ಬೆಳಗಾವಿ : ಯಾರು ಭಾರತೀಯ ಜನತಾ ಪಕ್ಷದ ಸಿದ್ದಾಂತ ಒಪ್ಪಿಕೊಂಡು ಬರುತ್ತಾರೋ, ಅಂತವರನ್ನು ಸ್ವಾಗತಿಸಲಾಗುವುದು. ಬಿಜೆಪಿ ದೇಶದ ದೊಡ್ಡ ರೈಲು ಇದ್ದಹಾಗೆ. ಹತ್ತುವವರು ಇಳಿಯುವರು ಇರುತ್ತಾರೆ ಎಂದು ಕೇಂದ್ರ ಸಚಿವ ಸುರೇಶ್ ಅಂಗಡಿ ಹೇಳಿದ್ದಾರೆ.
ಅನರ್ಹ ಶಾಸಕರು ಬಿಜೆಪಿಗೆ ಬರುತ್ತಾರಾ ಎಂಬ ಪ್ರಶ್ನೆಗೆ ಉತ್ತರಿಸಿ, ಬಿಜೆಪಿ ಪಕ್ಷದ ಸಿದ್ದಾಂತ ಒಪ್ಪಿಕೊಂಡು ಬರುವುದಾದರೆ ನಾವು ಸ್ವಾಗತ ಮಾಡುತ್ತೇವೆ. ಈ ಪಕ್ಷಕ್ಕೆ ಬರುವುವವರು ಹೋಗುವವರು ಇದ್ದೇ ಇರುತ್ತಾರೆ ಎಂದರು.
ರಾಜಕಾರಣ ಮಾಡಬೇಕಾದರೆ ಜೈಲಿಗೆ ಹೋಗಬೇಕಾದ ಅವಶ್ಯಕತೆ ಇಲ್ಲ. ಜೈಲಿಗೆ ಹೋದ ತಕ್ಷಣ ಆರೋಪಿಯನ್ನು ಅಪರಾಧಿ ಎನ್ನಲು ಸಾಧ್ಯವಿಲ್ಲ. ಅಪರಾಧಿ ಹಾಗೂ ನಿರಪರಾಧಿ ಎಂದು ಕೋರ್ಟ್ ತೀರ್ಮಾನ ಮಾಡಬೇಕಾಗುತ್ತೆ. ಅನೇಕ ಜನ ಪಾರ್ಲಿಮೆಂಟಿನಲ್ಲಿ ಇರುವವರು ಜೈಲಿನಲ್ಲಿದ್ದಾರೆ. ಜೈಲಿನಲ್ಲಿ ಇರಬೇಕಾದವರು ಚುನಾವಣೆಯಲ್ಲಿ ಆಯ್ಕೆ ಆಗಿದ್ದಾರೆ. ಎಲ್ಲವೂ ಕಾನೂನು ನಿರ್ಧಾರ ಮಾಡಬೇಕು ಎಂದರು.