ETV Bharat / state

ಮೂಡಲಗಿಯಲ್ಲಿ ಯೂಟ್ಯೂಬ್ ಚಾನಲ್ ಸಂಪಾದಕನ ಬರ್ಬರ ಹತ್ಯೆ! - ಬೆಳಗಾವಿ ಕೊಲೆ ಸುದ್ದಿ

ಯೂಟ್ಯೂಬ್ ಚಾನಲ್ ಸಂಪಾದಕನಾಗಿ ಕೆಲಸ‌ ಮಾಡುತ್ತಿದ್ದ ವ್ಯಕ್ತಿಯನ್ನು ತಡರಾತ್ರಿ ಅಪರಿಚಿತ ದುಷ್ಕರ್ಮಿಗಳು ಮನೆಯ ಪಕ್ಕದಲ್ಲೇ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.‌

youtube-channel-editor-murdered-in-belagavi

author img

By

Published : Jun 11, 2021, 3:04 PM IST

ಬೆಳಗಾವಿ: ಯೂಟ್ಯೂಬ್ ಚಾನಲ್ ಸಂಪಾದಕರಾಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೋರ್ವನನ್ನು ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿದ ಘಟನೆ ಚುನಿಮಟ್ಟಿ ಗ್ರಾಮದಲ್ಲಿ ನಿನ್ನೆ ತಡರಾತ್ರಿ ನಡೆದಿದೆ. ಮೂಡಲಗಿ ತಾಲೂಕಿನ‌ ಚುನಿಮಟ್ಟಿ ಗ್ರಾಮದ ಶಿವಾನಂದ ಕಚ್ಯಾಗೋಳ (32) ಕೊಲೆಯಾದ ವ್ಯಕ್ತಿ.

ಈತ ಮೂಡಲಗಿ ತಾಲೂಕಿನಲ್ಲಿ ಯೂಟ್ಯೂಬ್ ಚಾನಲ್ ಸಂಪಾದಕನಾಗಿ ಕೆಲಸ‌ ಮಾಡುತ್ತಿದ್ದ ಎನ್ನಲಾಗಿದೆ. ನಿನ್ನೆ ತಡರಾತ್ರಿ ಅಪರಿಚಿತ ದುಷ್ಕರ್ಮಿಗಳು ಮನೆಯ ಪಕ್ಕದಲ್ಲೇ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.‌

ಯೂಟ್ಯೂಬ್ ಚಾನಲ್ ಸಂಪಾದಕನ ಹತ್ಯೆ

ಆತನ ಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಕೊಲೆಯಾದ ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಘಟಪ್ರಭಾ ಪೋಲಿಸರು ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.