ಹೊಸಪೇಟೆ (ವಿಜಯನಗರ): ಹಗರಿಬೊಮ್ಮನಹಳ್ಳಿ ಪಟ್ಟಣದ ಬಸವೇಶ್ವರ ಬಜಾರ್ನಲ್ಲಿ ಬೈಕ್ ಮೇಲೆ ಲಾರಿ ಹರಿದು ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ.
ಪಟ್ಟಣದ ನಿವೃತ್ತ ರೇಷ್ಮೆ ಇಲಾಖೆ ನೌಕರ ಸಿ.ಪಂಪಾಪತಿ (65) ಮೃತ ದುರ್ದೈವಿ. ಇವರು ಹಗರಿಬೊಮ್ಮನಹಳ್ಳಿ ಪಟ್ಟಣದ ಬಸವೇಶ್ವರ ಬಜಾರ್ನಲ್ಲಿ ಸಂಚರಿಸುತ್ತಿದ್ದ ವೇಳೆ ಹಿಂದಿನಿಂದ ಬಂದ ಲಾರಿಯೊಂದು ಬೈಕ್ ಮೇಲೆಯೇ ಹರಿದಿದೆ. ಲಾರಿ ಕೆಳಗೆ ಬೈಕ್ ಸಿಲುಕಿಕೊಂಡಿದ್ದರೂ ಕೂಡ ಚಾಲಕ ಗಾಬರಿಯಿಂದ ಮುಂದೆ ಓಡಿಸಿದ್ದು, ಸ್ಥಳೀಯರು ಲಾರಿ ಚಾಲಕನಿಗೆ ಥಳಿಸಿದ್ದಾರೆ.
ಸ್ಥಳಕ್ಕೆ ಸಿಪಿಐ ಮಲ್ಲಿಕಾರ್ಜುನ ಡಪ್ಪಿನ್ ಭೇಟಿ ನೀಡಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ: ಕೆ.ಆರ್.ಆಸ್ಪತ್ರೆಯ ನಾಲ್ವರು ವೈದ್ಯರಿಗೆ ಕೊರೊನಾ: ಆತಂಕದಲ್ಲಿ ಸಿಬ್ಬಂದಿ