ಬಳ್ಳಾರಿ: ನಗರ ಹೊರವಲಯದ ಸಂಗನಕಲ್ಲು ಗ್ರಾಮದ ಹಿಂಭಾಗದ ಜಾಗದಲ್ಲಿ ಆದಿ ಮಾನವರು ಅಂದು ವೀಕ್ಷಿಸಿದ ನಕ್ಷೇತ್ರಿಕ ದಕ್ಷಿಣಾಯನದಿಂದ ಸೂರ್ಯನು ಉತ್ತರಾಯಣಕ್ಕೆ ಚಲಿಸುವುದನ್ನು ಸಾರ್ವಜನಿಕರು ಕಣ್ತುಂಬಿಕೊಂಡರು.
ಈ ವೇಳೆ ಈಟಿವಿ ಭಾರತದೊಂದಿಗೆ ಸಂಗನಕಲ್ಲು ಗ್ರಾಮದ ರಾಮದಾಸ್ ಮಾತನಾಡಿ, ಆದಿ ಮಾನವ ನೆಲೆಸಿದ್ದ ಸ್ಥಳಗಳಲ್ಲಿ ಅನೇಕ ಚಿತ್ರ ಲಿಪಿಗಳು ಕಾಣಸಿಗುತ್ತವೆ. ಅದರಲ್ಲಿ ಬೇಸಿಗೆ, ಮಳೆ ಹಾಗೂ ಋತು ಬದಲಾವಣೆಗಳನ್ನು ಬಿತ್ತರಿಸುವ ನಿರ್ದಿಷ್ಟ ಸ್ಥಳಗಳನ್ನು ನಿಗದಿ ಮಾಡಿದ್ದಾರೆ. ಅದರಲ್ಲಿ ಈ ಸಂಗನಕಲ್ಲು ಸಹ ಒಂದಾಗಿದೆ.
ಖಗೋಳ ವೀಕ್ಷಕರು ಹಾಗೂ ಅಧ್ಯಯನ ಮಾಡುವವರು ಆದಿ ಮಾನವನ ಪ್ರಯೋಗ ಶಾಲೆಯಂತಿರುವ ಈ ಸ್ಥಳಕ್ಕೆ ಭೇಟಿ ನೀಡಬಹುದಾಗಿದೆ. ಇದು ಶಿಲಾಯುಗದ ಪ್ರಯೋಗಾಲಯವಾಗಿದೆ. ಗ್ರಾಮದ ಹಿರೇಗುಡ್ಡದಲ್ಲಿ ಆದಿ ಮಾನವರ ಬಯಲು ಬಂಡೆ ಚಿತ್ರಗಳು, ಬೂದಿ ದಿಬ್ಬಗಳು, ಪಿಲ್ಲಪ್ಪ ದೇವಸ್ಥಾನದ ಗೂಡು, ಪಂಚಾಯಿತಿ ಕಟ್ಟೆ, ನೀರಿನ ಸಂಗ್ರಹ, ಮೀನುಗಾರಿಕೆಯ ಕುರುಹುಗಳು ಸಿಗುತ್ತವೆ ಎಂದು ಮಾಹಿತಿ ನೀಡಿದ್ದಾರೆ.