ಬಳ್ಳಾರಿ: ಇಲ್ಲಿನ ಜಿಂದಾಲ್ ಸಮೂಹ ಸಂಸ್ಥೆಯಲ್ಲಿ ಕೊರೊನಾ ಅಬ್ಬರ ಮತ್ತೆ ಶುರುವಾಗಿದ್ದು, 12 ಮಂದಿ ನರ್ಸಿಂಗ್ ವಿದ್ಯಾರ್ಥಿಗಳಿಗೆ ಪಾಸಿಟಿವ್ ಕಂಡು ಬಂದಿದೆ.
ಕೋವಿಡ್ ಪಾಸಿಟಿವ್ ಬಂದ ವಿದ್ಯಾರ್ಥಿಗಳು ನೆರೆಯ ಆಂಧ್ರಪ್ರದೇಶ ಹಾಗೂ ಬಳ್ಳಾರಿಯ ವಿವಿಧ ಗ್ರಾಮದವರು ಎಂದು ತಿಳಿದು ಬಂದಿದೆ. ಇವರಲ್ಲಿ ಮೊನ್ನೆ 10 ಮಂದಿಗೆ ಹಾಗೂ ನಿನ್ನೆ ಇಬ್ಬರಿಗೆ ಕೋವಿಡ್ ದೃಢಪಟ್ಟಿದೆ.
ಸದ್ಯ ವಿದ್ಯಾರ್ಥಿಗಳಿಗೆ ತಗುಲಿರುವುದು ರೂಪಾಂತರ ಕೊರೊನಾವೇ? ಎಂಬ ಬಗ್ಗೆ ಜಿಲ್ಲಾ ಆರೋಗ್ಯ ಇಲಾಖೆಯಿಂದ ಸ್ಪಷ್ಟನೆ ಹೊರಬೀಳಬೇಕಿದೆ.