ಹೊಸಪೇಟೆ: ಮೂರು ದಿನದ ಸಾರಿಗೆ ನೌಕರ ಮುಷ್ಕರದಿಂದ ಎನ್ಇಕೆಎಸ್ಆರ್ಟಿಸಿ ವಿಭಾಗಕ್ಕೆ 86 ಲಕ್ಷ ರೂ. ನಷ್ಟವಾಗಿದೆ ಎಂದು ಹೊಸಪೇಟೆ ವಿಭಾಗದ ನಿಯಂತ್ರಣಾಧಿಕಾರಿ ಜಿ.ಶೀನಯ್ಯ ಹೇಳಿದರು.
ನಗರದ ಬಸ್ ನಿಲ್ದಾಣ ಕಚೇರಿಯಲ್ಲಿ 'ಈಟಿವಿ ಭಾರತ'ದೊಂದಿಗೆ ಮಾತನಾಡಿದ ಅವರು, ಡಿ.11 ರಂದು 16 ಲಕ್ಷ ರೂ., 12 ರಂದು 30 ಲಕ್ಷ ರೂ., 13 ರಂದು 40 ರೂ. ನಷ್ಟವಾಗಿದೆ. ಒಂದು ದಿನಕ್ಕೆ 46 ಲಕ್ಷ ರೂ. ಸರಾಸರಿ ಆದಾಯ ವಿಭಾಗಕ್ಕೆ ಬರುತ್ತದೆ ಎಂದು ಮಾಹಿತಿ ನೀಡಿದರು.
ಓದಿ : ಒಳ್ಳೆಯ ಮುಸ್ಲಿಂರಿಗೆ ರಕ್ಷಣೆ ನೀಡ್ತೇವೆ, ಆದ್ರೆ ಗೂಂಡಾಗಳನ್ನು ಬಿಡಲ್ಲ: ಈಶ್ವರಪ್ಪ
ನಿನ್ನೆ ರಾತ್ರಿಯಿಂದ ದೂರದ ಊರುಗಳಿಗೆ ಬಸ್ ಕಾರ್ಯಾಚರಣೆ ಮಾಡಲಾಗುತ್ತಿದೆ. ವಿಭಾಗದಿಂದ ಒಟ್ಟು 65 ಬಸ್ಗಳನ್ನು ಓಡಿಸಲಾಗಿದೆ. ಜನರು ಕ್ರಮೇಣವಾಗಿ ನಿಲ್ದಾಣದತ್ತ ಆಗಮಿಸುತ್ತಿದ್ದಾರೆ. ನಿನ್ನೆ ರಾತ್ರಿಯಿಂದ ಬಸ್ಗಳು ಪೊಲೀಸ್ ಭದ್ರತೆಯೊಂದಿಗೆ ರಸ್ತೆಗಿಳಿದಿವೆ ಎಂದು ತಿಳಿಸಿದರು.