ETV Bharat / state

ಬಳ್ಳಾರಿ: ಹೆಲ್ಮೆಟ್​ ಧರಿಸದ 56 ಸಾವಿರ ಪ್ರಕರಣಗಳಿಂದ ಸಂಗ್ರಹವಾದ ದಂಡವೆಷ್ಟು ಗೊತ್ತಾ? - Traffic regulations are compulsory

ಬಳ್ಳಾರಿ ಜಿಲ್ಲೆಯಲ್ಲಿ ಕಳೆದ ಮೂರು ತಿಂಗಳಲ್ಲಿ ಹೆಲ್ಮೆಟ್ ಧರಿಸದ್ದಕ್ಕೆ 56 ಸಾವಿರ ಪ್ರಕರಣಗಳು ದಾಖಲಾಗಿದ್ದು, 2.4 ಕೋಟಿ ರೂಪಾಯಿ ದಂಡ ಸಂಗ್ರಹವಾಗಿದೆ.

awareness program
ಜಾಗೃತಿ ಕಾರ್ಯಕ್ರಮ
author img

By

Published : Jan 12, 2021, 7:41 PM IST

Updated : Jan 12, 2021, 8:36 PM IST

ಬಳ್ಳಾರಿ: ಹೆಲ್ಮೆಟ್ ಕಡ್ಡಾಯವಾಗಿ ಧರಿಸಬೇಕು ಎಂಬ ನಿಯಮ ಇದ್ದರೂ ಸಹ ವಾಹನ ಸವಾರರು ಮಾತ್ರ ಕ್ಯಾರೇ ಎನ್ನುತ್ತಿಲ್ಲ. ಜಿಲ್ಲೆಯಲ್ಲಿ ಕಳೆದ ಮೂರು ತಿಂಗಳ ಅವಧಿಯಲ್ಲಿ ಹೆಲ್ಮೆಟ್ ಧರಿಸದ 56 ಸಾವಿರ ಪ್ರಕರಣಗಳು ದಾಖಲಾಗಿದ್ದು, 2.4 ಕೋಟಿ ರೂ. ದಂಡ ಸಂಗ್ರಹವಾಗಿದೆ.

ಇದನ್ನೂ ಓದಿ...ಕೊಲೆ ಯತ್ನ ಪ್ರಕರಣ: ಆರೋಪಿಗೆ 3 ವರ್ಷ ಕಾರಾಗೃಹ ಶಿಕ್ಷೆ

ಪ್ರತಿ ವರ್ಷವೂ ಅಪಘಾತಗಳ ಪ್ರಮಾಣ ಹೆಚ್ಚಾಗುತ್ತಿದ್ದು, ಅದರಲ್ಲಿ ಹೆಲ್ಮೆಟ್​ ಧರಿಸದವರೇ ಅಧಿಕ. ಪ್ರತಿ ವರ್ಷ ಸರಾಸರಿ 300ಕ್ಕೂ ಹೆಚ್ಚು ಮಂದಿ ಸಾವನ್ನಪ್ಪುತ್ತಿದ್ದಾರೆ. ಹೀಗಾಗಿ, ಮುಂದಾಗುವ ಸಾವು-ನೋವನ್ನು ನಿಯಂತ್ರಿಸಲು ಜಿಲ್ಲಾ ಪೊಲೀಸ್ ಇಲಾಖೆ ಸೂಕ್ತ ಕ್ರಮಕ್ಕೆ ಮುಂದಾಗಿದೆ.

ಪೊಲೀಸ್​ ವರಿಷ್ಠಾಧಿಕಾರಿ ಸೈದುಲು ಅಡಾವತ್

ಬೆಂಗಳೂರು-ಹೊಸಪೇಟೆ ಹಾಗೂ ಬಳ್ಳಾರಿ-ಬೆಂಗಳೂರು ಮತ್ತು ಕೂಡ್ಲಿಗಿಯ ರಾಜ್ಯ ಹೆದ್ದಾರಿಗಳಲ್ಲಿ ಅಪಘಾತಗಳ ಸಂಖ್ಯೆ ಏರುತ್ತಿದೆ. ಈಟಿವಿ ಭಾರತದೊಂದಿಗೆ ಮಾತನಾಡಿದ ಪೊಲೀಸ್​ ವರಿಷ್ಠಾಧಿಕಾರಿ ಸೈದುಲು ಅಡಾವತ್, ಸಂಚಾರಿ ನಿಯಮಗಳ ಉಲ್ಲಂಘನೆಯ ದಂಡ ವಸೂಲಾತಿ ಹಿಂದೆ ಜಾಗೃತಿ ಅಡಗಿದೆಯೇ ಹೊರತು, ಬೇರೇನೂ ಇಲ್ಲವೆಂದು ಸ್ಪಷ್ಟಪಡಿಸಿದರು.

Last Updated : Jan 12, 2021, 8:36 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.