ETV Bharat / state

ಬಳ್ಳಾರಿ: ಕೊರೊನಾ ಸೋಂಕಿಗೆ ಒಳಗಾಗಿದ್ದ 9 ವೈದ್ಯಕೀಯ ಸಿಬ್ಬಂದಿ ಗುಣಮುಖ

ಜಿಲ್ಲೆಯಲ್ಲಿ ಕೊರೊನಾ ವಿರುದ್ಧ ಹೋರಾಡುತ್ತಿದ್ದ ವಾರಿಯರ್ಸ್​​ಗೂ ಸೋಂಕು ತಗುಲಿ ಆತಂಕಕ್ಕೆ ಕಾರಣವಾಗಿತ್ತು. ಇದೀಗ 9 ಮಂದಿ ಆರೋಗ್ಯ ಸಿಬ್ಬಂದಿ ಕೊರೊನಾದಿಂದ ಸಂಪೂರ್ಣ ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

9 Medical personals cured from coronavirus in Bellary
ಬಳ್ಳಾರಿ: ಕೊರೊನಾ ಸೋಂಕಿಗೆ ಒಳಗಾಗಿದ್ದ 9 ವೈದ್ಯಕೀಯ ಸಿಬ್ಬಂದಿ ಗುಣಮುಖ
author img

By

Published : Jun 25, 2020, 3:20 PM IST

ಬಳ್ಳಾರಿ: ಜಿಲ್ಲೆಯಲ್ಲಿ ಕೊರೊನಾ ವೈರಸ್​​​ನಿಂದ ಮುಕ್ತರಾಗಿ ನಿನ್ನೆ ರಾತ್ರಿ 9 ವೈದ್ಯಕೀಯ ಸಿಬ್ಬಂದಿ ಡಿಸ್ಚಾರ್ಜ್​ ಆಗಿದ್ದಾರೆ. ಅದರಲ್ಲಿ ಒಬ್ಬರು ಸ್ತ್ರೀರೋಗ ತಜ್ಞರು, ಇಬ್ಬರು ಡಿ ಗ್ರೂಪ್ ನೌಕಕರು, ಉಳಿದವರು ತೋರಣಗಲ್ಲಿನ ಸಂಜೀವಿ ಆಸ್ಪತ್ರೆಯ ಸಿಬ್ಬಂದಿಯಾಗಿದ್ದು, ಕೊರೊನಾ ಚಿಕಿತ್ಸೆಯ ವೇಳೆ ಇವರಿಗೂ ಸೋಂಕು ತಗುಲಿತ್ತು.

ಬಳ್ಳಾರಿ: ಕೊರೊನಾ ಸೋಂಕಿಗೆ ಒಳಗಾಗಿದ್ದ 9 ವೈದ್ಯಕೀಯ ಸಿಬ್ಬಂದಿ ಗುಣಮುಖ

ಈ ವೇಳೆ ಸಿಬ್ಬಂದಿಯನ್ನು ಉದ್ದೇಶಿಸಿ ಮಾತನಾಡಿದ ಶುಶ್ರೂಷ ಅಧೀಕ್ಷಕಿ ಶಾಂತಬಾಯಿ, ಕೊರೊನಾ ವೈರಸ್ ಸಮಯದಲ್ಲಿ ಸೇವೆ ಮಾಡುವವರೇ ಎಡವಿದಾಗ ಬಹಳ ದುಃಖವಾಗುತ್ತದೆ. ಸಿಬ್ಬಂದಿಗೆ ಪಾಸಿಟಿವ್ ಬಂದ್ರೂ ಸಹ ಏನೂ ಸಮಸ್ಯೆ ಇಲ್ಲ. ಒಂದು ವಾರದ ಒಳಗಾಗಿ ನಿಮಗೆ ಕೊರೊನಾ ವೈರಸ್ ನೆಗೆಟಿವ್ ಬರುವಂತೆ ಚಿಕಿತ್ಸೆ ನೀಡುವುದಾಗಿ ಅಧಿಕಾರಿಗಳು ಹೇಳಿದ್ದು ಬಹಳ ಸಂತೋಷಕರ ವಿಚಾರವಾಗಿದೆ ಎಂದರು.

ಸಿಬ್ಬಂದಿಗೆ ಏಳು ದಿನಗಳ ಕಾಲ ಅವರಿಗೆ ತಂದೆ-ತಾಯಿ, ಅಣ್ಣ ತಂಗಿ, ಸಹೋದರ ಸಹೋದರಿಯರಂತೆ ನೋಡಿಕೊಂಡಿದ್ದೇವೆ ಎಂದು ತಿಳಿಸಿದರು. ಇದಲ್ಲದೆ ಆರೋಗ್ಯ ಸಿಬ್ಬಂದಿಗೆ ಪ್ರತ್ಯೇಕ ವಾರ್ಡ್​​ ಮಾಡಿದರೆ ಬಹಳ ಅನುಕೂಲವಾಗುತ್ತದೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.