ETV Bharat / state

ದಾರಿಯಲ್ಲಿ ಸಿಕ್ಕ ಹಣ  ಮರಳಿಸಿ ಪ್ರಾಮಾಣಿಕತೆ ಮೆರೆದ ಯುವಕರು

ರಸ್ತೆಯಲ್ಲಿ ಸಿಕ್ಕ 22 ಸಾವಿರ ನಗದು ರೂ. ವನ್ನ ಮರಳಿ ಮಾಲೀಕರಿಗೆ ಒಪ್ಪಿಸುವ ಮೂಲದ ಇಬ್ಬರು ಯುವಕರು ಪ್ರಾಮಾಣಿಕತೆ ಮೆರೆದಿದ್ದಾರೆ.

author img

By

Published : Mar 22, 2019, 4:48 AM IST

ದಾರಿಯಲ್ಲಿ ಸಿಕ್ಕ ಹಣವನ್ನು ಮರಳಿಸಿ ಪ್ರಾಮಾಣಿಕತೆ ಮೆರೆದ ಯುವಕರು

ಚಿಕ್ಕೋಡಿ : ದಾರಿಯಲ್ಲಿ ಸಿಕ್ಕ 22 ಸಾವಿರ ನಗದನ್ನುಮಾಲೀಕರಿಗೆ ಮರಳಿಸುವ ಮೂಲಕ ಇಬ್ಬರು ಯುವಕರು ಪ್ರಾಮಾಣಿಕತೆ ಮೆರೆದಿದ್ದಾರೆ.

ನಿಪ್ಪಾಣಿ ತಾಲೂಕಿನ ನಾಗನೂರ ಗ್ರಾಮದ ಸಾಮಾಜಿಕ ಕಾರ್ಯಕರ್ತ ಅಮೃತ ಢೋಲೆ ಮತ್ತು ಪತ್ರಕರ್ತ ದಾದಾ ಜನವಾಡೆ ಅವರಿಗೆ ರಸ್ತೆಯಲ್ಲಿ 22 ಸಾವಿರ ನಗದು ಸಿಕ್ಕಿದ್ದು ಮಾಲೀಕರಿಗಾಗಿ ಸುತ್ತಮುತ್ತ ಶೋಧಿಸಿದ್ದಾರೆ.

ಹಣ ಕಳೆದುಕೊಂಡವರು ಇದೇ ಮಾರ್ಗವಾಗಿ ಬರಬಹುದು ಎಂದು ಭಾವಿಸಿ ಅರ್ಧ ಗಂಟೆ ಅಲ್ಲಿಯೇ ಕುಳಿತು ಕಾದು, ಹಣ ಕಳೆದುಕೊಂಡ ನಿಪ್ಪಾಣಿ ತಾಲೂಕಿನ ಜತ್ರಾ ಗ್ರಾಮದ ಬಾಳು ಕೋಳಿ ಎಂಬಾತ ಬಂದಾಗ ಅವರನ್ನು ವಿಚಾರಿಸಿ ಹೆಚ್ಚಿನ ಮಾಹಿತಿ ಪಡೆದ ಬಳಿಕ ನಗರಸಭೆ ಮಾಜಿ ಸದಸ್ಯ ಧನಾಜಿ ನಿರ್ಮಳೆ ಮತ್ತು ಬಾಳಾಸಾಹೇಬ ಗಡಕರಿ ಅವರ ಸಮ್ಮುಖದಲ್ಲಿ ಹಣ ಮರಳಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ದಾರಿಯಲ್ಲಿ ಸಿಕ್ಕ ಹಣವನ್ನು ಮರಳಿಸಿ ಪ್ರಾಮಾಣಿಕತೆ ಮೆರೆದ ಯುವಕರು ಚಿಕ್ಕೋಡಿ : ದಾರಿಯಲ್ಲಿ ಸಿಕ್ಕ 22 ಸಾವಿರ ನಗದನ್ನು ಮಾಲೀಕರಿಗೆ ಮರಳಿಸುವ ಮೂಲಕ ಇಬ್ಬರು ಯುವಕರು ಪ್ರಾಮಾಣಿಕತೆ ಮೆರೆದಿದ್ದಾರೆ. ನಿಪ್ಪಾಣಿ ತಾಲೂಕಿನ ನಾಗನೂರ ಗ್ರಾಮದ ಸಾಮಾಜಿಕ ಕಾರ್ಯಕರ್ತ ಅಮೃತ ಢೋಲೆ ಮತ್ತು ಪತ್ರಕರ್ತ ದಾದಾ ಜನವಾಡೆ ಅವರು ತಮ್ಮ ಕಾರ್ಯ ನಿಮಿತ್ಯ ನಗರಕ್ಕೆ ಬಂದಿದ್ದರು. ಇಲ್ಲಿನ ಮಾಣಿಕನಗರದಲ್ಲಿ ಹೋಗುವಾಗ  ರಸ್ತೆಯಲ್ಲಿ 22 ಸಾವಿರ ನಗದು ಕಂಡು ಆ ಹಣವನ್ನು ಎತ್ತಿಕೊಂಡು ಮಾಲಿಕರಿಗಾಗಿ ಸುತ್ತಮುತ್ತ ಶೋಧಿಸಿದರು. ಆದರೆ, ನಿಜವಾದ ಮಾಲಿಕರು ಸಿಗಲಿಲ್ಲ. ಹಣ ಕಳೆದುಕೊಂಡವರು ಇದೇ ಮಾರ್ಗವಾಗಿ ಬರಬಹುದು ಎಂದು ಭಾವಿಸಿ ಅರ್ಧ ಗಂಟೆ ಅಲ್ಲಿಯೇ ಕುಳಿತು ಕಾದರು. ಆಗ ನಿಪ್ಪಾಣಿ ತಾಲೂಕಿನ ಜತ್ರಾ ಗ್ರಾಮದ ಬಾಳು ಕೋಳಿ ಎಂಬಾತ ದ್ವಿಚಕ್ರ ವಾಹನದಲ್ಲಿ ಅತ್ತಿಂದಿತ್ತ, ಇತ್ತಿಂದತ್ತ ಸಂಚರಿಸುತ್ತಿದ್ದರು. ಅವರನ್ನು ತಡೆದು ವಿಚಾರಿಸಿದಾಗ ಹಣ ಕಳೆದುಕೊಂಡಿದ್ದಾಗಿ ಆ ಯುವಕ ಹೇಳಿದ. ಆಗ ಅವರನ್ನು ವಿಚಾರಿಸಿ ಹೆಚ್ಚಿನ ಮಾಹಿತಿ ಪಡೆದ ಬಳಿಕ ಯುವಕರಿಬ್ಬರು ನಗರಸಭೆ ಮಾಜಿ ಸದಸ್ಯ ಧನಾಜಿ ನಿರ್ಮಳೆ ಮತ್ತು ಬಾಳಾಸಾಹೇಬ ಗಡಕರಿ ಅವರ ಸಮ್ಮುಖದಲ್ಲಿ ಹಣ ಕಳೆದುಕೊಂಡ ಯುವಕರಿಗೆ ಹಣ ಮರಳಿಸಿ ಅಮೃತ ಢೋಲೆ ಮತ್ತು ದಾದಾ ಜನವಾಡೆ ಎಂಬವರು ಎಲ್ಲರ ಮೆಚ್ವುಗೆಗೆ ಪಾತ್ರರಾಗಿದ್ದಾರೆ. ಸಂಜಯ ಕೌಲಗಿ ಚಿಕ್ಕೋಡಿ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.