ಅಥಣಿ: ವಿದ್ಯುತ್ ಇಲಾಖೆಯ ಲಿಂಕ್ ಲೈನ್ ಕೆಲಸ ಮಾಡುವ ವೇಳೆ ವಿದ್ಯುತ್ ಪ್ರವಹಿಸಿ ಇಬ್ಬರು ಕಾರ್ಮಿಕರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಬಳ್ಳಿಗೇರಿ ಗ್ರಾಮದ ಹೊರವಲಯದಲ್ಲಿ ನಡೆದಿದೆ.
ದಿನಗೂಲಿ ಆಧಾರದ ಮೇಲೆ ಕೆಇಬಿ ಕೆಲಸಕ್ಕೆ ಬಂದಿದ್ದ ರಾಯಭಾಗ ತಾಲೂಕಿನ ಹಿಡಕಲ್ ಗ್ರಾಮದ ಹಣಮಂತ ಹಾಲಪ್ಪ ಮಗದುಮ್ (30) ಹಾಗೂ ಅಶೋಕ ಮಾಳಿ (35) ಮೃತ ಕಾರ್ಮಿಕರು.
ಕೆಇಬಿ ನಿರ್ಲಕ್ಷ್ಯದಿಂದ ಸಾವು ಸಂಭವಿಸಿದೆ. ಇದಕ್ಕೆ ನೇರ ಹೊಣೆ ವಿದ್ಯುತ್ ಇಲಾಖೆ ಅಧಿಕಾರಿಗಳೇ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಅಥಣಿ ವಿದ್ಯುತ್ ಇಲಾಖೆ ಕಾರ್ಯನಿರ್ವಾಹಕ ಅಧಿಕಾರಿ ಸಿಸಿ ಯಂಕಂಚಿ ಘಟನೆ ಬಗ್ಗೆ ಸ್ಪಷ್ಟನೆ ನೀಡಿದ್ದು, ಇಲಾಖೆಯಿಂದ ಮುಂಜಾಗೃತಾ ಕ್ರಮಗಳನ್ನು ಅನುಸರಿಸಲಾಗಿತ್ತು. ವಿದ್ಯುತ್ ಅವಘಡ ಹೇಗೆ ಸಂಭವಿಸಿದೆ ಎಂಬುದು ನಮಗೂ ಕೂಡ ಯಕ್ಷ ಪ್ರಶ್ನೆಯಾಗಿದೆ. ಇದರ ಬಗ್ಗೆ ಪೂರ್ಣ ತನಿಖೆ ಮಾಡಲಾಗುವುದು ಎಂದು ಈಟಿವಿ ಭಾರತಕ್ಕೆ ದೂರವಾಣಿ ಮೂಲಕ ಪ್ರತಿಕ್ರಿಯೆ ನೀಡಿದರು.
(ಓದಿ: ವಿದ್ಯುತ್ ಶಾಕ್ಗೆ ಬಾಲಕ - ನಾಲ್ವರು ರೈತರು ಸೇರಿ ಐವರು ಬಲಿ: ಮುಗಿಲು ಮುಟ್ಟಿದ ಪೋಷಕರ ಆಕ್ರಂದನ!)