ETV Bharat / state

ಸಚಿವ ಸ್ಥಾನದಲ್ಲಿ ಹ್ಯಾಟ್ರಿಕ್ ಬಾರಿಸಿದ ಆನಂದ ಸಿಂಗ್ - ಆನಂದ‌ ಸಿಂಗ್ ಸುದ್ದಿ

ವಿಜಯನಗರ ಕ್ಷೇತ್ರದ ಶಾಸಕ ಆನಂದ‌ ಸಿಂಗ್ ಬೊಮ್ಮಾಯಿ ಸಂಪುಟದಲ್ಲಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದು, ಇದುವರೆಗೂ 3 ಬಾರಿ ಸಚಿವರಾಗುವ ಮೂಲಕ ಹ್ಯಾಟ್ರಿಕ್​ ಬಾರಿಸಿದ್ದಾರೆ.

ANANDA SINGH
ಆನಂದ ಸಿಂಗ್ ಪ್ರಮಾಣವಚನ
author img

By

Published : Aug 4, 2021, 6:51 PM IST

ಹೊಸಪೇಟೆ (ವಿಜಯನಗರ) ಇಂದು ರಾಜಭವದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಚಿವ ಸಂಪುಟದಲ್ಲಿ ಆನಂದ‌ ಸಿಂಗ್, ಪಂಪಾ ವಿರೂಪಾಕ್ಷೇಶ್ವರ, ಪಂಪಾಂಬಿಕೆ, ಭುವನೇಶ್ವರಿ ದೇವಿ ಹೆಸರಿನ ಮೇಲೆ ಪ್ರಮಾಣವಚನ ಸ್ವೀಕರಿಸಿದರು. ಆ ಮೂಲಕ ವಿಜಯನಗರ ಕ್ಷೇತ್ರದ ಶಾಸಕ ಆನಂದ‌ ಸಿಂಗ್ ಅವರು ಮೂರು ಬಾರಿ‌ ಮಂತ್ರಿಯಾಗಿ ಹ್ಯಾಟ್ರಿಕ್ ಬಾರಿಸಿದ್ದಾರೆ.

ಆನಂದ ಸಿಂಗ್ ಪ್ರಮಾಣವಚನ

ಕಳೆದ ಒಂದು ವಾರದಿಂದ ಆನಂದ ಸಿಂಗ್ ಅವರು ಮೌನಕ್ಕೆ ಶರಣಾಗಿದ್ದರು. ಮಾಧ್ಯಮದವರಿಗೆ ಪ್ರತಿಕ್ರಿಯೆ ‌ನೀಡದೇ ಕಾದು ನೋಡಿ ಎಂಬ ಸಂದೇಶವನ್ನು‌ ನೀಡಿದ್ದರು. ಕೊನೆಗಳಿಗೆಯಲ್ಲಿ ಅವರಿಗೆ ಅದೃಷ್ಟ ಖುಲಾಯಿಸಿದೆ.

ಆನಂದ‌ ಸಿಂಗ್ ಅವರ ಜೀವನ:

ಬಿ.ಎಸ್. ಪೃಥ್ವಿರಾಜ್‌ ಸಿಂಗ್ ಹಾಗೂ ತಾಯಿ ಶ್ರೀಮತಿ ಸುನಿತಾ ಬಾಯಿ ಅವರ ಪುತ್ರನಾಗಿ 03- 10-1966 ರಲ್ಲಿ ಶಂಕರ ಸಿಂಗ್ ಕ್ಯಾಂಪ್, ಕಂಪ್ಲಿ ತಾಲೂಕು ಬಳ್ಳಾರಿ ಜಿಲ್ಲೆಯಲ್ಲಿ ಜನಿಸಿದರು. ಆನಂದ್​ ಸಿಂಗ್​ ಪತ್ನಿ ಶ್ರೀಮತಿ ಲಕ್ಷ್ಮಿ ಸಿಂಗ್. ಇವರಿಗೆ ವೈಷ್ಣವಿ, ಯಶಸ್ವಿನಿ, ಸಿದ್ಧಾರ್ಥ್ ಸಿಂಗ್ ಮೂವರು ಮಕ್ಕಳಿದ್ದಾರೆ.

ರಾಜಕೀಯಕ್ಕೆ ಬರುವ ಮೊದಲು ಗಣಿ, ಹೋಟೆಲ್ ಉದ್ಯಮ ನಡೆಸುತ್ತಿದ್ದರು. ಸಾಮಾಜಿಕ ಕೆಲಸ ಮಾಡುವ ಮೂಲಕ ರಾಜಕೀಯ ಕ್ಷೇತ್ರಕ್ಕೆ ಆನಂದ್​ ಸಿಂಗ್ ಕಾಲಿಟ್ಟರು. 2008, 2013 ಸಾರ್ವತ್ರಿಕ ಚುನಾವಣೆ ಜಯಗಳಿಸಿದರು. 2011 ರಲ್ಲಿ ಜಗದೀಶ್ ಶೆಟ್ಟರ್ ಸಂಪುಟದಲ್ಲಿ ಪ್ರವಾಸೋದ್ಯಮ ಸಚಿವರಾಗಿ ಹಾಗೂ ಬಳ್ಳಾರಿ ಜಿಲ್ಲೆಯ ಉಸ್ತುವಾರಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಬದಲಾದ ಸನ್ನಿವೇಶದಲ್ಲಿ 2018 ರಲ್ಲಿ ಬಿಜೆಪಿ ಬಿಟ್ಟು ಕಾಂಗ್ರೆಸ್ ಪಕ್ಷದಿಂದ ಸ್ಪರ್ಧೆಗಿಳಿದರು. ಆಗ ಭರ್ಜರಿ ಜಯ ದಾಖಲಿಸಿದ್ರು.

ANANDA SINGH
3ನೇ ಬಾರಿಗೆ ಸಚಿವರಾಗಿ ಪ್ರಮಾವಚನ

ವಿಜಯನಗರ ಜಿಲ್ಲೆ ಹಾಗೂ ಜಿಂದಾಲ್​ಗೆ ಭೂಮಿ ಪರಭಾರೆ ಮಾಡಬಾರದು ಎಂದು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ರು. 2019 ಉಪಚುನಾವಣೆಯಲ್ಲಿ ಬಿಜೆಪಿಯಿಂದ ಗೆಲುವು ದಾಖಲಿಸಿದರು. ನಂತರ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ಪತನವಾಗಿ, ಬಿ.ಎಸ್.ಯಡಿಯೂರಪ್ಪ ಸರ್ಕಾರ ಬಂತು. ಆಗ ಸರ್ಕಾರದ ಸಂಪುಟದಲ್ಲಿ ಅರಣ್ಯ, ಪ್ರವಾಸೋದ್ಯಮ ಮತ್ತು ಮೂಲ ಸೌಲಭ್ಯ ಅಭಿವೃದ್ಧಿ, ಹಜ್ ಮತ್ತು ವಕ್ಫ್ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಈಗ ಮೂರನೇ ಬಾರಿಗೆ ಆನಂದ್​ ಸಿಂಗ್ ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.