ಚಿಕ್ಕೋಡಿ: ರಾಯಬಾಗ ತಾಲೂಕಿನ ನಿಪನ್ಯಾಳ ಗ್ರಾಮದ ಶ್ರೀ ಯಲ್ಲಮ್ಮ ದೇವಿಯ ಜಾತ್ರೆ ಅದ್ದೂರಿಯಾಗಿ ನೆರವೇರಿತು.
ಸುತ್ತಲೂ ಕೂಡಿರುವ ಇಪ್ಪತ್ತು ಹಳ್ಳಿಯಗಳನ್ನ ಒಳಗೊಂಡ ಗ್ರಾಮ ದೇವತೆ ಶ್ರೀ ಯಲ್ಲಮ್ಮ ದೇವಿ, ಈ ಗ್ರಾಮದ ದೇವತೆಯಾಗಿ ಜನರನ್ನು ಹಗಲು ಇರುಳು ಕಾಯುತ್ತಿರುತ್ತಾಳೆ ಎಂದು ಭಕ್ತಾದಿಗಳ ನಂಬಿಕೆ.
ಈ ಜಾತ್ರೆ ವಿಶೇಷ ಅಂದರೆ, ಪ್ರತಿ ವರ್ಷದಂತೆ ನಿಪನ್ಯಾಳ ಗ್ರಾಮದಲ್ಲಿ ಶ್ರೀ ಯಲ್ಲಮ್ಮ ದೇವಿ ಜಾತ್ರೆಯು ಸಾವಿರಾರು ಭಕ್ತರು ಸೇರಿ ಸಡಗರ ಸಂಭ್ರಮದಿಂದ ಆಚರಿಸುತ್ತಾ ಬಂದಿದ್ದಾರೆ.
ಗ್ರಾಮದ ಪ್ರಮುಖ ಬೀದಿಗಳಲ್ಲಿ ದೇವಿಯನ್ನು ಮೆರೆವಣಿಗೆ ಗ್ರಾಮದ ಜನರು ಸಂಭ್ರಮಪಟ್ಟರು. ಇನ್ನು ಯಲ್ಲಮ್ಮ ದೇವಿ ಪೂಜಾರಿ ಶಿದ್ದಪ್ಪ, ಕೆಂಪ್ಪಣ್ಣ ನಾಯಕ ಕೊಂಡ ಹಾಯ್ದು ಸಂಪ್ರದಾಯದಂತೆ ದೇವಿಯ ಕೃಪೆಗೆ ಪಾತ್ರರಾದರು.