ಬಳ್ಳಾರಿ: ಜಿಲ್ಲೆಯ ಮಿಲ್ಲರ್ ಪೇಟೆಯ ಆಟೋ ನಿಲ್ದಾಣದಲ್ಲಿ ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೈದುಲು ಅಡಾವತ್ ತಿಳಿಸಿದ್ದಾರೆ.
ಈಟಿವಿ ಭಾರತದೊಂದಿಗೆ ಮಾತನಾಡಿದ ಎಸ್ಪಿ, ಜೀನ್ಸ್ ಫ್ಯಾಕ್ಟರಿಯ ಕಾರ್ಮಿಕ ಇಸ್ಮಾಯಿಲ್ (19) ಎಂಬಾತನನ್ನು ಬರ್ಬರವಾಗಿ ಕೊಲೆ ಮಾಡಲಾಗಿತ್ತು. ಆತನೊಂದಿಗೆ ಹಮಾಲಿ ಕೆಲಸ ಮಾಡುತ್ತಿದ್ದ ನಾಲ್ವರು ಕೊಲೆ ಮಾಡಿರುವುದಾಗಿ ತನಿಖೆಯಿಂದ ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಓರ್ವ ಆರೋಪಿ ನಮೋಜ್ ಎಂಬಾತನನ್ನು ಬಂಧಿಸಲಾಗಿದೆ.
ಇನ್ನುಳಿದ ಮೂವರ ಹುಡುಕಾಟ ನಡೆದಿದೆ. ಬಳ್ಳಾರಿ ನಗರ ಉಪವಿಭಾಗದ ಡಿವೈಎಸ್ಪಿ ರಮೇಶಕುಮಾರ ಅವರ ನೇತೃತ್ವದಲ್ಲಿ ಮೂರು ತಂಡಗಳನ್ನು ರಚನೆ ಮಾಡಲಾಗಿದೆ. ಶೀಘ್ರವೇ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಅವರು ತಿಳಿಸಿದರು.
ಆರೋಪಿಗಳಾದ ಫಯಾಜ್, ನಮೋಜ್, ಚಿನ್ನ, ಖಾಸೀಂ ಮತ್ತು ಕೊಲೆಯಾದ ಇಸ್ಮಾಯಿಲ್ ನಡುವೆ ನಿನ್ನೆ ತಡರಾತ್ರಿ ಕಲಹ ಉಂಟಾಗಿತ್ತು. ಈ ಕಲಹವೇ ಕೊಲೆ ಮಾಡುವ ಹಂತಕ್ಕೆ ತಲುಪಿದೆ ಎಂದರು.
ಇದನ್ನೂ ಓದಿ: ಗಣಿ ನಗರಿಯಲ್ಲಿ ಬೆಳ್ಳಂಬೆಳಗ್ಗೆ ಹರಿದ ನೆತ್ತರು; ವ್ಯಕ್ತಿಯ ಬರ್ಬರ ಹತ್ಯೆ