ಬಳ್ಳಾರಿ: ಹನ್ನೊಂದು ವಯಸ್ಸಿನ ಬಾಲಕನ ಸಾಕ್ಷ್ಯವನ್ನು ಗಂಭೀರವಾಗಿ ಪರಿಗಣಿಸಿ, ಪತ್ನಿ ಮೇಲೆ ಹಲ್ಲೆಗೈದು ಕೊಲೆ ಮಾಡಲೆತ್ನಿಸಿದ ಪತಿಗೆ ಇಲ್ಲಿನ 2ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 4 ವರ್ಷ ಕಠಿಣ ಶಿಕ್ಷೆ ಮತ್ತು 5 ಸಾವಿರ ರೂ ದಂಡ ವಿಧಿಸಿ ಮಹತ್ವದ ತೀರ್ಪು ನೀಡಿತು.
ಸುಜಾತ ಎಂಬುವವರು ಬಳ್ಳಾರಿ ನಿವಾಸಿ ಪೆದ್ದಣ್ಣನನ್ನು ವಿವಾಹವಾಗಿದ್ದರು. ದಂಪತಿ ಮಧ್ಯೆ ವೈಷಮ್ಯ ಬೆಳೆದು ನಿತ್ಯ ಜಗಳ ನಡೆಯುತ್ತಿತ್ತು. 2017ರಂದು ಪೆದ್ದಣ್ಣ ಬೇರೆ ಮಹಿಳೆಯೊಂದಿಗೆ ಮನೆಯಲ್ಲಿದ್ದಾಗ ಸುಜಾತ ಜಗಳವಾಡಿದ್ದರು. ಈ ಸಂದರ್ಭದಲ್ಲಿ ಪೆದ್ದಣ್ಣ ಪತ್ನಿಯ ಮೇಲೆ ಹಲ್ಲೆ ಮಾಡಿ ಕೊಲೆಗೆ ಯತ್ನಿಸಿದ್ದಾನೆ. ಈ ಕುರಿತು ಪೊಲೀಸ್ ಠಾಣೆಯಲ್ಲಿ ಸುಜಾತ ದೂರು ನೀಡಿದ್ದರು.
ಪ್ರಕರಣದ ಕುರಿತು ಕೋರ್ಟ್ನಲ್ಲಿ ವಿಚಾರಣೆ ನಡೆದಿದ್ದು, ಮಗ ನಡೆದಿರುವ ಘಟನೆಯ ಕುರಿತು ವಿವರಿಸಿದ್ದಾನೆ. ದೂರುದಾರರಾದ ಸುಜಾತ ಸೇರಿದಂತೆ 8 ಸಾಕ್ಷಿಗಳ ವಿಚಾರಣೆಯ ನಂತರ, ಎರಡೂ ಕಡೆಯ ವಾದ ಆಲಿಸಿದ ನ್ಯಾಯಾಧೀಶ ವಿದ್ಯಾಧರ ಶಿರಹಟ್ಟಿ, ಅಪರಾಧಿಗೆ ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದ್ದಾರೆ.
ಇದನ್ನೂ ಓದಿ:ಪ್ರಯಾಣಿಕರೇ ಗಮನಿಸಿ: ಕೆಂಪೇಗೌಡ ಏರ್ಪೋರ್ಟ್‌ಗೆ ಪ್ಯಾಸೆಂಜರ್ ರೈಲು ಸೇವೆ ಪುನರಾರಂಭ