ETV Bharat / state

ತಂತ್ರಜ್ಞಾನದ ಮೂಲಕ ಶಿಕ್ಷಕರು ಬೋಧನಾ ಕೌಶಲ ವೃದ್ಧಿಸಿಕೊಳ್ಳಬೇಕು: ರಾಜ್ಯಪಾಲ ಗೆಹ್ಲೋಟ್ ಕರೆ

author img

By

Published : Jul 13, 2023, 10:31 PM IST

ಬಳ್ಳಾರಿ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ 11ನೇ ಘಟಿಕೋತ್ಸವ ನಡೆಯಿತು. ಕೃಷಿ ಸಾಧಕಿ ಕವಿತಾ ಮಿಶ್ರಾ, ಸಂಗೀತ ಕ್ಷೇತ್ರ ಸಾಧಕರಾದ ವೆಂಕಟೇಶ್ ಕುಮಾರ್, ಸಮಾಜ ಸೇವಕ ಹಿರೇಹಾಳ್ ಇಬ್ರಾಹಿಂ ಅವರಿಗೆ ರಾಜ್ಯಪಾಲರು ಥಾವರ್ ಚಂದ್ ಗೆಹ್ಲೋಟ್ ಗೌರವ ಡಾಕ್ಟರೇಟ್ ಪ್ರದಾನ ಮಾಡಿದರು.

Honorary doctorates awarded to three achievers
ರಾಜ್ಯಪಾಲರು ಥಾವರ್ ಚಂದ್ ಗೆಹ್ಲೋಟ್ ಅವರು ಸಾಧಕರಿಗೆ ಗೌರವ ಡಾಕ್ಟರೆಟ್ ಪ್ರದಾನ ಮಾಡಿದರು.
ತಂತ್ರಜ್ಞಾನದ ಮೂಲಕ ಶಿಕ್ಷಕರು ಬೋಧನಾ ಕೌಶಲ ವೃದ್ಧಿಸಿಕೊಳ್ಳಬೇಕು: ರಾಜ್ಯಪಾಲ ಗೆಹ್ಲೋಟ್

ಬಳ್ಳಾರಿ: ಶಿಕ್ಷಣ ಕ್ಷೇತ್ರದಲ್ಲಿ ತಂತ್ರಜ್ಞಾನ ಬಹಳಷ್ಟು ಸುಧಾರಣೆಯಾಗುತ್ತಿದೆ. ಕಾಲಕಾಲಕ್ಕೆ ಬದಲಾಗುವ ತಂತ್ರಜ್ಞಾನಗಳ ಬಗ್ಗೆ ಅಧ್ಯಯನ ಮಾಡಿ, ಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡು, ಶಿಕ್ಷಕರು ತಮ್ಮ ಬೋಧನಾ ಕೌಶಲ ವೃದ್ಧಿಸಿಕೊಳ್ಳಲು ಮುಂದಾಗಬೇಕು ಎಂದು ರಾಜ್ಯಪಾಲರು ಹಾಗೂ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಕುಲಾಧಿಪತಿಯೂ ಆದ ಥಾವರ್ ಚಂದ್ ಗೆಹ್ಲೋಟ್ ಹೇಳಿದರು.

ನಗರದ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ ಗುರುವಾರ ನಡೆದ 11ನೇ ವಾರ್ಷಿಕ ಘಟಿಕೋತ್ಸವದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಶಿಕ್ಷಣವು ಬದಲಾವಣೆಯ ಪ್ರೇರಕ ಶಕ್ತಿಯಾಗಿದೆ. ರಾಷ್ಟ್ರದ ಅಭಿವೃದ್ಧಿಯಲ್ಲಿ ವಿಶ್ವವಿದ್ಯಾಲಯಗಳು ಮಹತ್ವದ ಕೊಡುಗೆ ನೀಡುತ್ತಿವೆ. ಬದಲಾಗುತ್ತಿರುವ ಸಮಯ ಮತ್ತು ಸಂದರ್ಭಕ್ಕ ಅನುಸಾರವಾಗಿ ಹೊಸ ಹೊಸ ತಂತ್ರಜ್ಞಾನ ನವೀಕರಿಸಲು, ಪ್ರಾಯೋಗಿಕ, ಸಾಮಾಜಿಕ ಮತ್ತು ಹೊಸ ಸಂಶೋಧನೆ ಬಗ್ಗೆ ವಿದ್ಯಾರ್ಥಿಗಳಿಗೆ ಬೋಧಿಸಬೇಕೆಂದು ವಿಶ್ವವಿದ್ಯಾಲಯದ ಉಪನ್ಯಾಸಕರಿಗೆ ಮನವಿ ಮಾಡಿದರು.

ಭಾರತವು ಸ್ವಾತಂತ್ರ್ಯದ 75 ವರ್ಷಗಳನ್ನು ಪೂರೈಸಿ ಅಮೃತ ಕಾಲವನ್ನು ಪ್ರವೇಶಿಸಿದೆ. ದೇಶವು ಎಲ್ಲ ಕ್ಷೇತ್ರಗಳಲ್ಲಿ ಅಭೂತಪೂರ್ವ ಪ್ರಗತಿ ಸಾಧಿಸಿದೆ. ದೇಶದ ಆರ್ಥಿಕತೆಯು ಅತ್ಯಂತ ಬಲಿಷ್ಠವಾಗಿದೆ. ಇಂದು ನಮ್ಮ ಆರ್ಥಿಕತೆಯು ವಿಶ್ವ ಮಟ್ಟದಲ್ಲಿ 5 ನೇ ಸ್ಥಾನದಲ್ಲಿದೆ, ಇದನ್ನು 03 ನೇ ಸ್ಥಾನಕ್ಕೆ ತರಲು ಎಲ್ಲರ ಪರಿಶ್ರಮ ಮತ್ತು ಸಹಯೋಗ ಬೇಕಿದೆ ಎಂದು ಸಲಹೆ ನೀಡಿದರು.

ದೇಶದಲ್ಲಿ ನೈತಿಕತೆ ಬೆಳೆಸುವ ಜತೆಗೆ ಸಂಸ್ಕೃತಿ ಸಂರಕ್ಷಣೆ, ರಾಷ್ಟ್ರದ ಏಕತೆ-ಸಮಗ್ರತೆ, ಸಮಾಜದಲ್ಲಿ ಸಮಾನತೆ ಮತ್ತು ಸೌಹಾರ್ದತೆಯನ್ನು ಕಾಪಾಡುವಂತಹ ಶಿಕ್ಷಣವನ್ನು ಇಂದಿನ ಯುವ ಪೀಳಿಗೆಯು ಪಡೆದುಕೊಳ್ಳುವ ಅವಶ್ಯಕತೆ ಇದೆ .ಈ ವಿಶ್ವವಿದ್ಯಾಲಯವು ಕಲೆ ಮತ್ತು ಸಾಹಿತ್ಯದ ನಾಡಾದ ಐತಿಹಾಸಿಕ ಭೂಮಿಯಲ್ಲಿ ಸ್ಥಾಪಿಸಲ್ಪಟ್ಟಿದೆ. ಮಹಾನ್ ಚಕ್ರವರ್ತಿ ರಾಜ ಸಮಾಜವಾದಿ ಚಿಂತಕ ಸಾಮ್ರಾಟ್ ರಾಜ ಕೃಷ್ಣ ದೇವರಾಯ ಅವರ ಚಿಂತನೆಗಳನ್ನು ಅಳವಡಿಸಿಕೊಂಡಿದೆ ಎಂದು ಹೇಳಿದರು.

ಪರಿಸರದ ಅಸಮತೋಲನ ಇಂದು ಜಗತ್ತಿನ ಗಂಭೀರ ಸಮಸ್ಯೆಯಾಗಿದೆ. ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ. ಜಲ, ವಾಯು ಮತ್ತು ವನ ಸಂರಕ್ಷಣೆಯ ದಿಕ್ಕಿನಲ್ಲಿ ಆಸಕ್ತಿ ವಹಿಸಿ, ಸ್ವಚ್ಛ ಪರಿಸರ ನಿರ್ಮಾಣಕ್ಕೆ ಆದ್ಯತೆ ನೀಡುವ ಕೆಲಸ ಮಾಡಬೇಕು ಎಂದು ಈಗಾಗಲೇ ಎಲ್ಲ ವಿಶ್ವವಿದ್ಯಾನಿಲಯಗಳಿಗೆ ಪತ್ರ ಬರೆದು ತಿಳಿಸಲಾಗಿದೆ. ರಾಷ್ಟ್ರದ ಪ್ರಗತಿಗಾಗಿ ಎಲ್ಲ ವಿಶ್ವವಿದ್ಯಾಲಯಗಳು ಯವಜನತೆಯನ್ನು ಪ್ರೇರೇಪಿಸಬೇಕು ಎಂದು ಸೂಚಿಸಿದರು. ನವದೆಹಲಿಯ ಇಂಡಿಯನ್ ಕೌನ್ಸಿಲ್ ಆಫ್ ಸೋಷಿಯಲ್ ಸೈನ್ಸ್ ರಿಸರ್ಚ್‍ನ ಅಧ್ಯಕ್ಷ ಡಾ. ಜೆ. ಕೆ. ಬಜಾಜ್ ಅವರು ಘಟಿಕೋತ್ಸವ ಭಾಷಣ ಮಾಡಿದರು.

ಸಾಧಕರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ: ಕಾರ್ಯಕ್ರಮದಲ್ಲಿ ಕೃಷಿ ಸಾಧಕಿ ಕವಿತಾ ಮಿಶ್ರಾ, ಸಂಗೀತ ಕ್ಷೇತ್ರ ಸಾಧಕ ವೆಂಕಟೇಶ್ ಕುಮಾರ್, ಸಮಾಜ ಸೇವಕ ದಿ.ಹಿರೇಹಾಳ್ ಇಬ್ರಾಹಿಂ ಅವರಿಗೆ ಬಳ್ಳಾರಿಯ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ 11ನೇ ಘಟಿಕೋತ್ಸವದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಗೌರವ ಡಾಕ್ಟರೇಟ್ ಪದವಿಯನ್ನು ನೀಡಿ ಗೌರವಿಸಿದರು. ಸಂಗೀತ ಸಾಧಕ ವೆಂಕಟೇಶ ಕುಮಾರ್ ಅವರು ಸಮಾರಂಭಕ್ಕೆ ಗೈರಾಗಿದ್ದರು. ದಿ.ಹಿರೇಹಾಳ್ ಇಬ್ರಾಹಿಂ ಅವರಿಗೆ ಮರಣೋತ್ತರ ಗೌರವ ಡಾಕ್ಟರೇಟ್ ಪ್ರಶಸ್ತಿಯನ್ನು ಪ್ರದಾನ ಮಾಡಿದ್ದು, ಅವರ ಪುತ್ರ ದಾದಾ ಖಲಂದರ್ ಹಿರೇಹಾಳ್ ಗೌರವ ಡಾಕ್ಟರೇಟ್ ಪದವಿ ಸ್ವೀಕರಿಸಿದರು. ವಿವಿಯ ಬಯಲು ರಂಗಮಂದಿರದ ಆವರಣದಲ್ಲಿ ನಡೆದ 11ನೇ ಘಟಿಕೋತ್ಸವ ಸಮಾರಂಭದಲ್ಲಿ ಮೂವರಿಗೆ ಗೌರವ ಡಾಕ್ಟರೆಟ್ ಪ್ರದಾನ ಮಾಡಲಾಯಿತು.

ವಿದ್ಯಾರ್ಥಿಗಳಿಗೆ 52 ಚಿನ್ನದ ಪದಕ ಪ್ರದಾನ: ಘಟಿಕೋತ್ಸವದಲ್ಲಿ ಸ್ನಾತಕ ಹಾಗೂ ಸ್ನಾತಕೋತ್ತರದ ವಿವಿಧ ಭಾಗಗಳ 42 ವಿದ್ಯಾರ್ಥಿಗಳಿಗೆ 52 ಚಿನ್ನದ ಪದಕ ನೀಡಿ ಗೌರವಿಸಿಲಾಯಿತು. ವಿವಿಧ ವಿಭಾಗಗಳ 32 ಸಂಶೋಧನಾ ವಿದ್ಯಾರ್ಥಿಗಳಿಗೆ ಡಾಕ್ಟರೇಟ್ ಪದವಿ ಪ್ರಧಾನ ಮಾಡಲಾಯಿತು. ಖನಿಜ ಸಂಸ್ಕರಣ ವಿಭಾಗದ ರುಬಾನ್ ಎಲ್, ಔದ್ಯೋಗಿಕ ರಸಾಯನಶಾಸ್ತ್ರ ವಿಭಾಗದ ಹಜಿರಾಜಿ ಎ, ವಾಣಿಜ್ಯಶಾಸ್ತ್ರದ ರುಷಬ್ ಕುಮಾರ್ ಮೆಹ್ತಾ ಗೆ ತಲಾ ಮೂರು ಚಿನ್ನದ ಪದಕ ಪಡೆದರು.

ವಿವಿ ಆಡಳಿತ ಕಟ್ಟಡ ಉದ್ಘಾಟನೆ:ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ ಆಡಳಿತ ಕಟ್ಟಡದ ಮೊದಲನೇ ಮಹಡಿ, ಸೆಂಟರ್ ಆಫ್‌ ಎಕ್ಸಲೆನ್ಸ್ ಫಾರ್ ಮಲ್ಟಿಡಿಸಿಪ್ಲಿನರಿ ಅಡ್ವಾನ್ಸ್ ರಿಸರ್ಚ್ ಫೆಸಿಲಿಟಿ, ಸಾಮಾನ್ಯ ವಿದ್ಯಾರ್ಥಿಗಳ ವಸತಿ ನಿಲಯವನ್ನು ರಾಜ್ಯಪಾಲ ಶ್ರೀ ಥಾವರ್ ಚಂದ್ ಗೆಹ್ಲೋಟ್ ಉದ್ಘಾಟಿಸಿದರು, ಇದಕ್ಕೂ ಮುನ್ನ ಸ್ವಾಮಿ ವಿವೇಕಾನಂದರ ಪ್ರತಿಮೆ ಅನಾವರಣಗೊಳಿಸಿದರು. ಬಳಿಕ ವಿವಿ ಆವರಣದಲ್ಲಿ ಸಂಪಿಗೆ ಗಿಡಗಳನ್ನು ನೆಡಲಾಯಿತು. ಜಿಲ್ಲಾ ಉಸ್ತುವಾರಿ ಸಚಿವರಾದ ಬಿ ನಾಗೇಂದ್ರ,ಕುಲಪತಿ ಪ್ರೋ ಸಿದ್ದು ಪಿ ಆಲಗೂರು, ಜಿಲ್ಲಾಧಿಕಾರಿ ಪವನ್ ಕುಮಾರ್ ಮಾಲಪಾಟಿ, ಜಿಪಂ ಸಿಇಒ ರಾಹುಲ್ ಸಂಕನೂರ ಹಾಜರಿದ್ದರು.

ಇದನ್ನೂಓದಿ:Chandrayaan 3: ಚಂದ್ರಯಾನ ಉಡ್ಡಯನಕ್ಕೆ ಕ್ಷಣಗಣನೆ; ತಿರುಪತಿ ದೇಗುಲದಲ್ಲಿ ಪ್ರಾರ್ಥನೆ ಸಲ್ಲಿಸಿದ ವಿಜ್ಞಾನಿಗಳ ತಂಡ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.