ಹೊಸಪೇಟೆ: ವಿಶ್ವವಿಖ್ಯಾತ ಹಂಪಿಯಲ್ಲಿರುವ ಸ್ಮಾರಕಗಳನ್ನು ರಕ್ಷಿಸಲು ವಿಶ್ವ ಪರಂಪರೆ ಪ್ರದೇಶ ನಿರ್ವಹಣಾ ಪ್ರಾಧಿಕಾರ ಹಾಗೂ ಪುರಾತತ್ವ ಸರ್ವೇಕ್ಷಣಾ ಇಲಾಖೆಗಳು ಮುಂದಾಗಿದೆ.
ಹಂಪಿಗೆ ನೂರಾರು ವರ್ಷಗಳ ಇತಿಹಾಸವಿದ್ದು, ಅನೇಕ ಸ್ಮಾರಕ ಮತ್ತು ಮಂಟಪಗಳಿವೆ. ವಾಹನಗಳ ಓಡಾಟದಿಂದ ಸ್ಮಾರಕಗಳಿಗೆ ಧಕ್ಕೆ ಉಂಟಾಗುತ್ತಿತ್ತು. ಇದನ್ನರಿತ ಇಲಾಖೆಗಳು 385 ಕಡೆ ವಾಹನಗಳು ಭಾರಿ ಗಾತ್ರದ ವಾಹನ ನಿರ್ಬಂಧ ಸೂಚನಾ ಫಲಕದೊಂದಿಗೆ ಕಬ್ಬಿಣ ಸಲಾಕೆಗಳನ್ನು ಅಳಪಡಿಸಲು ತಯಾರಿಸಿ ನಡೆಸಿವೆ.
ಸ್ಮಾರಕಗಳಿಗೆ ಧಕ್ಕೆ:
ವಿಜಯ ವಿಠ್ಠಲ ದೇವಸ್ಥಾನಕ್ಕೆ ತೆರವು ಮಾರ್ಗ ಮಧ್ಯೆ ಹರಿ ಶಂಕರ ಮಂಟಪ ಬರುತ್ತಿದೆ. ಕೆಲ ತಿಂಗಳ ಹಿಂದೆ ಭಾರಿ ವಾಹನ ಸಿಲುಕಿಕೊಂಡಿದ್ದರಿಂದ ಸ್ಮಾರಕ ಧಕ್ಕೆಯಾಗಿತ್ತು. ಸಮಸ್ಯೆ ಕುರಿತಂತೆ ಈಟಿವಿ ಭಾರತ ವಿಸ್ತೃತ ವರದಿ ಪ್ರಕಟಿಸಿತ್ತು. ಇದರಿಂದ ಎತ್ತೆಚ್ಚ ಪುರಾತತ್ವ ಇಲಾಖೆ ಈ ಕಾರ್ಯಕ್ಕೆ ಮುಂದಾಗಿದೆ.
ಹಂಪಿ ಸ್ಮಾರಕಗಳಿಗೆ ರಕ್ಷಣೆಗೆ ಆದ್ಯತೆ ನೀಡಲಿ:
ಹಂಪಿ ಯುನೆಸ್ಕೋ ಪಟ್ಟಿಗೆ ಸೇರ್ಪಡೆಯಾಗಿದೆ. ಅಲ್ಲದೇ ಪ್ರತಿವರ್ಷ ಲಕ್ಷಾಂತರ ಜನರು ಪ್ರವಾಸಿಗರು ಬರುತ್ತಾರೆ. ಹಾಗಾಗಿ ಸ್ಮಾರಕ ರಕ್ಷಣೆ ಆದ್ಯತೆ ನೀಡಬೇಕು. ಯಾಕೆಂದರೆ ಒಂದಲ್ಲ ಒಂದು ಕಾರಣದಿಂದ ಸ್ಮಾರಕ ಧಕ್ಕೆಯಾಗುತ್ತಿದೆ. ಇದನ್ನು ಹೋಗಲಾಡಿಸಲು ಇಲಾಖೆಗಳು ಕಠಿಣ ಕ್ರಮ ತೆಗೆದುಕೊಂಡಿವೆ.
ಈ ಕುರಿತಂತೆ ವಿಶ್ವ ಪರಂಪರೆ ಪ್ರದೇಶ ನಿರ್ವಹಣಾ ಪ್ರಾಧಿಕಾರ ಆಯುಕ್ತ ಸಿದ್ದರಾಮೇಶ್ವರ ಅವರು ಮಾತನಾಡಿ, ಹಂಪಿಯಲ್ಲಿ ಭಾರಿ ಗಾತ್ರದ ವಾಹನಗಳು ಓಡಾಡುವ ಸುಮಾರು 385 ಕಡೆ ಸೂಚನಾ ಫಲಕ ಹಾಗೂ ಕೆಲ ಕಡೆ ಕಬ್ಬಿನ ಸಲಾಕೆಗಳು ಅಳವಡಿಸಲಾಗುತ್ತಿದೆ. ಇನ್ನು 70 ರಿಂದ 80 ಸೂಚನಾ ಫಲಕ ಅಳವಡಿಸಿದರೆ ಈ ಕಾರ್ಯ ಪೂರ್ಣಗೊಳ್ಳಲಿದೆ. ಜೆಕೆ ಮೆಟಲ್ಸ್ನಿಂದ ಯೋಜನೆಯನ್ನು ಅನುಷ್ಠಾನ ಮಾಡಲಾಗುತ್ತಿದೆ. ಇನ್ನು 10 ದಿನಗಳಲ್ಲಿ ಪೂರ್ಣಗೊಳ್ಳುವ ಸಾಧ್ಯತೆ ಇದೆ ಎಂದರು.