ETV Bharat / state

1896ರ ಮ್ಯಾಪ್ ಅನ್ವಯ ಸರ್ವೇ ಮಾಡಿದರೆ ರಾಜ್ಯದ ಗಡಿ ಆಂಧ್ರದ ಪಾಲಾಗಲಿದೆ: ಟಪಾಲ್ ಗಣೇಶ್​ - ಗಡಿಭಾಗ ನೆರೆಯ ಆಂಧ್ರಪ್ರದೇಶದ ಪಾಲಾಗಲಿದೆ

ಗಡಿ ಗುರುತು ಪುನರ್ ಸ್ಥಾಪಿಸುವ ಸಲುವಾಗಿ ಪ್ರೈಮರಿ ಮ್ಯಾಪ್ ಅಲ್ಲದ 1896ರ ನಕ್ಷೆಯನ್ನು ಆಯ್ಕೆ ಮಾಡಿಕೊಂಡಿರುವುದು ಕರ್ನಾಟಕ ರಾಜ್ಯದ ಗಡಿಭಾಗವನ್ನು ಆಂಧ್ರಪ್ರದೇಶ ಸರ್ಕಾರ ಕಬಳಿಸುವಂತಹ ಹುನ್ನಾರವಾಗಿದೆ ಎಂದು ಗಣಿ ಅಕ್ರಮದ ಹೋರಾಟಗಾರ ಟಪಾಲ್ ಗಣೇಶ್​ ಆರೋಪಿಸಿದ್ಧಾರೆ.‌

tapal-ganesh
ಟಪಾಲ್ ಗಣೇಶ್​
author img

By

Published : Nov 10, 2020, 6:43 PM IST

ಬಳ್ಳಾರಿ: ಕರ್ನಾಟಕ- ಆಂಧ್ರ ಗಡಿ ಸರ್ವೇ ಪಾಯಿಂಟ್ ಗುರ್ತಿಸುವ ಸಲುವಾಗಿ 1896ರ ಮ್ಯಾಪ್ ಆಧರಿಸಿ ಸರ್ವೇ ಆಫ್ ಇಂಡಿಯಾದ ಡೈರೆಕ್ಟರ್​ಗಳು ಮುಂದಾಗಿದ್ದು, ಇದರಿಂದ ನಮ್ಮ ರಾಜ್ಯದ ಒಂದಿಷ್ಟು ಗಡಿಭಾಗ ನೆರೆಯ ಆಂಧ್ರಪ್ರದೇಶದ ಪಾಲಾಗಲಿದೆ ಎಂದು ಗಣಿ ಅಕ್ರಮ ವಿರೋಧಿ ಹೋರಾಟಗಾರ ಟಪಾಲ್ ಗಣೇಶ್​ ಆರೋಪಿಸಿದ್ಧಾರೆ.

ಈ ಸಂಬಂಧ ಈ ಟಿವಿ ಭಾರತದೊಂದಿಗೆ ಮಾತನಾಡಿದ ಅವರು, 1896 ಮ್ಯಾಪ್​​​ ಎಂಬುದು ಪ್ರೈಮರಿ ಮ್ಯಾಪ್ (ಪ್ರಾಥಮಿಕ ನಕ್ಷೆ) ಕೂಡ ಅಲ್ಲ. ಅದನ್ನು ಎಡಿಜಿಸಿ ಸ್ವರ್ಣ ಸುಬ್ಬರಾವ್ ಹಾಗೂ ಸುಪ್ರೀಂಕೋರ್ಟ್ ಕೂಡ ಅಲ್ಲಗೆಳೆದಿದೆ. 1887ರ ಮ್ಯಾಪ್​ನ ಪ್ರಕಾರ ಗಡಿ ಸರ್ವೇ ಹಾಗೂ ಗಡಿ ಗುರುತು ಪುನರ್ ಸ್ಥಾಪಿಸುವುದು ನ್ಯಾಯ ಸಮ್ಮತವಾಗಿದೆ. ಆದರೆ, ಗಡಿ ಗುರುತು ಪುನರ್ ಸ್ಥಾಪಿಸುವ ಸಲುವಾಗಿಯೇ ಪ್ರೈಮರಿ ಮ್ಯಾಪ್ ಅಲ್ಲದ ಈ 1896ರ ಮ್ಯಾಪ್ ಅನ್ನು ಆಯ್ಕೆ ಮಾಡಿಕೊಂಡಿರುವುದು ಕರ್ನಾಟಕ ರಾಜ್ಯದ ಗಡಿಭಾಗವನ್ನು ಆಂಧ್ರಪ್ರದೇಶ ಸರ್ಕಾರ ಕಬಳಿಸುವಂತಹ ಹುನ್ನಾರವಾಗಿದೆ ಎಂದರು.‌

ಈ ಟಿವಿ ಭಾರತದೊಂದಿಗೆ ಮಾತನಾಡಿದ ಗಣಿ ಅಕ್ರಮದ ಹೋರಾಟಗಾರ ಟಪಾಲ್ ಗಣೇಶ್

ರಾಜ್ಯ ಸರ್ಕಾರ ಗ್ರಾಮಗಳ ಸರಹದ್ದಿನ ಮೇಲೆ ಗಡಿಗುರುತು ಹಾಗೂ ರಾಕ್ ಪಾಯಿಂಟ್ ಗುರ್ತಿಸುವಿಕೆ ಮತ್ತು ಪುನರ್ ಸ್ಥಾಪಿಸುವ ಅಂಶವನ್ನು ತಿಳಿಸಿದೆ. ಆದರೆ, ಕರ್ನಾಟಕ-ಆಂಧ್ರದ ಗಡಿ ಗುರುತು ಪುನರ್ ಸ್ಥಾಪಿಸುವ ವಿಚಾರದಲ್ಲಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರು ಏಕೆ ಮೀನಾಮೇಷ ಎಣಿಸುತ್ತಿದ್ದಾರೆಂದು ಟಪಾಲ್ ಗಣೇಶ ವಾಗ್ದಾಳಿ ನಡೆಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.