ETV Bharat / state

ನರೇಗಾ ಕೂಲಿ ಕಾರ್ಮಿಕರಿಗೆ 300 ದಿನಗಳ ಕೂಲಿ ನೀಡಲು ಆಗ್ರಹ

author img

By

Published : Aug 21, 2020, 12:24 AM IST

ನರೇಗಾ ಕೂಲಿ ಕಾರ್ಮಿಕರಿಗೆ 300 ಕೂಲಿದಿನಗಳನ್ನು ನೀಡಬೇಕು ಎಂದು ಆಗ್ರಹಿಸಿ ತಾಲೂಕಿನ ಮಲಪಣಗುಡಿಯ ಹಾಗೂ ನಾಗೇನಹಳ್ಳಿ ಗ್ರಾಮ ಪಂಚಾಯಿತಿ ಮುಂದೆ ಇಂದು ನರೇಗಾ ಕೂಲಿ ಕಾರ್ಮಿಕರು ಪ್ರತಿಭಟಿಸಿದರು.

Hospet
ನರೇಗಾ ಕೂಲಿ ಕಾರ್ಮಿಕರ ಪ್ರತಿಭಟನೆ

ಹೊಸಪೇಟೆ: ನರೇಗಾ ಕೂಲಿ ಕಾರ್ಮಿಕರಿಗೆ 300 ಕೂಲಿ ದಿನಗಳನ್ನು ನೀಡಬೇಕು ಎಂದು ಆಗ್ರಹಿಸಿ ತಾಲೂಕಿನ ಮಲಪಣಗುಡಿಯ ಹಾಗೂ ನಾಗೇನಹಳ್ಳಿ ಗ್ರಾಪಂ ಮುಂದೆ ಇಂದು ನರೇಗಾ ಕೂಲಿ ಕಾರ್ಮಿಕರು ಪ್ರತಿಭಟನೆ ನಡೆಸಿದರು.

ಕೋವಿಡ್ ಹಿನ್ನೆಲೆಯಲ್ಲಿ ನರೇಗಾ ಕಾರ್ಮಿಕರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಅವರು ಜೀವನ‌ ನಡೆಸುವುದು ದುಸ್ತರವಾಗಿದೆ. ಸರ್ಕಾರ ಇಂತಹ ವೇಳೆಯಲ್ಲಿ ನರೇಗಾ ಕಾರ್ಮಿಕರ ನೆರವಿಗೆ ಧಾವಿಸಬೇಕು ಎಂದು ಆಗ್ರಹಿಸಿದರು. ಇದೇ ವೇಳೆ ಮಲಪಣಗುಡಿಯ ಹಾಗೂ ನಾಗೇನಹಳ್ಳಿ ಗ್ರಾಪಂಗೆ ಮನವಿ ಸಲ್ಲಿಸಿದರು. ಅಲ್ಲದೆ, ಪ್ರತಿಭಟನಾ ಬ್ಯಾನರ್​ನಲ್ಲಿ ಸಹಿ ಮಾಡಿ ಸರ್ಕಾರಕ್ಕೆ ಬೇಡಿಕೆ ಈಡೇರಿಕೆಗಾಗಿ ಒತ್ತಾಯಿಸಿದರು.

ನರೇಗಾ ಕೂಲಿ ಕಾರ್ಮಿಕರಿಗೆ 300 ದಿನಗಳ ಕೂಲಿ ನೀಡಲು ಆಗ್ರಹ.

ನಾಗೇನಹಳ್ಳಿಯಲ್ಲಿ ಕೃಷಿ ಹೊಂಡದ ನಿರ್ಮಾಣ ಕಾರ್ಯದಲ್ಲಿ ನರೇಗಾ ಕೂಲಿ ಕಾರ್ಮಿರೊಬ್ಬರಿಗೆ 300 ದಿನ ನರೇಗಾ ಕೆಲಸ ನೀಡುವಂತೆ ಆಗ್ರಹಿಸಿರುವ ಬರಹವುಳ್ಳ ಮಾಸ್ಕ್ ಧರಿಸಿ ಗಮನ ಸೆಳೆದರು. ಮುಖಂಡರಾದ ಭಾಗ್ಯಮ್ಮ, ರುದ್ರಪ್ಪ, ಮಲ್ಲಮ್ಮ, ಜ್ಯೋತಿ, ಲಕ್ಷ್ಮೀ, ಪಕ್ಕೀರಪ್ಪ ಇನ್ನಿತರರಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.