ನಿತರರು ಹಾಜರಿದ್ದರು.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.