ETV Bharat / state

ಉಪಸಮರ: ನಾಳೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಘೋಷಣೆ ನಿರೀಕ್ಷೆ - ಜಿಂದಾಲ್ ಏರ್​​ಪೋರ್ಟ್ ‌ನಲ್ಲಿ ಸಿಎಂ ಬಿಎಸ್​​ವೈ

announcement-of-the-list-of-bjp-candidates-tomorrow
ನಾಳೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಘೋಷಣೆ ನಿರೀಕ್ಷೆ
author img

By

Published : Mar 20, 2021, 4:20 PM IST

Updated : Mar 20, 2021, 5:04 PM IST

ನಾಳೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಘೋಷಣೆ ನಿರೀಕ್ಷೆ

16:55 March 20

16:13 March 20

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಅಭ್ಯರ್ಥಿ ಆಯ್ಕೆ ಸಭೆ ನಡೆಸಲಾಗಿದೆ. ಇಂದು ಆಕಾಂಕ್ಷಿಗಳ ಪಟ್ಟಿಯನ್ನ ದೆಹಲಿಗೆ ಕಳುಹಿಸಲಾಗಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಮಾಹಿತಿ ನೀಡಿದ್ದಾರೆ.

ಬಳ್ಳಾರಿ: ರಾಜ್ಯದಲ್ಲಿ ಎರಡು ವಿಧಾನಸಭೆ ಕ್ಷೇತ್ರ ಮತ್ತು ಒಂದು ಲೋಕಸಭಾ ಕ್ಷೇತ್ರದ ಉಪ ಚುನಾವಣೆ ನಡೆಯಲಿದ್ದು, ಇಂದು ಬಿಜೆಪಿ ಆಕಾಂಕ್ಷಿಗಳ ಪಟ್ಟಿ ದೆಹಲಿಗೆ ರವಾನೆಯಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದರು. 

ಓದಿ: ಹೈಕಮಾಂಡ್‌ ಭೇಟಿ ನಂತರ ಬೆಳಗಾವಿ ಬೈ ಎಲೆಕ್ಷನ್‌ನಲ್ಲಿ ಸ್ಪರ್ಧಿಸುವ ಬಗ್ಗೆ ನಿರ್ಧಾರ : ಸತೀಶ್ ಜಾರಕಿಹೊಳಿ

ಸಂಡೂರು ತಾಲೂಕು ತೋರಣಗಲ್ಲಿನ ಜಿಂದಾಲ್ ಏರ್ ಪೋರ್ಟ್ ನಲ್ಲಿ ಮಾತನಾಡಿದ ಅವರು, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಅಭ್ಯರ್ಥಿ ಆಯ್ಕೆ ಸಭೆ ನಡೆಸಲಾಗಿದೆ. ಆಕಾಂಕ್ಷಿಗಳ ಪಟ್ಟಿಯನ್ನ ದೆಹಲಿಗೆ ಕಳುಹಿಸಲಾಗಿದೆ. ನಾಳೆ ಅಭ್ಯರ್ಥಿಗಳ ಪಟ್ಟಿ ಘೋಷಣೆ ಆಗುವ ನಿರೀಕ್ಷೆ ಇದೆ ಎಂದರು. 

ಉಪಚುನಾವಣೆ ಮೂರು ಕ್ಷೇತ್ರಗಳಲ್ಲಿ ಗೆಲ್ಲುವ ವಿಶ್ವಾಸವಿದ್ದು, ಕೊರೊನಾ ಸಂದರ್ಭದಲ್ಲೂ ಜನಪರವಾದ ಬಜೆಟ್ ನೀಡಿದ್ದೇವೆ. ನೂತನ ವಿಜಯನಗರ ಜಿಲ್ಲೆ ಘೋಷಣೆ ಹಿನ್ನೆಲೆ, ನೂತನ ಜಿಲ್ಲೆಗೆ ಬೇಕಾಗುವ ಅಧಿಕಾರಿಗಳನ್ನು ನೇಮಕ ಮಾಡಲಾಗುವುದು. ಈ ಹಿಂದೆಯೇ ಬಳ್ಳಾರಿ ಜಿಲ್ಲೆಗೆ ಹೆಚ್ಚು ಅನುದಾನ ನೀಡಿದ್ದೇವೆ ಎಂದು ಸಿಎಂ ತಿಳಿಸಿದರು. 

Last Updated : Mar 20, 2021, 5:04 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.