ಹೊಸಪೇಟೆ: ನಾಲ್ಕು ದಿನಗಳಿಂದ ಸತತ ಮಳೆಯಾಗುತ್ತಿರುವುದರಿಂದ ತಾಲೂಕಿನ ಕಮಲಾಪುರದ ಕೆರೆತಾಂಡದ ರೈತರೊಬ್ಬರು ಕಟಾವು ಮಾಡಿ ರಾಶಿ ಹಾಕಿದ್ದ ಮೆಕ್ಕೆಜೋಳ ಬೆಳೆ ಮೊಳಕೆ ಹೊಡೆದಿದೆ.
ಗುತ್ತಿಗೆ ರೈತ ಶಂಕರ ಅವರು 6 ಎಕೆರೆ ಜಮೀನಿನಲ್ಲಿ ಸುಮಾರು 100 ಕ್ವಿಂಟಲ್ ನಷ್ಟು ಮೆಕ್ಕೆಜೋಳ ಬೆಳೆದಿದ್ದರು. ಅದರಲ್ಲಿ ಒಂದಿಷ್ಟು ಬೆಳೆ ಮೊಳಕೆ ಹೊಡೆದಿದ್ದು, ಇನ್ನೊಂದಿಷ್ಟು ಮಳೆಯಿಂದ ಸಂಪೂರ್ಣ ತೊಯ್ದುಹೋಗಿದೆ.
ಈ ಬಗ್ಗೆ ಗುತ್ತಿಗೆ ರೈತ ಶಂಕರ ಅವರು ಮಾತನಾಡಿ, ಮೆಕ್ಕೆಜೋಳವನ್ನು ಕಟಾವು ಮಾಡಿ ಬಿಸಿಲಿಗೆ ಒಣಗಿಸಲು ಹಾಕಲಾಗಿತ್ತು. ಸತತ ಮಳೆಯಿಂದ ಒಂದಿಷ್ಟು ಮಕ್ಕೆಜೋಳ ಮೊಳಕೆ ಹೊಡೆದರೆ ಇನ್ನೊಂದಿಷ್ಟು ಮಳೆ ನೀರಿನಿಂದ ತೊಯ್ದುಹೋಗಿದೆ. ಸುಮಾರು 100 ಕ್ವಿಂಟಲ್ ಕ್ಕಿಂತ ಹೆಚ್ಚು ಇಳುವರಿ ಬಂದಿತ್ತು. ಈಗ ಎಲ್ಲವೂ ಸಂಪೂರ್ಣ ನಾಶವಾಗಿದ್ದು, ಮುಂದೇನೆಂದು ದಿಕ್ಕು ತೋಚುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.